ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕನ ಬಂಧನ
ಮೈಸೂರು

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕನ ಬಂಧನ

June 25, 2018

ಮೈಸೂರು: ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ್ದ ಯುವಕನನ್ನು ಕುವೆಂಪು ನಗರ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ರಾಮಕೃಷ್ಣನಗರದ ನಿವಾಸಿ ಗಣೇಶ್ ಅವರ ಪುತ್ರ ರವಿಕುಮಾರ್(25) ಬಂಧಿತ ಯುವಕ. ಈತ ಅಪ್ರಾಪ್ತೆಗೆ ದೂರದ ಸಂಬಂಧಿಯಾಗಿದ್ದು, ಆಕೆಗೆ ಆಮಿಷವೊಡ್ಡಿ ಅತ್ಯಾಚಾರ ವೆಸಗಿ, ಪರಾರಿಯಾಗಿದ್ದ ಎನ್ನಲಾಗಿದೆ. ಈ ಸಂಬಂಧ ಯುವತಿಯ ಪೋಷಕರು ಲಕ್ಷ್ಮೀಪುರಂ ಠಾಣೆಗೆ ದೂರು ನೀಡಿದ್ದರು.

ಆದರೆ, ಕೃತ್ಯ ನಡೆದಿದ್ದು, ರಾಮಕೃಷ್ಣ ನಗರದ ಯುವಕನ ಮನೆಯಲ್ಲಾದ್ದರಿಂದ ಪ್ರಕರಣವನ್ನು ಲಕ್ಷ್ಮೀಪುರಂ ಠಾಣೆ ಪೊಲೀಸರು, ಕುವೆಂಪುನಗರ ಠಾಣೆಗೆ ವರ್ಗಾಯಿಸಿದ್ದರು. ತನಿಖೆ ನಡೆಸಿ, ಶನಿವಾರ ರವಿಕುಮಾರ್‍ನನ್ನು ಬಂಧಿಸಿ ದ್ದಾರೆ. ಈ ಸಂಬಂಧ ಕುವೆಂಪುನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Translate »