ಮೈಸೂರು: ಪ್ರತ್ಯೇಕ ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಚಾಮರಾಜ ಜೋಡಿ ರಸ್ತೆಯ ಶಾಂತಲಾ ಚಿತ್ರಮಂದಿರದ ಸಿಗ್ನಲ್ ಬಳಿ ಮೇ19ರಂದು ಬೆಂಗಳೂರಿನ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಗೊಲ್ಲಗೇರಿಯ ನಿವಾಸಿ ಮನೋಜ್ (22), ಇಟ್ಟಿಗೆಗೂಡಿನ ನಿವಾಸಿ ಹರ್ಷಿತಾಗೌಡ (25) ಹಾಗೂ ವೀಣೆಶೇಷಣ್ಣ ರಸ್ತೆಯ ನಿವಾಸಿ ಮಹೇಶ್‍ಕುಮಾರ್ (24) ಅವರನ್ನು ಕೆ.ಆರ್.ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಚಂದು ಎಂಬುವವನನ್ನು ಬಂಧಿಸಲಾಗಿತ್ತು. ಮತ್ತೊಂದು ಪ್ರಕರಣದಲ್ಲಿ ಮದ್ಯ ಸೇವಿಸಿ ಕುವೆಂಪುನಗರದ ಜ್ಞಾನಗಂಗಾ ಶಾಲೆಯ ಸಮೀಪ…
ಪಾಲಿಕೆ ಅಧಿಕಾರಿಗಳ ಸೋಗಿನಲ್ಲಿ ದೋಚಿದ ಖದೀಮರು: ತನಿಖೆ ಚುರುಕು
June 26, 2018ಮೈಸೂರು: ಪಾಲಿಕೆ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿರುವ ಪ್ರಕರಣದ ತನಿಖೆಯನ್ನು ಮೈಸೂರಿನ ಕುವೆಂಪುನಗರ ಠಾಣೆ ಪೊಲೀಸರು ಚುರುಕುಗೊಳಿಸಿದ್ದಾರೆ. ಕುವೆಂಪುನಗರ ಎನ್ ಬ್ಲಾಕ್, ಕೆಎಸ್ ಆರ್‍ಟಿಸಿ ಡಿಪೋ ರಸ್ತೆಯಲ್ಲಿರುವ ಕೆ.ಜೆ. ಲೀಲಾದೇವಿ ಅವರ ಮನೆಗೆ ಜೂ.22 ರಂದು ಪಾಲಿಕೆ ಅಧಿಕಾರಿಗಳೆಂದು ಹೇಳಿ ಕೊಂಡು ಬಂದಿದ್ದ ಇಬ್ಬರು ಖದೀಮರು, ಮನೆಯನ್ನು ಅಳತೆ ಮಾಡಿ, ಆಸ್ತಿ ಕಾರ್ಡ್ ನೀಡುವುದಾಗಿ ನಂಬಿಸಿ, ಮನೆಯ ಮಾಲೀಕರಾದ ಲೀಲಾದೇವಿ ಹಾಗೂ ಕೆಲಸದಾಕೆ ಮಂಗಳಮ್ಮ ಅವರನ್ನು ಟೆರೇಸ್‍ಗೆ ಕರೆದೊಯ್ದು, ಅದೇ ಸಮಯಕ್ಕೆ…
ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕನ ಬಂಧನ
June 25, 2018ಮೈಸೂರು: ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ್ದ ಯುವಕನನ್ನು ಕುವೆಂಪು ನಗರ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರಾಮಕೃಷ್ಣನಗರದ ನಿವಾಸಿ ಗಣೇಶ್ ಅವರ ಪುತ್ರ ರವಿಕುಮಾರ್(25) ಬಂಧಿತ ಯುವಕ. ಈತ ಅಪ್ರಾಪ್ತೆಗೆ ದೂರದ ಸಂಬಂಧಿಯಾಗಿದ್ದು, ಆಕೆಗೆ ಆಮಿಷವೊಡ್ಡಿ ಅತ್ಯಾಚಾರ ವೆಸಗಿ, ಪರಾರಿಯಾಗಿದ್ದ ಎನ್ನಲಾಗಿದೆ. ಈ ಸಂಬಂಧ ಯುವತಿಯ ಪೋಷಕರು ಲಕ್ಷ್ಮೀಪುರಂ ಠಾಣೆಗೆ ದೂರು ನೀಡಿದ್ದರು. ಆದರೆ, ಕೃತ್ಯ ನಡೆದಿದ್ದು, ರಾಮಕೃಷ್ಣ ನಗರದ ಯುವಕನ ಮನೆಯಲ್ಲಾದ್ದರಿಂದ ಪ್ರಕರಣವನ್ನು ಲಕ್ಷ್ಮೀಪುರಂ ಠಾಣೆ ಪೊಲೀಸರು, ಕುವೆಂಪುನಗರ ಠಾಣೆಗೆ ವರ್ಗಾಯಿಸಿದ್ದರು. ತನಿಖೆ ನಡೆಸಿ,…
ಪತ್ನಿ ಕುತ್ತಿಗೆ ಕಡಿಯಲೆತ್ನಿಸಿದ ಪತಿ ಬಂಧನ
June 20, 2018ಮೈಸೂರು: ಕ್ಷುಲ್ಲಕ ಕಾರಣಕ್ಕೆ ಮಚ್ಚಿನಿಂದ ಪತ್ನಿ ಕುತ್ತಿಗೆ ಕಡಿಯಲೆತ್ನಿಸಿದ ವ್ಯಕ್ತಿಯನ್ನು ಕುವೆಂಪುನಗರ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಮೈಸೂರಿನ ರಾಮಕೃಷ್ಣನಗರ ‘ಐ’ ಬ್ಲಾಕ್ ನಿವಾಸಿ ಅಂಕನಾಯಕ ಬಂಧಿತ ಆರೋಪಿ. ಟ್ರಾಕ್ಟರ್ ಓಡಿಸುತ್ತಿದ್ದ ಆತ ಭಾನು ವಾರ ರಾತ್ರಿ ಕುಡಿದು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಮಚ್ಚಿನಿಂದ ಪತ್ನಿ ಶ್ರೀಮತಿ ಮಂಜುಳಾರ ಕುತ್ತಿಗೆ ಭಾಗಕ್ಕೆ ಮಚ್ಚಿ ನಿಂದ ಹೊಡೆದು, ಗಾಯಗೊಳಿಸಿದ್ದ. ತಕ್ಷಣ ಅವರನ್ನು ಕುವೆಂಪುನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಮಂಜುಳಾ ಅವರು ನೀಡಿದ ದೂರಿನನ್ವಯ ಪ್ರಕರಣ…