ಪತ್ನಿ ಕುತ್ತಿಗೆ ಕಡಿಯಲೆತ್ನಿಸಿದ ಪತಿ ಬಂಧನ
ಮೈಸೂರು

ಪತ್ನಿ ಕುತ್ತಿಗೆ ಕಡಿಯಲೆತ್ನಿಸಿದ ಪತಿ ಬಂಧನ

June 20, 2018

ಮೈಸೂರು: ಕ್ಷುಲ್ಲಕ ಕಾರಣಕ್ಕೆ ಮಚ್ಚಿನಿಂದ ಪತ್ನಿ ಕುತ್ತಿಗೆ ಕಡಿಯಲೆತ್ನಿಸಿದ ವ್ಯಕ್ತಿಯನ್ನು ಕುವೆಂಪುನಗರ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಮೈಸೂರಿನ ರಾಮಕೃಷ್ಣನಗರ ‘ಐ’ ಬ್ಲಾಕ್ ನಿವಾಸಿ ಅಂಕನಾಯಕ ಬಂಧಿತ ಆರೋಪಿ. ಟ್ರಾಕ್ಟರ್ ಓಡಿಸುತ್ತಿದ್ದ ಆತ ಭಾನು ವಾರ ರಾತ್ರಿ ಕುಡಿದು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಮಚ್ಚಿನಿಂದ ಪತ್ನಿ ಶ್ರೀಮತಿ ಮಂಜುಳಾರ ಕುತ್ತಿಗೆ ಭಾಗಕ್ಕೆ ಮಚ್ಚಿ ನಿಂದ ಹೊಡೆದು, ಗಾಯಗೊಳಿಸಿದ್ದ.

ತಕ್ಷಣ ಅವರನ್ನು ಕುವೆಂಪುನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಮಂಜುಳಾ ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ಕೊಂಡಿದ್ದ ಕುವೆಂಪುನಗರ ಠಾಣೆ ಪೊಲೀಸರು, ಸೋಮವಾರ ಅಂಕ ನಾಯಕನನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Translate »