ಶೈಕ್ಷಣ ಕ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ,ಕುಡಿಯುವ ನೀರು ಪ್ರತ್ಯೇಕ ಪೈಪ್‍ಲೈನ್ ಕಾಮಗಾರಿ ಶೀಘ್ರ ಆರಂಭ
ಚಾಮರಾಜನಗರ

ಶೈಕ್ಷಣ ಕ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ,ಕುಡಿಯುವ ನೀರು ಪ್ರತ್ಯೇಕ ಪೈಪ್‍ಲೈನ್ ಕಾಮಗಾರಿ ಶೀಘ್ರ ಆರಂಭ

June 20, 2018

ಚಾಮರಾಜನಗರ: ಹಿಂದುಳಿದ ವರ್ಗದವರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡು ವುದರ ಜೊತೆಗೆ ಸರ್ಕಾರ ದಿಂದ ದೊರೆಯುವ ಸೌಲಭ್ಯಗಳು ಹಾಗೂ ಸಾಲವನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ ಫಲಾನುಭವಿಗಳಿಗೆ ನೇರವಾಗಿ ತಲುಪಿಸಲು ಆದ್ಯತೆ ನೀಡುವುದಾಗಿ ಹಿಂದು ಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನ ದಲ್ಲಿ ಮಂಗಳವಾರ ನಡೆದ ‘ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೂತನ ಸಚಿವರಾಗಿರುವ ತಾವು ಯಾವು ದಕ್ಕೆ ಆದ್ಯತೆ ನೀಡುತ್ತೀರಿ ಎಂಬ ಸುದ್ದಿ ಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಲ್ಲದ್ದಕ್ಕೂ ಶಿಕ್ಷಣ ಮುಖ್ಯ ಎಂಬುದು ಗೊತ್ತು. ಹೀಗಾಗಿ ನಾನು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ಹಿಂದು ಳಿದ ಸಮುದಾಯದವರಲ್ಲಿ ಶಿಕ್ಷಣದ ಪ್ರಮಾಣವನ್ನು ಹೆಚ್ಚಿಸಲು ಆದ್ಯತೆ ನೀಡು ತ್ತೇನೆ. ಇದಲ್ಲದೇ ಸರ್ಕಾರದ ಸವಲತ್ತು ಗಳು, ಸಾಲ-ಸೌಲಭ್ಯಗಳು ಮಧ್ಯವರ್ತಿ ಗಳು ಇಲ್ಲದೆ ಫಲಾನುಭವಿಗಳಿಗೆ ನೇರ ವಾಗಿ ತಲುಪಬೇಕು. ಈ ನಿಟ್ಟಿನಲ್ಲಿ ನಾನು ಕಾರ್ಯ ನಿರ್ವಹಿಸುತ್ತೇನೆ ಎಂದರು.

ಪ್ರತ್ಯೇಕ ಪೈಪ್‍ಲೈನ್: ಟಿ.ನರಸಿಪುರ ದಿಂದ ಚಾಮರಾಜನಗರಕ್ಕೆ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಪೈಪ್ ಲೈನ್ ದುರಸ್ಥಿಗೊಂಡಿರುವುದರಿಂದ ನೀರು ಪೂರೈಕೆಯಲ್ಲಿ ಆಗಾಗ್ಗೆ ವ್ಯತ್ಯಯ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ಹೊಸ ಪೈಪ್‍ಲೈನ್ ವ್ಯವಸ್ಥೆ ಮಾಡಲು 8 ಕೋಟಿ ರೂ. ಬಿಡುಗಡೆ ಆಗಿದೆ. ತಕ್ಷಣದಲ್ಲಿಯೇ ಕಾಮಗಾರಿ ಆರಂಭವಾಗಲಿದೆ ಎಂದರು.

ಯಾರ ದಾಸ್ಯಕ್ಕೂ ಒಳಗಾಗೊಲ್ಲ: ನಗರ ದಲ್ಲಿ ನಡೆಯುತ್ತಿರುವ ಅಗಲೀಕರಣ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕೆಲವು ತೊಡ ಕುಗಳು ಉಂಟಾಗಿದೆ. ಕೆಲವರು ನ್ಯಾಯಾ ಲಯದ ಮೆಟ್ಟಿಲು ಏರಿದ್ದಾರೆ. ಹೀಗಾಗಿ ಕಾಮಗಾರಿ ವಿಳಂಬ ಆಗುತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ, ದಳ ಎಂಬುದು ಬರುವುದಿಲ್ಲ. ನಾನು ಯಾರ ದಾಸ್ಯಕ್ಕೂ ಒಳಗಾಗುವುದಿಲ್ಲ. ಅಭಿವೃದ್ಧಿಯೇ ಮುಖ್ಯ ಎಂದು ಮತ್ತೊಂದು ಪ್ರಶ್ನೆಗೆ ಸಚಿವ ಪುಟ್ಟರಂಗಶೆಟ್ಟಿ ಉತ್ತರಿಸಿದರು. ಇನ್ನೆಷ್ಟು ತಿಂಗಳಿನಲ್ಲಿ ಅಥವಾ ಇನ್ನೆಷ್ಟು ವರ್ಷದಲ್ಲಿ ನಗರದ ಕಾಮಗಾರಿಗಳು ಮುಕ್ತಾಯ ಆಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಪುಟ್ಟರಂಗಶೆಟ್ಟಿ, ಅಧಿಕಾರಿಗಳ ಸಭೆ ನಡೆಸಿ ಅವರಿಂದ ಮಾಹಿತಿ ಪಡೆದು ಮತ್ತೊಂದು ದಿನ ಇದಕ್ಕೆ ಉತ್ತರ ನೀಡು ವುದಾಗಿ ಜಾರಿಕೊಂಡರು.

ಜನರಲ್ಲಿ ಜಾಗೃತಿ ಬರಬೇಕು: ಶೌಚಾಲಯದ ಮಹತ್ವ ಜನರಿಗೆ ತಿಳಿಯಬೇಕು. ಆಗ ಮಾತ್ರ ಬಯಲು ಶೌಚ ಮುಕ್ತ ಜಾರಿ ಆಗಲು ಸಾಧ್ಯ. ಇದರ ಜವಾಬ್ದಾರಿಯನ್ನು ಸ್ಥಳೀಯ ಪಂಚಾಯಿತಿಯವರು ತೆಗೆದುಕೊಳ್ಳಬೇಕು. ಶೌಚಾಲಯದ ಬಗ್ಗೆ ಜನರಲ್ಲಿ ಅವರ್ ನೆಸ್ ಬರದಿದ್ದರೆ ಏನು ಮಾಡಿದರೂ ಪ್ರಯೋಜನ ಇಲ್ಲ ಎಂದರು.

ಅಕ್ರಮ ಗಣ ಗಾರಿಕೆಗೆ ಕಡಿವಾಣ: ಜಿಲ್ಲೆ ಯಲ್ಲಿ ಗಣಿಗಾರಿಕೆಯನ್ನು ಸಂಪೂರ್ಣ ವಾಗಿ ನಿಲ್ಲಿಸಲು ಸಾಧ್ಯವಿಲ್ಲ. ಏಕೆಂದರೆ ಈ ಉದ್ಯಮವನ್ನೇ ನಂಬಿ ಹಲವಾರು ಕುಟುಂಬಗಳು ಜೀವನ ನಿರ್ವಹಿಸುತ್ತಿವೆ. ಆದರೆ ಅಕ್ರಮ ಗಣಿಗಾರಿಕೆಗಳನ್ನು ಸಲ್ಲಿ ಸಲು ಕ್ರಮ ಕೈಗೊಳ್ಳುವುದಾಗಿ ಪುಟ್ಟ ರಂಗಶೆಟ್ಟಿ ಹೇಳಿದರು. ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎಂ.ನಂದೀಶ್, ಪ್ರಧಾನ ಕಾರ್ಯದರ್ಶಿ ದೇವರಾಜು ಕಪ್ಪಸೋಗೆ ಉಪಸ್ಥಿತರಿದ್ದರು.

ನಾನು ಎರಡು ವರ್ಷ ಮಾತ್ರ ಮಂತ್ರಿ

ಚಾಮರಾಜನಗರ:  ನನಗೆ ಎರಡು ವರ್ಷ ಮಾತ್ರ ಸಚಿವ ಸ್ಥಾನ ನೀಡಲಾಗಿದೆ ಎಂದು ಸ್ಥಳೀಯ ಶಾಸಕ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ಇಂದಿಲ್ಲಿ ನಡೆದ ಸಂವಾದ ಕಾರ್ಯ ಕ್ರಮದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿ ಸಿದ ಅವರು ಹೀಗೆ ಹೇಳಿದರು. ಸಂಸದ ಆರ್.ಧ್ರುವನಾರಾಯಣ್ ಎರಡು ವರ್ಷದ ನಂತರ ಹನೂರು ಕ್ಷೇತ್ರದ ಶಾಸಕ ಆರ್.ನರೇಂದ್ರ ಸಚಿವರಾಗಲಿದ್ದಾರೆ ಎಂದು ಹೇಳಿದ್ದಾರೆ. ಇದು ನಿಜವೇ? ಎಂದು ಸುದ್ದಿಗಾರರು ಪುಟ್ಟರಂಗಶೆಟ್ಟಿ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಹೌದು ಇದು ನಿಜ. ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ಎರಡು ವರ್ಷದ ನಂತರ ಸಚಿವ ಸ್ಥಾನ ಬಿಡಬೇಕು ಎಂದು ಹೇಳಿದ್ದಾರೆ. ಇದಕ್ಕೆ ನನ್ನ ಸಮ್ಮತಿ ಇದೆ ಎಂದರು.

ನಾನು ಎಲ್ಲಿಯವರೆಗೆ ಸಚಿವನಾಗಿರುತ್ತೇನೋ ಅಲ್ಲಿಯವರೆಗೆ ಸಚಿವ. ಸಮ್ಮಿಶ್ರ ಸರ್ಕಾರ ಆರಂಭದಲ್ಲಿ ಇರುವ ತೊಂದರೆಗಳನ್ನು ನಿವಾರಿಸಿಕೊಳ್ಳಲಿದೆ. 5 ವರ್ಷ ಅಧಿಕಾರದಲ್ಲಿ ಇರುವುದು ಖಚಿತ. ಕ್ಷೇತ್ರಕ್ಕೆ ಬರಬೇಕಾದ ಅನುದಾನವನ್ನು ತಂದೇ ತರುತ್ತೇನೆ. ನನ್ನ ಕ್ಷೇತ್ರದ ಹಣ ಬೇರೆ ಕ್ಷೇತ್ರಕ್ಕೆ ಬಿಡುವವನೂ ನಾನಲ್ಲ ಎಂದು ಪ್ರಶ್ನೆಗಳಿಗೆ ಉತ್ತರಿಸಿದರು. ನಾನು ಸಚಿವನಾದೆ ಎಂಬುದಕ್ಕಿಂತ ಚಾಮರಾಜನಗರಕ್ಕೆ ಅಂಟಿದ್ದ ಹಲವು ಕಳಂಕಗಳು ದೂರ ಆದದ್ದು ನನಗೆ ಖುಷಿ ತಂದಿದೆ. ಈಗ ಸಚಿವನಾಗಿದ್ದೇನೆ. ಇನ್ನೂ ನಾನು ಏನೇನೂ ಆಗಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳನ್ನು ನಗರಕ್ಕೆ ಹಠ ಮಾಡಿ ಕರೆತರುವುದಾಗಿ ಶೆಟ್ರು ಹೇಳಿದರು.

ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳ ಉಸ್ತುವಾರಿ ದಳದ ಪಾಲಾಗಲಿದೆ. ಹೀಗಾಗಿ ಚಾಮರಾಜನಗರದ ಉಸ್ತುವಾರಿ ಕಾಂಗ್ರೆಸ್‍ಗೆ ಕೊಡಬೇಕಾಗುತ್ತದೆ. ಈ ಬಗ್ಗೆ ನಾನು ಯಾರಲ್ಲೂ ಡಿಮ್ಯಾಂಡ್ ಮಾಡಿಲ್ಲ ಎಂದರು.

Translate »