ಭಾರೀ ಮಳೆ ಹಿನ್ನೆಲೆ ಬೆಟ್ಟ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮ
ಕೊಡಗು

ಭಾರೀ ಮಳೆ ಹಿನ್ನೆಲೆ ಬೆಟ್ಟ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮ

June 25, 2018

ವಿರಾಜಪೇಟೆ: ವಿರಾಜ ಪೇಟೆ ವಿಭಾಗದಲ್ಲಿ ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪಟ್ಟಣದ ಅರಸುನಗರ, ಮಲೆ ತಿರಿಕೆಬೆಟ್ಟ ಹಾಗೂ ನೆಹರೂ ನಗರ ಪ್ರದೇಶ ಗಳಲ್ಲಿ ಮಳೆಗೆ ಮುನ್ನ ತಾಲೂಕು ಆಡಳಿತ ಮುಂಜಾಗರೂ ಕ್ರಮ ವಹಿಸಬೇಕು. ಬೆಟ್ಟದ ತಪ್ಪಲಲ್ಲಿ ವಾಸಿಸುವ ಕುಟುಂಬಗಳು ಭಾರೀ ಮಳೆಗೆ ಅವರ ಜನಜೀವನ ತತ್ತರಿ ಸುತ್ತಿವೆ. ಬಡ ಕುಟುಂಬಗಳಿಗೆ ತುರ್ತು ಪರಿಹಾರ ಒದಗಿಸುವಂತೆ ಜನತಾದಳದ ಜಿಲ್ಲಾ ಸಮಿತಿಯ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅವರು ತಾಲೂಕು ತಹಸಿಲ್ದಾರ್ ಆರ್.ಗೋವಿಂದರಾಜು ಅವರಿಗೆ ವಿನಂತಿಸಿದ್ದಾರೆ.

ನಿನ್ನೆ ದಿನ ವಿರಾಜಪೇಟೆಯಲ್ಲಿ ಭಾರೀ ಮಳೆಗೆ ಅರಸುನಗರದ ಶಶಿಕಲಾ ಎಂಬು ವರ ಮನೆಯ ಮಧ್ಯದ ಗೋಡೆ ಕುಸಿತ ಗೊಂಡು ನೆಲಸಮಗೊಂಡ ಸ್ಥಳವನ್ನು ಖುದ್ದು ಪರಿಶೀಲಿಸಿದ ಸಂಕೇತ್ ಪೂವಯ್ಯ, ಮಳೆಯಿಂದ ಬೀದಿಗೆ ಬಿದ್ದಿರುವ ಕುಟುಂ ಬಕ್ಕೆ ತುರ್ತು ಪರಿಹಾರ ಒದಗಿಸಬೇಕು. ಮನೆಯ ಇತರ ಎಲ್ಲ ಗೋಡೆಗಳು ಬಿರುಕು ಬಿಟ್ಟಿದ್ದು, ಅಪಾಯದ ಅಂಚಿನಲ್ಲಿದೆ. ತಾಲೂಕು ಆಡಳಿತದ ಅಧಿಕಾರಿಗಳು ಮನೆಯನ್ನು ಖುದ್ದು ಪರೀಶಿಲಿಸಿ ಕುಟುಂಬವನ್ನು ಸುರ ಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ತಾಲೂಕು ತಹಸಿಲ್ದಾರ್ ಗೋವಿಂದರಾಜು ಅವರಿಗೆ ದೂರವಾಣಿ ಮೂಲಕ ಸ್ಥಳದಿಂದಲೇ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಗೋವಿಂದರಾಜು ಅವರು ರೆವಿನ್ಯೂ ಸಿಬ್ಬಂದಿ ಗಳನ್ನು ತಕ್ಷಣ ಸ್ಥಳಕ್ಕೆ ಕಳುಹಿಸಿ ಮಹಜರ್ ನಡೆಸಿದರು. ಹಾಗೂ ಜೊತೆಗೆ ಲೋಕೋ ಪಯೋಗಿ ಇಲಾಖೆಯಿಂದ ಮನೆಯ ಗೋಡೆ ಕುಸಿದು ನಷ್ಟದ ಅಂದಾಜು ವೆಚ್ಚದ ಪಟ್ಟಿ ತಯಾರಿಸಲು ಕ್ರಮ ಕೈಗೊಳ್ಳು ವಂತೆ ಅಧಿಕಾರಿಗಳಿಗೆ ಸೂಚನೆ ನೀಡ ಲಾಗಿದೆ. ವರದಿಯ ನಂತರ ಪರಿಶೀಲನೆ ನಡೆಸಿ ತಕ್ಷಣ ಪರಿಹಾರ ಒದಗಿಸಲಾಗು ವುದು ಎಂದು ಸಂಕೇತ್ ಅವರ ಮನವಿಗೆ ಸ್ಪಂದಿಸಿದರು. ಬೆಟ್ಟದ ತಪ್ಪಲಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಕುಂಟುಂಬ ಗಳಿಗೆ ಭಾರೀ ಮಳೆಯ ಮುಂಜಾಗರೂ ಕತೆ ವಹಿಸುವಂತೆ ಎಚ್ಚರಿಕೆ ನೀಡಲಾಗಿದೆ ಎಂದು ತಹಸಿಲ್ದಾರ್ ತಿಳಿಸಿದರು.
ಸಂಕೇತ್ ಪೂವಯ್ಯ ಅವರ ಜೊತೆ ಯಲ್ಲಿ ಪಕ್ಷದ ನಗರ ಸಮಿತಿ ಅಧ್ಯಕ್ಷ ಪಿ.ಎ.ಮಂಜುನಾಥ್ ಇತರ ಕಾರ್ಯಕರ್ತರುಗಳು ಹಾಜರಿದ್ದರು.

Translate »