ಎಟಿಎಂ ಗ್ರಾಹಕರಿಗೆ ವಂಚಿಸುತ್ತಿದ್ದ ಆರೋಪಿ ಬಂಧನ
ಕೊಡಗು

ಎಟಿಎಂ ಗ್ರಾಹಕರಿಗೆ ವಂಚಿಸುತ್ತಿದ್ದ ಆರೋಪಿ ಬಂಧನ

June 25, 2018

ಮಡಿಕೇರಿ: ಎಟಿಎಂ ಕೇಂದ್ರಗಳಿಗೆ ಬರುತ್ತಿದ್ದ ವಯೋವೃದ್ಧ ಗ್ರಾಹಕರಿಗೆ ನೆರವು ನೀಡುವ ನೆಪವೊಡ್ಡಿ ಬ್ಯಾಂಕ್ ಖಾತೆಗಳಿಂದ ಹಣಲಪಟಾಯಿ ಸುತ್ತಿದ್ದ ಕಳ್ಳನನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಮೂಲದ ರಾಜುಪ್ರಕಾಶ್ ಕುಲಕರ್ಣಿ ಬಂಧಿತ ಆರೋಪಿಯಾಗಿದ್ದು, ಈತನ ವಿರುದ್ಧ ರಾಜ್ಯದ ವಿವಿಧ ಕಡೆ ಗಳಲ್ಲಿ ಒಟ್ಟು 16ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಮೇ 31 ರಂದು ಮಡಿಕೇರಿ ಸಮೀಪದ ಬಿಳಿಗೇರಿ ಗ್ರಾಮದ ಲೋಕೇಶ್ ಎಂಬು ವರು ಮಡಿಕೇರಿಯ ವಿಜಯಾ ಬ್ಯಾಂಕ್ ಎಟಿಎಂಗೆ ಬಂದ ಸಂದರ್ಭ ಎಟಿಎಂ ಪಕ್ಕದಲ್ಲಿ ನಿಂತಿದ್ದ ರಾಜು ಪ್ರಕಾಶ್ ಕುಲಕರ್ಣಿ ಸಹಾಯ ಮಾಡುವ ನೆಪದಲ್ಲಿ ಲೋಕೇಶ್ ಅವರ ಎಟಿಎಂ ಕಾರ್ಡ್ ಪಡೆದು ಹಣ ಡ್ರಾ ಮಾಡಿಕೊಟ್ಟಿದ್ದ. ಬಳಿಕ ಭದ್ರಾವತಿಯಲ್ಲಿ ಕಳವು ಮಾಡಲು ಬಳಸಿದ್ದ ಎಟಿಎಂ ಕಾರ್ಡ್‍ಅನ್ನು ಲೋಕೇಶ್ ಅವರಿಗೆ ನೀಡಿ ವಂಚಿಸಿದ್ದ. ಆ ಬಳಿಕ ಮೇ.31ರಂದು 30 ಸಾವಿರ ಮತ್ತು ಮೂರು ದಿನ ಕಳೆದು ಎಟಿಎಂನಲ್ಲಿ ಇದ್ದ 1.60 ಲಕ್ಷ ನಗದು ಸೇರಿದಂತೆ ಒಟ್ಟು 1.90 ಲಕ್ಷ ರೂಪಾಯಿಗಳನ್ನು ಲಪಟಾ ಯಿಸಿದ್ದ. ಈ ಪ್ರಕರಣದ ಕುರಿತು ಮಡಿಕೇರಿ ನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.

ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ಸುಂದರ್‍ರಾಜ್ ನೇತೃತ್ವದಲ್ಲಿ ನಗರ ಠಾಣೆಯ ವೃತ್ತ ನಿರೀಕ್ಷಕರು, ಅಧಿಕಾರಿ ಗಳು ಮತ್ತು ಸಿಬ್ಬಂದಿಗಳು ಕಳ್ಳನ ಪತ್ತೆ ಹಚ್ಚಲು ತನಿಖೆ ಕೈಗೊಂಡಿದ್ದರು.

ರಾಜ್ಯದ ವಿವಿಧ ಭಾಗಗಳ ಕಳ್ಳತನದ ಹೋಲಿಕೆ ಮಾಡಿದ ಪೊಲೀಸರಿಗೆ ರಾಜು ಪ್ರಕಾಶ್ ಕುಲಕರ್ಣಿ ಮೇಲೆ ಶಂಕೆ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಆತನ ಮೊಬೈಲ್ ಕಾಲ್‍ಗಳ ಜಾಡು ಹಿಡಿದು ಮಡಿಕೇರಿ ನಗರ ಪೊಲೀಸರು ಮೈಸೂ ರಿನ ಆಲನಹಳ್ಳಿಯಲ್ಲಿ ಶಂಕಿತ ಕಳ್ಳನನ್ನು ಸೆರೆಹಿಡಿದು ವಿಚಾರಣೆ ನಡೆಸಿದ್ದರು. ಈ ಸಂದರ್ಭ ರಾಜುಪ್ರಕಾಶ್ ಕುಲಕರ್ಣಿ ಮಡಿಕೇರಿ ವಿಜಯಾ ಬ್ಯಾಂಕ್ ಎಟಿಎಂಗೆ ಬಂದಿದ್ದು, ಗ್ರಾಹಕರಿಗೆ ವಂಚನೆ ಮಾಡಿರು ವುದನ್ನು ಬಾಯಿ ಬಿಟ್ಟಿದ್ದಾನೆ.

ಹೆಚ್ಚಿನ ವಿಚಾರಣೆ ನಡೆಸಿದ ಸಂದರ್ಭ ಬೆಂಗಳೂರಿನ ಉಪ್ಪಾರಪೇಟೆಯಲ್ಲಿ 1, ಕಾಟನ್‍ಪೇಟೆಯಲ್ಲಿ 5, ಭದ್ರಾವತಿಯಲ್ಲಿ 1, ಹುಬ್ಬಳ್ಳಿ-ಧಾರವಾಡದಲ್ಲಿ 14 ಪ್ರಕ ರಣಗಳು ಎಸಗಿರುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

ಬಂಧಿತ ಆರೋಪಿಯಿಂದ 1.20 ಲಕ್ಷ ಹಣವನ್ನು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿ ಈ ಹಿಂದೆ ಕಳವು ಪ್ರಕರಣಕ್ಕೆ ಸಂಬಂಧಿಸಿ ದಂತೆ ಒಂದು ವರ್ಷ ಆರು ತಿಂಗಳು ಜೈಲಿ ನಲ್ಲಿದ್ದು, ಜಾಮೀನು ಪಡೆದು ಹೊರ ಬಂದು ಕಳ್ಳತನದ ದಂಧೆಯನ್ನು ಮುಂದುವರೆ ಸಿದ್ದ, ವೃದ್ಧರು, ಗ್ರಾಮೀಣ ಭಾಗದ ನಿವಾಸಿ ಗಳೇ ಈತನ ಟಾರ್ಗೇಟ್ ಆಗಿರುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿ ಸಿವೆ. ಕಾರ್ಯಾಚರಣೆಯಲ್ಲಿ ಮಡಿಕೇರಿ ನಗರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಠಾಣಾಧಿಕಾರಿ ಷಣ್ಮುಕ, ಎಎಸ್‍ಐ ಸುಬ್ಬಯ್ಯ, ಸಿಬ್ಬಂದಿಗಳಾದ ದಿನೇಶ್, ಸಿದ್ದಾರ್ಥ್, ಮದುಸೂಧನ್, ಮನೋಜ್, ಗಿರೀಶ್, ರಾಜೇಶ್ ಪಾಲ್ಗೊಂಡಿದ್ದರು.

Translate »