‘ನಮಾಮಿ ಕಾವೇರಿ’ ಕಾವೇರಿ ಪುನರುತ್ಥಾನ ಅಭಿಯಾನಕ್ಕೆ ಚಾಲನೆ
ಕೊಡಗು

‘ನಮಾಮಿ ಕಾವೇರಿ’ ಕಾವೇರಿ ಪುನರುತ್ಥಾನ ಅಭಿಯಾನಕ್ಕೆ ಚಾಲನೆ

June 25, 2018

ಮಡಿಕೇರಿ: ಜೀವನದಿ ಕಾವೇರಿ ಉಗಮ ಸ್ಥಾನದಿಂದಲೇ ಮಲಿನ ಗೊಳ್ಳುತ್ತಿದ್ದು, ಕಾವೇರಿ ಮಾತೆ ಎಲ್ಲರ ತಾಯಿ ಎಂಬ ಜಾಗೃತಿ ಮೂಡಿಸುವುದ ರೊಂದಿಗೆ ಜಿಲ್ಲೆಯ ಜನತೆಯಲ್ಲಿ ಸಾಮರಸ್ಯ, ಸದ್ಭಾವನೆಯನ್ನು ಮೂಡಿ ಸುವ ಸಲುವಾಗಿ ‘ನಮಾಮಿ ಕಾವೇರಿ’ ಎಂಬ ಜೀವನದಿ ಕಾವೇರಿ ಪುನರುತ್ಥಾನ ಅಭಿಯಾ ನಕ್ಕೆ ನಗರದಲ್ಲಿ ಚಾಲನೆ ನೀಡಲಾಯಿತು.

ನಗರದ ಶ್ರೀ ಓಂಕಾರ ಸದನದಲ್ಲಿ ತಲ ಕಾವೇರಿ ದೇವಾಲಯದ ಪ್ರಧಾನ ಅರ್ಚಕ ನಾರಾಯಣಾಚಾರ್ ಅವರು ದೀಪ ಪ್ರಜ್ವ ಲಿಸಿ, ತೀರ್ಥ ರೂಪಿಣಿ ಕಾವೇರಿ ಮಾತೆಯ ಶ್ಲೋಕ ಉಚ್ಚರಿಸುವ ಮೂಲಕ ಅಭಿ ಯಾನಕ್ಕೆ ಚಾಲನೆ ನೀಡಿದರು.

ಭರತ ಖಂಡದ ಅತ್ಯಂತ ಪವಿತ್ರ ಏಳು ತೀರ್ಥ ಕ್ಷೇತ್ರಗಳಲ್ಲಿ ಕಾವೇರಿಗೂ ಪ್ರಮುಖ ಸ್ಥಾನವಿದೆ. ದಕ್ಷಿಣದ ಕಡಲತ ಡಿಯಿಂದ ಉತ್ತರದ ಹಿಮಾಲಯದ ಕಡೆಗೆ ಹೊರಟಾಗ ಸಿಗುವ ಕ್ಷೇತ್ರವೇ ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿ. ಆದರೆ ಜೀವನದಿ ಕಾವೇರಿ ಉಗಮ ಸ್ಥಾನ ದಿಂದಲೇ ಮಲಿನಗೊಳ್ಳುತ್ತಿದ್ದು, ಕಾವೇರಿ ಮಾತೆ ಎಲ್ಲರ ತಾಯಿ ಎಂಬ ಜಾಗೃತಿ ಮೂಡಿಸುವುದರೊಂದಿಗೆ ಜನತೆಯಲ್ಲಿ ಸಾಮ ರಸ್ಯ, ಸದ್ಭಾವನೆಯನ್ನು ಮೂಡಿಸುವ ಸಲುವಾಗಿ ‘ನಮಾಮಿ ಕಾವೇರಿ’ ಜೀವ ನದಿ ಕಾವೇರಿ ಪುನರುತ್ಥಾನ ಅಭಿಯಾನ ನಡೆಯಲಿದ್ದು, ಅಭಿಯಾನವನ್ನು ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ನಮಾಮಿ ಗಂಗೆ ಯೋಜನೆಯ ರೂಪುರೇಷೆಯಂತೆ ವಿಸ್ತರಿಸಲು ಚರ್ಚಿಸಲಾಯಿತು.

ನಮಾಮಿ ಕಾವೇರಿ ಯೋಜನೆಯ ಮೊದಲ ಹಂತದಲ್ಲಿ ಜು. 16ರಂದು ತಲಕಾವೇರಿ ದೇವಾಲಯದ ಸುತ್ತಲಿನ ಪರಿಸರದಲ್ಲಿ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಗಿಡ ನೆಡುವ ಮೂಲಕ ವನ ಅಭಿವೃದ್ಧಿ, ನಂತರ ತುಲಾ ಸಂಕ್ರಮಣಕ್ಕೆ ಒಂದು ತಿಂಗಳ ಮುಂಚಿತವಾಗಿ ವೀರಾಜಪೇಟೆ ತಾಲೂ ಕಿನ ಕುಟ್ಟ ಮತ್ತು ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯಿಂದ ಎರಡು ಪ್ರತ್ಯೇಕವಾಗಿ ಜನಜಾಗೃತಿ ರಥವನ್ನು ಹೊರ ಡಿಸುವ ಮೂಲಕ ಜಿಲ್ಲೆಯ ಎಲ್ಲಾ ಗ್ರಾಮ ಗಳಲ್ಲಿ ಸಂಚರಿಸಿ ಜನತೆಯಲ್ಲಿ ಮಾತೆ ಕಾವೇರಿಯ ಬಗ್ಗೆ ಶ್ರದ್ಧಾಭಕ್ತಿ ಮೂಡಿಸು ವುದು ಮತ್ತು ತುಲಾಸಂಕ್ರಮಣದ ದಿನ ಎರಡೂ ಜನಜಾಗೃತಿ ರಥ ತಲ ಕಾವೇರಿಗೆ ಆಗಮಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.

ಈ ಸಂದರ್ಭ ವನ ಅಭಿವೃದ್ಧಿ ಮತ್ತು ಜನಜಾಗೃತಿ ರಥಯಾತ್ರೆಯ ಬಗ್ಗೆ ನಾರಾ ಯಣಾಚಾರ್, ಕೊಡಗು ಕಾಫಿ ಬೆಳೆ ಗಾರರ ಸಹಕಾರ ಸಂಘದ ಅಧ್ಯಕ್ಷ ಎಂ.ಬಿ. ದೇವಯ್ಯ, ಕಾವೇರಿ ಸೇನೆ ಸಂಚಾಲಕ ರವಿಚಂಗಪ್ಪ, ಪತ್ರಕರ್ತ ಚಿ.ನಾ.ಸೋಮೇಶ್, ಪ್ರಮುಖರಾದ ಚಿರಿಯಪಂಡ ರಾಜಾ ನಂಜಪ್ಪ, ಎಂ.ಎಂ.ರವೀಂದ್ರ ಹಾಗೂ ಇತರರು ಹಲವು ಸಲಹೆ ನೀಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಕಾರ್ಯವಾಹ ನ.ಸೀತಾರಾಮ್ ಮಾರ್ಗದರ್ಶನ ಮಾಡಿದರು.

ತೀರ್ಥರೂಪಿಣಿ ಕಾವೇರಿ ದಕ್ಷಿಣ ಭಾರ ತದ ಜೀವನದಿಯಾಗಿದ್ದು, ಲೋಕಪಾವನೆ ಯಾಗಿದ್ದಾಳೆ. ಕಾವೇರಿ ತಟದಲ್ಲಿ ಸುಂದರ ಸಂಸ್ಕೃತಿ ಅರಳಿದ್ದು ತಾಯಿಯಾಗಿ ಪೂಜಿಸ ಲಾಗುತ್ತಿದೆ. ಕಾವೇರಿ ಮಾತೆಯೊಂದಿಗೆ ಜಿಲ್ಲೆಯ ಪ್ರತೀ ಗ್ರಾಮ ಪ್ರತೀ ದೇವಾ ಲಯದೊಂದಿಗೆ ಪವಿತ್ರ ಭಾವನೆಯನ್ನು ಮೂಡಿಸಬೇಕಾಗಿದೆ ಎಂದು ವೇದಿಕೆಯ ಲ್ಲಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸಂಘಚಾಲಕ ಚಕ್ಕೇರ ಮನು ಕಾವೇರಪ್ಪ ಹೇಳಿದರು.

ಜೀವನದಿ ಕಾವೇರಿ ಇಂದು ಅಪವಿತ್ರ ಗೊಂಡಿದ್ದು, ಜಿಲ್ಲೆಯಲ್ಲಿ ಸಾಮಾಜಿಕ ಸಾಮ ರಸ್ಯ ಹದಗೆಡುತ್ತಿದೆ. ಕಾವೇರಿ ತೀರವನ್ನು ಸ್ವಚ್ಛಗೊಳಿಸುವ ಮೂಲಕ ನಾವೆಲ್ಲರೂ ಮಾತೆ ಕಾವೇರಿಯ ಮಕ್ಕಳು ಎನ್ನುವ ಭಾವ ನೆಯನ್ನು ಮೂಡಿಸಿಕೊಳ್ಳಬೇಕೆಂದು ಅವರು ಹೇಳಿದರು.

ಅಗಸ್ತ್ಯ ಮುನಿಗಳು ಲೋಪಮುದ್ರೆ ಕಾವೇರಿಯನ್ನು ಹರಿಸುವ ಮೂಲಕ ಮುಂದೆ ಕನ್ನಿಕಾ ಸುಜ್ಯೋತಿಯನ್ನು ಜೋಡಿ ಸುವ ಕೆಲಸ ಮಾಡಿದರು. ಅವರಂತೆಯೇ ನಾವು ಕೂಡ ಸಮಾಜವನ್ನು ಜೋಡಿ ಸುವ ಕೆಲಸ ಮಾಡಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಪ್ರಚಾರಕ್ ಕೃಷ್ಣಪ್ರಸಾದ್ ಹೇಳಿದರು.

ಜೀವನದಿ ಕಾವೇರಿ ತೀರದಲ್ಲಿ ನಾಗರಿ ಕತೆ ಅರಳಿದ್ದು, ಜೀವನ ಪದ್ಧತಿ, ಸಂಸ್ಕೃತಿ ಜಗತ್ತಿಗೆ ತಿಳಿಯಬೇಕಾಗಿದೆ. ನದಿಗೆ ಪ್ರವಾಹ ಮಾತ್ರವಲ್ಲ ಜಗತ್ತನ್ನು ಪರಿವರ್ತಿ ಸುವ ಸಾಮಥ್ರ್ಯವಿದೆ. ಕಾವೇರಿ ದೇಶದ ಎಲ್ಲರಿಗೂ ಪವಿತ್ರವಾದ ನದಿಯಾಗಿದೆ. ದೇವಾಲಯದ ಗರ್ಭಗುಡಿಯಲ್ಲಿ ದೇವರಿಗೆ ಅಭಿಷೇಕವಾಗಬೇಕಾದರೆ ಕಾವೇರಿ ಬೇಕಾಗಿದೆ. ಭೂಮಿಯ ಮೇಲಿರುವ ಪ್ರತೀ ಜೀವಸಂಕುಲವೂ ಹಿಂದೂಗಳಿಗೆ ದೇವ ಸಮಾನವಾಗಿದೆ ಎಂದು ಅವರು ಹೇಳಿದರು.

ಮನುಷ್ಯ ಇಂದು ಪ್ರಕೃತಿಯನ್ನು ಶೋಷಣೆ ಮಾಡುತ್ತಿರುವುದನ್ನು ನಿಲ್ಲಿಸಿ ರಕ್ಷಣೆ ಮಾಡಬೇಕಾಗಿದೆ. ಸ್ವಚ್ಛ ಭಾರತ ಕೇವಲ ಕಸ ಗುಡಿಸುವುದು ಮಾತ್ರವಲ್ಲ ಮನಸ್ಸಿನ ಸ್ವಚ್ಛತೆಯ ಅಗತ್ಯವಿದೆ. ಜೀವ ನದಿ ಕಾವೇರಿಯ ಪುನರುತ್ಥಾನಕ್ಕಾಗಿ ಜಿಲ್ಲೆಯ ಜನತೆ ಬಿಲ್ಲಿನ ಬಾಣಗಳಂತೆ ಕಾರ್ಯ ಮಾಡುವಂತಾಗಬೇಕು ಎಂದು ಹೇಳಿದರು. ಸಮಾರಂಭದಲ್ಲಿ ಪ್ರಮುಖ ರಾದ ಮಂಡೇಪಂಡ ಸುಜಾ ಕುಶಾಲಪ್ಪ ಮನು ಮುತ್ತಪ್ಪ, ಜಪ್ಪು ಅಚ್ಚಪ್ಪ, ಕೋಡಿ ಪೊನ್ನಪ್ಪ, ಕಾಂತಿ ಸತೀಶ್, ಜೀವನ್, ಅಜಿತ್, ಕಾಳನ ರವಿ, ನಾಪಂಡ ರವಿ ಕಾಳಪ್ಪ, ಅಚ್ಚಪಂಡ ಮಹೇಶ್, ಅನಿತಾ ಪೂವಯ್ಯ, ಶಿವಕುಮಾರಿ, ಲಕ್ಷ್ಮಿ, ರಮೇಶ್ ಹೊಳ್ಳ ಹಾಗೂ ಇತರರು ಭಾಗವಹಿಸಿದ್ದರು.

Translate »