ಸಂತೇಮರಹಳ್ಳಿ ಎಪಿಎಂಸಿಯಲ್ಲಿ ಮಳಿಗೆಗಳ ಉದ್ಘಾಟನೆ ಬೆಳೆ ಸಂಸ್ಕರಣೆಗೆ ಶೀಥಲೀಕರಣ ಘಟಕ ಸ್ಥಾಪನೆಗೆ ಕ್ರಮ
ಚಾಮರಾಜನಗರ

ಸಂತೇಮರಹಳ್ಳಿ ಎಪಿಎಂಸಿಯಲ್ಲಿ ಮಳಿಗೆಗಳ ಉದ್ಘಾಟನೆ ಬೆಳೆ ಸಂಸ್ಕರಣೆಗೆ ಶೀಥಲೀಕರಣ ಘಟಕ ಸ್ಥಾಪನೆಗೆ ಕ್ರಮ

June 25, 2018

ಸಂತೇಮರಹಳ್ಳಿ:  ಪ್ರತಿ ತಾಲೂಕಿನಲ್ಲಿರುವ ಎಪಿಎಂಸಿಗಳಲ್ಲಿ ರೈತರು ಬೆಳೆದ ಹಣ್ಣು, ತರಕಾರಿಗಳನ್ನು ಸಂಸ್ಕರಣೆ ಮಾಡಲು ಅನುಕೂಲವಂತೆ ಶೀಥಲೀ ಕರಣ ಘಟಕವನ್ನು ಸ್ಥಾಪನೆ ಮಾಡುವು ದಾಗಿ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ತಿಳಿಸಿದರು. ತಾಲೂಕಿನ ಸಂತೇಮರಹಳ್ಳಿ ಎಪಿಎಂಸಿ ಪ್ರಾಂಗಣದಲ್ಲಿ ಐದು ಅಂಗಡಿ ಮಳಿಗೆ ಭಾನು ವಾರ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ವೈಜ್ಞಾ ನಿಕ ಬೆಲೆಯನ್ನು ಕೊಡಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಹೆಚ್ಚಿನ ಶ್ರಮ ವಹಿಸಲಿದೆ. ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ನೇರ ವಾಗಿ ಮಾರಾಟ ಮಾಡುವ ವ್ಯವಸ್ಥೆ ಯಡಿಯಲ್ಲಿ ಕೃಷಿ ಉತ್ಪನ್ನ ಮಾರು ಕಟ್ಟೆಗಳನ್ನು ರಚನೆ ಮಾಡಲಾಗಿದೆ. ಚಾಮ ರಾಜನಗರ ತಾಲೂಕಿನಲ್ಲಿಯೂ ಎಪಿಎಂಸಿ ಯಶಸ್ವಿಯಾಗಿ ಕಾರ್ಯನಿರ್ವಹಣೆ ಮಾಡು ತ್ತಿದೆ. ಹರಿಶಿನ, ತೆಂಗಿನಕಾಯಿ ಸೇರಿದಂತೆ ತರಕಾರಿ, ಬೆಲ್ಲದ ಮಾರುಕಟ್ಟೆ ನಡೆಯು ತ್ತಿದೆ. ಸಂತೇಮಹರಳ್ಳಿಯಲ್ಲಿ ಉಪ ಮಾರು ಕಟ್ಟೆಯನ್ನು ಸ್ಥಾಪನೆ ಮಾಡಲಾಗಿದ್ದು, ಪ್ರತಿ ಮಂಗಳವಾರ ಸಂತೆ ನಡೆಯುತ್ತಿದೆ ಎಂದರು.

ರೈತರು ಬೆಳೆದ ತರಕಾರಿ ಹಾಗೂ ಹಣ್ಣು ಗಳನ್ನು ಸಂಸ್ಕರಣೆ ಮಾಡಲು ಅನುಕೂಲ ವಾಗುವಂತೆ, ಉತ್ತಮ ಬೆಲೆ ದೊರೆಯು ವಂತೆ ಮಾಡಲು ತಾಲೂಕಿಗೆ ಒಂದು ಕೋಲ್ಡ್ ಸ್ಟೋರೇಜ್ ಘಟಕ ಸ್ಥಾಪನೆ ಮಾಡಲಾಗುತ್ತದೆ. ದೇವೇಗೌಡರು ಪ್ರಧಾನಿಮಂತ್ರಿಗಳಾಗಿದ್ದ ಅವಧಿಯಲ್ಲಿಯೇ ಘಟಕ ಸ್ಥಾಪನೆಗೆ ಆಸಕ್ತಿ ಹೊಂದಿದ್ದರು. ಅವರು ಪೂರ್ಣ ಪ್ರಮಾಣದಲ್ಲಿ ಪ್ರಧಾನಿ ಯಾಗಿದ್ದರೆ ಈಗ ಎಲ್ಲಾ ಎಪಿಎಂಸಿಗಳಲ್ಲಿ ಘಟಕ ನಿರ್ಮಾಣವಾಗಿರುತ್ತಿತ್ತು. ಬಳಿಕ ಬಂದ ಪ್ರಧಾನಿಗಳು ಈ ಬಗ್ಗೆ ಹೆಚ್ಚು ಅಸಕ್ತಿ ವಹಿಸಲಿಲ್ಲ. ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಇದರ ಬಗ್ಗೆ ಈಗಾಗಲೇ ಪ್ರಸ್ತಾಪ ಮಾಢಿದ್ದು, ನಾನು ಸಹ ಸಂಪುಟದ ಸಭೆಯಲ್ಲಿ ಘಟಕ ಸ್ಥಾಪನೆ ಮಾಡುವಂತೆ ಒತ್ತಾಯ ಮಾಡುತ್ತೇನೆ ಎಂದರು.

ಸಂತೇಮರಹಳ್ಳಿ ಉಪ ಮಾರುಕಟ್ಟೆ ಪ್ರಾಂಗಣ 21 ಎಕರೆ ಪ್ರದೇಶದಲ್ಲಿ ಬಹಳ ವಿಸ್ತಾರವಾಗಿದೆ. ಇದೊಂದು ಜಿಲ್ಲಾ ಕೇಂದ್ರಕ್ಕೆ ಜಂಕ್ಷನ್ ಅಗಿದ್ದು, ಮಾರುಕಟ್ಟೆಗೆ ಮೂಲ ಭೂತ ಸೌಲಭ್ಯವನ್ನು ಕಲ್ಪಿಸಲು ಬದ್ದ ರಾಗಿದ್ದೇವೆ. ಸಂಸದರ ಸಹಕಾರವನ್ನು ಪಡೆದು ಮಾರುಕಟ್ಟೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡೋಣ. ಈಗ ಚುನಾವಣಾ ರಾಜಕಾರಣ ಮುಗಿದಿದೆ. ಇನ್ನು ಏನಿದ್ದರು ಅಭಿವೃದ್ಧಿ ರಾಜಕಾರಣವನ್ನು ಮಾಡೋಣ. ಎಲ್ಲರೂ ಸಹ ಪಕ್ಷಾತೀತವಾಗಿ ಜಿಲ್ಲೆಯ ಅಭಿವೃದ್ಧಿಗೆ ದುಡಿಯೋಣ. ತಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದು ಮಹೇಶ್ ತಿಳಿಸಿದರು.

ಸಂಸದ ಆರ್. ಧ್ರುವನಾರಾಯಣ್ ಸಮಾ ರಂಭವನ್ನು ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಪ್ರಥಮವಾಗಿ ಈ ಹಿಂದೆ ಇದ್ದ ನಮ್ಮ ಕಾಂಗ್ರೆಸ್ ಸರ್ಕಾರ ಆನ್‍ಲೈನ್ ಮಾರುಕಟ್ಟೆ ವ್ಯವಸ್ಥೆಯನ್ನು ಮಾಡಿತ್ತು. ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರು ಅರಿಶಿನ ಮಾರುಕಟ್ಟೆಯನ್ನು ಆರಂಭಿಸಿದ್ದರು. ಇದರ ಮಾದರಿಯಾಗಿ ಪ್ರಧಾನಿ ನರೇಂದ್ರ ಮೋದಿ ಈ ಮಾರು ಕಟ್ಟೆ ವ್ಯವಸ್ಥೆಯನ್ನು ದೇಶಕ್ಕೆ ವಿಸ್ತರಣೆ ಮಾಡಿದ್ದಾರೆ. ಎಪಿಎಂಸಿಗಳ ಅಭಿವೃದ್ಧಿ ಯಿಂದ ರೈತರಿಗೆ ಹೆಚ್ಚಿನ ನೆರವಾಗುತ್ತದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಲ್ಲಿ ಹೆಚ್ಚು ಅನುದಾನ ಇದ್ದು, ಎಪಿಎಂಸಿಯ ಸಮಗ್ರ ಅಭಿವೃದ್ಧಿಗಾಗಿ ಕ್ರಿಯಾ ಯೋಜನೆಯನ್ನು ಸಲ್ಲಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುದಾನ ಕೊಡಿಸುವ ಭರವಸೆಯನ್ನು ಸಂಸದರು ನೀಡಿದರು.

ಎಪಿಎಂಸಿ ಅಧ್ಯಕ್ಷ ಬಿ.ಕೆ. ರವಿಕುಮಾರ್ ನೇತೃತ್ವದ ತಂಡ ಉತ್ತಮವಾಗಿ ಕಾರ್ಯ ಕ್ರಮಗಳನ್ನು ರೂಪಿಸುತ್ತಿದ್ದು, ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಇವರ ಅವಧಿ ಯಲ್ಲಿ ನಡೆಯುತ್ತಿದೆ. ಮಹಾರಾಷ್ಟ್ರ ಬಾರಾ ಮತಿ ಕ್ಷೇತ್ರದಲ್ಲಿ ಎಪಿಎಂಸಿಯನ್ನು ಬಹಳ ಚೆನ್ನಾಗಿ ಅಭಿವೃದ್ದಿ ಮಾಡಿದ್ದಾರೆ. ಇದು ಶರದ್‍ಪವಾರ್ ಅವರ ಕ್ಷೇತ್ರವಾಗಿದ್ದು, ಶೈಕ್ಷಣಿಕ ಪ್ರವಾಸದ ಸಂದರ್ಭದಲ್ಲಿ ಅಲ್ಲಿಗೆ ಹೋಗಿ ಮಾರುಕಟ್ಟೆ ವ್ಯವಸ್ಥೆ ಬಗ್ಗೆ ನಿರ್ದೇ ಶಕರು ತಿಳಿದುಕೊಳ್ಳಬೇಕು ಎಂದು ಧ್ರುವ ನಾರಾಯಣ್ ಸಲಹೆ ನೀಡಿದರು.
ಎಪಿಎಂಸಿ ಅಧ್ಯಕ್ಷ ಬಿ.ಕೆ. ರವಿಕುಮಾರ್ ಗಣ್ಯರನ್ನು ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತ ನಾಡಿ, ಎಪಿಎಂಸಿ ಅಭಿವೃದ್ಧಿಗೆ ಹೆಚ್ಚಿನ ಶ್ರಮ ವಹಿಸಲಾಗಿದೆ. ಸಂತೇಮಹರಳ್ಳಿ ಎಪಿ ಎಂಸಿ ಪ್ರಾಂಗಣದಲ್ಲಿ ಹೆಚ್ಚುವರಿ 5 ಮಳಿ ಗೆಗಳನ್ನು ನಿರ್ಮಿಸಿ ಉದ್ಘಾಟಿಸಲಾಗಿದೆ.

ಎಪಿಎಂಸಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನೂತನ ಸಚಿವರು, ಸಂಸದರು ಹೆಚ್ಚಿನ ಅನುದಾನ ನೀಡಬೇಕು. ಗೋದಾಮುಗಳ ನಿರ್ಮಾಣ, ರಸ್ತೆ, ಚರಂಡಿ, ಹರಾಜು ಕಟ್ಟೆ ನಿರ್ಮಾಣಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದರು. ಸಮಾ ರಂಭದಲ್ಲಿ ಜಿಪಂ ಅಧ್ಯಕ್ಷೆ ಶಿವಮ್ಮಕೃಷ್ಣ, ಉಪಾಧ್ಯಕ್ಷ ಯೋsಗೇಶ್, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪಿ. ಸದಾಶಿವಮೂರ್ತಿ, ತಾಲೂಕು ಪಂಚಾಯಿತಿ ಅಧ್ಯಕ್ಷೆ ದೊಡ್ಡಮ್ಮ, ಸದಸ್ಯ ರವೀಶ್, ಗ್ರಾಪಂ ಅಧ್ಯಕ್ಷೆ ಶೋಭಾ, ಎಪಿ ಎಂಸಿ ಉಪಾಧ್ಯಕ್ಷ ಮಾದೇವಸ್ವಾಮಿ, ಮಾಜಿ ಅಧ್ಯಕ್ಷ ಆಲ್ದೂರು ರಾಜಶೇಖರ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಶಂಕರ್, ಚಾಮುಲ್ ನಿರ್ದೇಶಕ ಸುರೇಶ್ ಸಿದ್ದಯ್ಯ, ನಿರ್ದೇಶಕರಾದ ಬಿ.ಎಸ್.ಶಂಕರ ಮೂರ್ತಿ, ಪುಟ್ಟಸುಬ್ಬಪ್ಪ, ವೆಂಕಟಶೇಷಯ್ಯ, ಸಿದ್ದಶೆಟ್ಟಿ, ಶಿವಸ್ವಾಮಿ, ಡಿ.ನಾಗೇಂದ್ರ, ನಂಜುಂಡಸ್ವಾಮಿ, ಕೆ.ಎಸ್.ಚಂದ್ರಶೇಖರ್, ಜಿ.ಸುಂದ್ರಮ್ಮ, ನಾಗಮ್ಮ, ವಿಜಯಲಕ್ಷ್ಮಿ, ಕಾರ್ಯದರ್ಶಿ ಟಿ.ವಿ. ಪ್ರಕಾಶ್‍ಕುಮಾರ್, ಮಾರುಕಟ್ಟೆ ಅಧಿಕಾರಿ ಮಧು ಕುಮಾರ್ ಮೊದಲಾದವರು ಇದ್ದರು.

Translate »