ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಿಸಿದರೆ ತಪ್ಪೇನು?
ಮೈಸೂರು

ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಿಸಿದರೆ ತಪ್ಪೇನು?

December 29, 2019

ಮೈಸೂರು, ಡಿ.28(ಎಂಟಿವೈ)- ಬಿಜೆಪಿ ನಾಯಕರು ವಿಷಮಯ ಮನಸ್ಥಿತಿಯಿಂದ ಹೊರಬಂದು ಹೃದಯ ವೈಶಾಲ್ಯತೆಯಿಂದ ಸರ್ವಧರ್ಮಗಳನ್ನು ಕಾಣುವುದರೊಂದಿಗೆ ಕೋಮುಸೌಹಾರ್ದ ನೆಲೆಸಲು ಸಹಕರಿಸಬೇಕು ಎಂದು ಮಾಜಿ ಸಂಸದ ಆರ್.ಧ್ರ್ರುವನಾರಾಯಣ್ ಸಲಹೆ ನೀಡಿದ್ದಾರೆ.

ಮೈಸೂರು ಜಲದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಸಮಾಜದಲ್ಲಿ ಅಶಾಂತ ವಾತಾವರಣ ಸೃಷ್ಟಿಸಿ, ರಾಜಕೀಯ ಲಾಭ ಮಾಡಿಕೊಳ್ಳುವ ಸಂಚು ನಡೆಸು ತ್ತಿದ್ದಾರೆ. ಸರ್ವಧರ್ಮಗಳ ನೆಲೆಬೀಡಾದ ಭಾರತದಲ್ಲಿ ಜನ ಸೌಹಾರ್ದತೆಯಿಂದ ಸಹಬಾಳ್ವೆ ನಡೆಸುತ್ತಿದ್ದಾರೆ. ಧರ್ಮಗಳ ನಡುವೆ ಕಂದಕ ನಿರ್ಮಾಣ ಮಾಡುವ ಬದಲು ಹಿಂದೂ ಸಮಾಜದ ಬಿರುಕುಗಳನ್ನು ಸರಿಪಡಿಸಲು ಪ್ರಯತ್ನಿಸುತ್ತಿಲ್ಲ. ಇದು ದೇಶದ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಪೂರ್ವದಿಂದಲೂ ಕ್ರೈಸ್ತ ಮಿಷನರಿಗಳು ದೇಶಕ್ಕೆ ನೀಡಿರುವ ಕೊಡುಗೆ ಅಪಾರ. ಕಪಾಲಿಬೆಟ್ಟದಲ್ಲಿ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣ ವಿಚಾರದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕುರಿತಂತೆ ಬಿಜೆಪಿ ನಾಯಕರ ಹೇಳಿಕೆ ಖಂಡನೀಯ. ಒಂದು ಧರ್ಮದ ವಿರುದ್ಧ ಹೇಳಿಕೆ ನೀಡುತ್ತ್ತಿರುವುದು ಸರಿಯಲ್ಲ. ಕನಕಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಗ್ರಾಮದ ಕಪಾಲಿಬೆಟ್ಟದಲ್ಲಿ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣ ಮಾಡುವ ಕುರಿತು ಅಲ್ಲಿನ ಟ್ರಸ್ಟ್ ಸದಸ್ಯರು ಕೋರಿಕೊಂಡ ಮೇರೆಗೆ ಡಿ.ಕೆ.ಶಿವ ಕುಮಾರ್ ಸಹಾಯ ಮಾಡಿದ್ದಾರೆ ಅಷ್ಟೆ ಎಂದರು.

ಕಾನೂನು ಪ್ರಕಾರವೇ ಕ್ರೈಸ್ತ ಧರ್ಮದ ಸಂಸ್ಥೆಗೆ ಭೂಮಿ ಮಂಜೂರಾಗಿದೆ. ಆದರೆ, ಪ್ರತಿಮೆ ಸ್ಥಾಪನೆಗೆ ಸಂಬಂಧಿಸಿ ಬಿಜೆಪಿ ನಾಯಕರಾದ ಕೆ.ಎಸ್.ಈಶ್ವರಪ್ಪ, ಅನಂತಕುಮಾರ್ ಹೆಗಡೆ, ಬಸವನಗೌಡ ಪಾಟೀಲ್ ಯತ್ನಾಳ್, ಸಿ.ಟಿ.ರವಿ, ಪ್ರತಾಪಸಿಂಹ ಅವರು ನೀಡಿರುವ ಹೇಳಿಕೆ ಸಮಾಜದ ಶಾಂತಿ ಕದಡಲಿದೆ. ನಾವು ಚಿಕ್ಕಮ್ಮ ಚಿಕ್ಕದೇವಿಬೆಟ್ಟ, ಬಿಳಿಗಿರಿರಂಗನಬೆಟ್ಟ, ಮಲೆಮಹಾದೇಶ್ವರ ಬೆಟ್ಟಕ್ಕೆ ಹೋಗಿ ಪೂಜೆ ಸಲ್ಲಿಸಿ ಬರುತ್ತೇವೆ. ಅದೇ ಮಾದರಿ ಯಲ್ಲಿ ಕಪಾಲಿಬೆಟ್ಟದ ಗ್ರಾಮದಲ್ಲಿ ಕ್ರೈಸ್ತ ಸಮು ದಾಯದವರು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ಜನರ ಬೇಡಿಕೆಯಂತೆ ಕ್ಷೇತ್ರದ ಶಾಸಕನಾಗಿ ಡಿ.ಕೆ.ಶಿವ ಕುಮಾರ್ ಕೈಗೊಂಡಿರುವ ಕ್ರಮ ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು. ಸಿಎಎದಲ್ಲಿ ಒಂದು ಧರ್ಮವನ್ನು ಕೈಬಿಡಲಾಯಿತು. ಈಗ ಸಣ್ಣ ವಿಚಾರವನ್ನೇ ದೊಡ್ಡದು ಮಾಡಿರುವುದನ್ನು ನೋಡಿದರೆ ಬಿಜೆಪಿ ನಾಯಕರ ಮನಸ್ಥಿತಿ ಯಾವ ಮಟ್ಟಿಗೆ ಇದೆ ಎನ್ನುವುದು ಕಾಣುತ್ತದೆ. ಇದೀಗ ಕ್ರೈಸ್ತ ಧರ್ಮದವರನ್ನು ಗುರಿಯಾಗಿಸಿಕೊಂಡು ಸಂಚು ನಡೆಸಲಾಗುತ್ತಿದೆ ಎಂದು ದೂರಿದರು.

ಅರ್ಥಮಾಡಿಕೊಳ್ಳಲಿ: ಕ್ರೈಸ್ತ ಮಿಷನರಿಗಳು, ದಲಿತರು, ಹಿಂದುಳಿದ ವರ್ಗದ ಜನರು ವಾಸಿಸುವ ಕುಗ್ರಾಮಗಳಲ್ಲಿ ಶಾಲೆ, ಆಸ್ಪತ್ರೆ ತೆರೆದರು. ಇದನ್ನು ಆರ್‍ಎಸ್‍ಎಸ್, ಬಿಜೆಪಿ ಮಾಡಿಲ್ಲ. ಸುಳ್ವಾಡಿ ಪ್ರಕರಣ ನಡೆದಾಗ ಕಾಮಗೆರೆ ಯಲ್ಲಿ ಆಸ್ಪತ್ರೆ ಇಲ್ಲದಿದ್ದರೆ ಅಂದು ಏನಾಗುತ್ತಿತ್ತು ಎನ್ನುವು ದನ್ನು ಯೋಚಿಸಬೇಕು ಎಂದು ತಿರುಗೇಟು ನೀಡಿದರು.

ಸಚಿವ ಕೆ.ಎಸ್.ಈಶ್ವರಪ್ಪ ಬಹಳ ಕೆಟ್ಟದಾಗಿ ಮಾತ ನಾಡುತ್ತಾರೆ. ಬೋವಿ ಸಮಾಜ, ಮಂಗಳಮುಖಿಯರ ಬಗೆಗೂ ಹೀಗೆ ಮಾತನಾಡಿದ್ದರು. ಈಗ ಕ್ರೈಸ್ತರ ಬಗ್ಗೆ ಮಾತನಾಡುತ್ತಾರೆ. ಸಚಿವರಾಗಿದ್ದುಕೊಂಡು ಮಾತ ನಾಡುವಾಗ ನಾಲಿಗೆಯ ಮೇಲೆ ಹಿಡಿತ ಇರಬೇಕು ಎಂದು ಬೇಸರ ವ್ಯಕ್ತಪಡಿಸಿದರು. ಏಸುಕ್ರಿಸ್ತನ ಪ್ರತಿಮೆಗೂ, ಸೋನಿಯಾಗಾಂಧಿ ಅವರಿಗೂ ಯಾವುದೇ ಸಂಬಂಧ ವಿಲ್ಲ. ಈ ವಿಚಾರದಲ್ಲಿ ಅವರ ಹೆಸರು ಪ್ರಸ್ತಾಪಿಸಿದ್ದು ಸರಿಯಲ್ಲ. ದೇವರ ಮೇಲೆ ಭಕ್ತಿ ಇರುವುದರಿಂದಲೇ ಡಿ.ಕೆ.ಶಿವಕುಮಾರ್ ಯಾವುದೇ ಕಾರ್ಯಕ್ಕೂ ಮುನ್ನ ಕಬ್ಬಾಳಮ್ಮನ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸು ತ್ತಾರೆ. ಅದನ್ನು ದೊಡ್ಡ ಕೇಂದ್ರವನ್ನಾಗಿ ಮಾಡಿದ್ದಾರೆ. ರಾಜಕೀಯ ಲಾಭದ ಆಸೆ ಇದ್ದಿದ್ದರೆ ಮಳವಳ್ಳಿಯಲ್ಲೋ, ಚಾಮರಾಜನಗರದಲ್ಲೋ ಮಾಡುತ್ತಿದ್ದರು. ಈಗ ಪ್ರತಿಮೆ ನಿರ್ಮಿಸುತ್ತಿರುವುದು ಅವರದೇ ಮತ ಕ್ಷೇತ್ರವಾಗಿದೆ ಎಂದು ಹೇಳಿದರು. ಕೇಂದ್ರದ ಮಾಜಿ ಸಚಿವ ಅನಂತ ಕುಮಾರ್ ಹೆಗಡೆ ಮೊದಲು ನಾವು ಅಧಿಕಾರಕ್ಕೆ ಬಂದಿ ರೋದು ಸಂವಿಧಾನ ಬದಲಿಸಲು ಎಂದಿದ್ದರು. ಈಗ ಹಿಂದುತ್ವದ ಹೆಸರಿನಲ್ಲಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಣ್ಣ ವಿಚಾರವನ್ನು ದೊಡ್ಡದು ಮಾಡದೆ ಇಲ್ಲಿಗೆ ಅಂತ್ಯ ಹಾಡಬೇಕು. ಹಿಂದೂ ಸಮಾಜ ದಲ್ಲಿರುವ ಮೌಢ್ಯ, ಅಸಮಾನತೆ ನಿವಾರಣೆಗೆ ಬಿಜೆಪಿ, ಆರ್‍ಎಸ್‍ಎಸ್ ಮುಂದಾಗಲಿ. ಮೊದಲು ತನ್ನಲ್ಲಿರುವ ಬಿರುಕು ಮುಚ್ಚದೆ ಬೇರೆ ಧರ್ಮದ ಬಗ್ಗೆ ಮಾತನಾಡು ವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

Translate »