ಎರಡು ದಿನಗಳ ಪಕ್ಷಿ ಉತ್ಸವಕ್ಕೆ ಚಾಲನೆ
ಮೈಸೂರು

ಎರಡು ದಿನಗಳ ಪಕ್ಷಿ ಉತ್ಸವಕ್ಕೆ ಚಾಲನೆ

December 29, 2019

ಮೈಸೂರು,ಡಿ.28(ಎಂಟಿವೈ)-ಪಕ್ಷಿ ವೀಕ್ಷಣೆ ಹವ್ಯಾಸ ಬೆಳೆಸಿಕೊಂಡು, ಅಳಿವಿ ನಂಚಿನಲ್ಲಿರುವ ಪಕ್ಷಿ ಸಂಕುಲ ಸಂರಕ್ಷಣೆಗೆ ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಅಭಿ ರಾಮ್ ಜಿ.ಶಂಕರ್ ಮನವಿ ಮಾಡಿದ್ದಾರೆ.

ಮಾಗಿ ಉತ್ಸವದ ಹಿನ್ನೆಲೆಯಲ್ಲಿ ಜಿಲ್ಲಾ ಡಳಿತ, ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಮೃಗಾಲಯದ ಸಂಯು ಕ್ತಾಶ್ರಯದಲ್ಲಿ ಮೃಗಾಲಯದ ಸಭಾಂಗಣ ದಲ್ಲಿ ಆಯೋಜಿಸಿದ್ದ ಎರಡು ದಿನಗಳ `ಪಕ್ಷಿ ಉತ್ಸವ’ ಕಾರ್ಯಕ್ರಮವನ್ನು ಶನಿವಾರ ಬೆಳಿಗ್ಗೆ ಉದ್ಘಾಟಿಸಿ ಮಾತನಾಡಿದ ಅವರು, ಮಾಗಿ ಉತ್ಸವದ ಹಿನ್ನೆಲೆಯಲ್ಲಿ ಎರಡನೇ ವರ್ಷದ ಪಕ್ಷಿಗಳ ಹಬ್ಬ ಆಯೋಜಿಸಿರುವುದು ಶ್ಲಾಘನೀಯ. ಎರಡು ದಿನಗಳ ಕಾಲ ನಡೆಯಲಿರುವ ಈ ಹಬ್ಬದಲ್ಲಿ ಪಕ್ಷಿಗಳ ಮಹತ್ತರ ಮಾಹಿತಿ ಹೊಂದಿರುವ ತಜ್ಞರು ಮಾಹಿತಿ ವಿನಿಮಯ ಮಾಡಿಕೊಳ್ಳಲಿದ್ದಾರೆ. ಪಕ್ಷಿ ವೀಕ್ಷಣೆ ಮಾಡುವವರು ಹಾಗೂ ಆಸಕ್ತರೇ ಪಾಲ್ಗೊಂಡಿರುವುದು ಶ್ಲಾಘನೀಯ ಎಂದರು.

ಪಕ್ಷಿ ವೀಕ್ಷಣೆಗೆ ಬೇರೆ ಬೇರೆ ಸ್ಥಳಕ್ಕೆ ಹೋಗುವ ಪರಿಪಾಠವಿದೆ. ಬಂಡೀಪುರ, ನಾಗರಹೊಳೆ ಸೇರಿದಂತೆ ವಿವಿಧ ಅರಣ್ಯ ಪ್ರದೇಶಗಳಲ್ಲಿ ದುಡ್ಡು ಕೊಟ್ಟು ಸಫಾರಿಗೆ ತೆರಳಿ ಪಕ್ಷಿಗಳ ಫೋಟೊ ತೆಗೆಯುವ ಹವ್ಯಾಸ ರೂಢಿಸಿಕೊಂಡಿದ್ದಾರೆ. ಆದರೆ ನಮ್ಮ ಸುತ್ತಮುತ್ತಲಿನ ಪ್ರದೇಶ, ಕೆರೆ-ಕಟ್ಟೆಗಳ ಬಳಿಯೇ ಸೂಕ್ಷ್ಮವಾಗಿ ಗಮನಿಸಿದರೆ ವಿವಿಧ ಬಗೆಯ ಪಕ್ಷಿಗಳನ್ನು ಕಾಣಬಹುದಾಗಿದೆ. ಹೀಗೆ ಹಣ ಖರ್ಚು ಮಾಡದೆ ಪಕ್ಷಿ ವೀಕ್ಷಣೆ ಮಾಡಬಹುದು. ಕೆಲವು ಅಳಿವಿ ನಂಚಿನಲ್ಲಿರುವ ಪಕ್ಷಿಗಳು ಸುರಕ್ಷಿತ ಜಾಗ ದಲ್ಲಿ ಮೊಟ್ಟೆಯಿಟ್ಟು ಮರಿ ಮಾಡಿರುತ್ತವೆ. ಮತ್ತೆ ಕೆಲವು ಜಾತಿಯ ಪಕ್ಷಿಗಳು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆದಿರುತ್ತವೆ. ಅದನ್ನು ಪಕ್ಷಿ ವೀಕ್ಷಕರು ಗುರುತಿಸಿದ್ದರೆ, ಆ ಸ್ಥಳದ ಬಗ್ಗೆ ಮಾಹಿತಿ ನೀಡಬಾರದು. ಇದರಿಂದ ಬೇಟೆ ಗಾರರು ಹಾಗೂ ಹೆಚ್ಚಿನ ಜನ ಸಂದಣಿ ಯಿಂದ ಅಳಿವಿನಂಚಿನಲ್ಲಿರುವ ಪಕ್ಷಿ ಸಂಕು ಲಕ್ಕೆ ಮತ್ತೆ ಆಘಾತವಾಗುವ ಸಾಧ್ಯತೆ ಯಿದೆ. ಈ ಹಿನ್ನೆಲೆಯಲ್ಲಿ ಪಕ್ಷಿಗಳ ಸ್ವಾತಂ ತ್ರ್ಯಕ್ಕೆ ಧಕ್ಕೆ ಬಾರದಂತೆ ಪಕ್ಷಿ ವೀಕ್ಷಣೆ ಮಾಡು ವಂತೆ ಸಲಹೆ ನೀಡಿದರು.

ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಮಾತನಾಡಿ. ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ನೆರವಿನೊಂದಿಗೆ ಪಕ್ಷಿ ಹಬ್ಬ ಆಚರಿಸ ಲಾಗುತ್ತಿದೆ. ಹಬ್ಬ ಎಂದರೆ ಸ್ಥಳ ಅಥವಾ ಯಾವುದಾದರೂ ವಿಷಯದ ಬಗ್ಗೆ ಮಹ ತ್ವದ ವಿಶೇಷತೆ ತಿಳಿಸುವ ಚಟುವಟಿಕೆ ಯಾಗಿದೆ. ಪಕ್ಷಿ ಹಬ್ಬವನ್ನು ಸಾಂಸ್ಕøತಿಕ ರೂಪದಲ್ಲಿ ಆಚರಿಸಲಾಗುತ್ತಿದೆ. ಕೆರೆ ಹಬ್ಬ, ಅರಣ್ಯ ಹಬ್ಬವನ್ನು ಸಾಂಸ್ಕøತಿಕ ಪರಂಪರೆ ಯಲ್ಲಿ ಆಚರಿಸಿ, ಹೆಚ್ಚಿನ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಪಕ್ಷಿಗಳ ಮೇಲೆ ಆಸಕ್ತಿ ಹೊಂದಿರುವವರು ಪಕ್ಷಿ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಇವರಿಗೆ ಪಕ್ಷಿಗಳ ಸಂರ ಕ್ಷಣೆ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಇದರಿಂದ ಮತ್ತಷ್ಟು ಮಂದಿಗೆ ಪಕ್ಷಿ ಉತ್ಸವದಲ್ಲಿ ಪಾಲ್ಗೊಂ ಡವರು ಜಾಗೃತಿ ಮೂಡಿಸಲಿದ್ದಾರೆ ಎಂದರು.

ಪಕ್ಷಿ ಉತ್ಸವದಂತಹ ಕಾರ್ಯಕ್ರಮಗಳು ಕನಿಷ್ಠ 5 ದಿನವಾದರೂ ನಡೆಯಬೇಕು. ಕೇವಲ ಮೈಸೂರು, ಬೆಂಗಳೂರಿಗೆ ಮಾತ್ರ ಪಕ್ಷಿ ಉತ್ಸವದಂತಹ ಕಾರ್ಯಕ್ರಮ ಸೀಮಿತ ವಾಗಿದೆ. ಬೇರೆ ಬೇರೆ ಜಿಲ್ಲೆಗಳಲ್ಲೂ ಪಕ್ಷಿ ಹಬ್ಬ ನಡೆಯಬೇಕು. ಅದರಲ್ಲೂ ಮುಖ್ಯವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಆಯೋಜಿಸು ವುದು ಬಹುಮುಖ್ಯ. ಹಂಪಿ ಉತ್ಸವದ ಸಂದರ್ಭದಲ್ಲಿ ಪಕ್ಷಿ ಉತ್ಸವ ಆಯೋ ಜಿಸಬೇಕು. ರಾಜ್ಯದಾದ್ಯಂತ ಪಕ್ಷಿ ಉತ್ಸವ ಸಮಿತಿಯೊಂದನ್ನು ರಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಉದ್ದೇಶಿಸಲಾಗಿದೆ.

ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ಮಾತ ನಾಡಿ, ಎರಡು ದಿನಗಳ ಈ ಉತ್ಸವದಲ್ಲಿ ಪಕ್ಷಿಗಳ ಬಗ್ಗೆ ಹೆಚ್ಚು ಮಾಹಿತಿ ಇರುವ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿ ದ್ದಾರೆ. ಪಾಲ್ಗೊಂಡಿರುವ 100 ಮಂದಿಯನ್ನು 6 ತಂಡಗಳಾಗಿ ವಿಂಗಡಿಸಿ, ಭಾನುವಾರ ಬೆಳಿಗ್ಗೆ 6ಕ್ಕೆ ಪಕ್ಷಿ ವೀಕ್ಷಣೆಗೆ ರಾಯನಕೆರೆ, ವರಕೋಡಿನ ಗಿರಿಬೆಟ್ಟದ ಕೆರೆ, ಹೆಬ್ಬಾಳು ಕೆರೆ, ತಿಪ್ಪಯ್ಯನಕೆರೆ, ಲಿಂಗಾಂಬುದಿ ಕೆರೆಗೆ ಕರೆದೊಯ್ಯಲಾಗುತ್ತದೆ. ನಂತರ ಮಧ್ಯಾಹ್ನ 3 ಗಂಟೆಗೆ ಉಪನ್ಯಾಸ. ಸಂಜೆ. 4ಕ್ಕೆ ಸಮಾ ರೋಪ ಸಮಾರಂಭ ನಡೆಯಲಿದೆ ಎಂದರು.

24 ಗಂಟೆಯಲ್ಲೇ 100 ಮಂದಿ ನೋಂದಣಿ: ಈ ಬಾರಿಯ ಪಕ್ಷಿ ಉತ್ಸವಕ್ಕೆ ಆನ್‍ಲೈನ್‍ನಲ್ಲಿ ನೋಂದಣಿ ಮಾಡಿ ಕೊಳ್ಳಲು ಮುಗಿಬಿದ್ದರು. ಡಿ.16ರಂದು ಮೃಗಾಲಯದ ವೆಬ್‍ಸೈಟ್‍ನಲ್ಲಿ ಹೆಸರು ನೋಂದಾಯಿಸಲು ಅವಕಾಶ ನೀಡಲಾ ಗಿತ್ತು. ಬೆಂಗಳೂರಿನಿಂದ 40ಕ್ಕೂ ಹೆಚ್ಚು ಮಂದಿ ಆಗಮಿಸಿರುವುದು ವಿಶೇಷ. ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಗಳಿಂದಲೂ ಪಕ್ಷಿ ವೀಕ್ಷಕರು ಆಗಮಿಸಿದ್ದಾರೆ. 12 ವರ್ಷ ದಿಂದ 65 ವರ್ಷ ವಯೋಮಾನದ ಪಕ್ಷಿ ವೀಕ್ಷಕರು ಪಾಲ್ಗೊಂಡಿರುವುದು ವಿಶೇಷ.

Translate »