ದಸರಾ ವಸ್ತು ಪ್ರದರ್ಶನಕ್ಕೆ ತೆರೆ
ಮೈಸೂರು

ದಸರಾ ವಸ್ತು ಪ್ರದರ್ಶನಕ್ಕೆ ತೆರೆ

December 29, 2019

ಮೈಸೂರು,ಡಿ.28(ಎಸ್‍ಬಿಡಿ)- ದಸರಾ ವಸ್ತು ಪ್ರದರ್ಶನಕ್ಕೆ ಶುಕ್ರವಾರವೇ ತೆರೆಬಿದ್ದಿದೆ. ಕ್ರಿಸ್‍ಮಸ್ ಹಾಗೂ ಹೊಸ ವರ್ಷಾ ಚರಣೆ ಹಿನ್ನೆಲೆಯಲ್ಲಿ ಹೆಚ್ಚು ಜನ ಭೇಟಿ ನೀಡುವುದರಿಂದ 9 ದಿನಗಳ ಕಾಲ ದಸರಾ ವಸ್ತು ಪ್ರದರ್ಶನ ಮುಂದೂಡಲು ಅನುಮತಿ ಕೋರಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ, ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಆದರೆ ಸರ್ಕಾರದಿಂದ ಯಾವುದೇ ಮಾಹಿತಿ ಬಾರದ ಹಿನ್ನೆಲೆಯಲ್ಲಿ ಪೂರ್ವ ನಿಗದಿತ ಅಧಿಕೃತ ದಿನ(ಡಿ.27)ದಂದೇ ವಸ್ತು ಪ್ರದರ್ಶನವನ್ನು ಮುಕ್ತಾಯಗೊಳಿಸಲಾಯಿತು ಎಂದು ಪ್ರಾಧಿ ಕಾರದ ಸಿಇಓ ಗಿರೀಶ್ ಸ್ಪಷ್ಟಪಡಿಸಿದ್ದಾರೆ.

ಪ್ರವಾಸಿಗರಿಗೆ ನಿರಾಶೆ: ದಸರಾ ವಸ್ತುಪ್ರದ ರ್ಶನ ಮುಕ್ತಾಯವಾಗಿರುವ ಬಗ್ಗೆ ಯಾವುದೇ ಮಾಹಿತಿ ಇರದ ಹಿನ್ನೆಲೆಯಲ್ಲಿ ಶನಿವಾರ ಪ್ರವಾಸಿಗರು ಸೇರಿದಂತೆ ಸಾವಿರಾರು ಸ್ಥಳೀ ಯರು ಆಗಮಿಸಿದ್ದರು. ಕ್ರಿಸ್‍ಮಸ್ ರಜೆ ಹಿನ್ನೆಲೆ ಯಲ್ಲಿ ಶಾಲಾ-ಕಾಲೇಜು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸ ಬಂದಿದ್ದರು. ಅಲ್ಲದೆ ಶನಿವಾರವಾದ ಕಾರಣ ಸ್ಥಳೀಯರೂ ವಸ್ತು ಪ್ರದರ್ಶನಕ್ಕೆಂದೇ ಸಾಕಷ್ಟು ಸಂಖ್ಯೆಯಲ್ಲಿ ತೆರಳಿದ್ದರು. ಆದರೆ ನಿನ್ನೆಯೇ ಮುಕ್ತಾಯ ವಾಗಿದೆ ಎಂದು ತಿಳಿದು ನಿರಾಶೆಯಿಂದ ವಾಪ ಸ್ಸಾದರು. ವಾಹನ ನಿಲ್ದಾಣ ಹಾಗೂ ವಸ್ತು ಪ್ರದರ್ಶನ ಹೊರ ಆವರಣದಲ್ಲಿ ಕೆಲ ವ್ಯಾಪಾರಿ ಗಳು ಉಳಿದ ವಸ್ತುಗಳ ಮಾರಾಟ ಮಾಡುತ್ತಿದ್ದರು.

12 ಲಕ್ಷ ಮಂದಿ ಭೇಟಿ: ಮೈಸೂರು ದಸರಾ-2019ರ ಅಂಗವಾಗಿ ಸೆ.29ರಿಂದ ಆರಂಭಗೊಂಡಿದ್ದ ದಸರಾ ವಸ್ತು ಪ್ರದರ್ಶ ನಕ್ಕೆ 90 ದಿನಗಳಲ್ಲಿ 11ರಿಂದ 12 ಲಕ್ಷ ಜನ ಭೇಟಿ ನೀಡಿರಬಹುದು ಎಂದು ಅಂದಾಜಿಸ ಲಾಗಿದೆ. ಪ್ರವೇಶ ದ್ವಾರದ ಟಿಕೆಟ್, ವಾಹನ ನಿಲುಗಡೆ, ಮನರಂಜನಾ ತಾಣ, ವಸ್ತು ಪ್ರದರ್ಶನದ ವಾಣಿಜ್ಯ ಮಳಿಗೆಗಳು, ಆಹಾರ ಮಳಿಗೆಗಳು ಸೇರಿದಂತೆ ದಸರಾ ವಸ್ತು ಪ್ರದರ್ಶನವನ್ನು ಬೆಂಗಳೂರಿನ ಫನ್‍ವಲ್ರ್ಡ್ ಇಂಡಿಯಾ ರೆಸಾರ್ಟ್ ಲಿ. ಸಂಸ್ಥೆಯು 8.25 ಕೋಟಿ ರೂ.ಗೆ ಗುತ್ತಿಗೆ ಪಡೆದಿತ್ತು. 43 ಸರ್ಕಾರಿ ಮಳಿಗೆಗಗಳು ಸೇರಿದಂತೆ ಒಟ್ಟು 220ಕ್ಕೂ ಹೆಚ್ಚು ಮಳಿಗೆಗಳಿದ್ದವು.

Translate »