ಜಿಲ್ಲೆಯನ್ನು ಮತ್ತೇ ವಶಕ್ಕೆ ಪಡೆಯಲು ಶ್ರಮಿಸಿ: ಆರ್.ಧ್ರುವನಾರಾಯಣ್
ಚಾಮರಾಜನಗರ

ಜಿಲ್ಲೆಯನ್ನು ಮತ್ತೇ ವಶಕ್ಕೆ ಪಡೆಯಲು ಶ್ರಮಿಸಿ: ಆರ್.ಧ್ರುವನಾರಾಯಣ್

January 30, 2019

ಗುಂಡ್ಲುಪೇಟೆ: ಕಾಂಗ್ರೆಸ್ ಭದ್ರಕೋಟೆಯಾಗಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಸಹ ಕೈ ವಶ ಮಾಡಿಕೊಳ್ಳಲು ಇಂದಿನಿಂದಲೇ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಸಂಸದ ಆರ್.ಧ್ರುವನಾರಾಯಣ್ ಕರೆ ನೀಡಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮುಂಬ ರುವ ಲೋಕಸಭೆ ಮತ್ತು ಪುರಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಕಾರ್ಯಕರ್ತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಚಾಮರಾಜನಗರ ಜಿಲ್ಲೆಯು ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಮುಂದಿನ ಲೋಕ ಸಭಾ ಚುನಾವಣೆಯಲ್ಲಿಯೂ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವ ಮುಖೇನ ಈ ಮಾತನ್ನು ಮತ್ತೇ ಸಾಬೀತು ಮಾಡಬೇಕು. ಏಪ್ರಿಲ್ ಕೊನೆಯ ವಾರದಲ್ಲಿ ಚುನಾವಣೆಯ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದ್ದು, ಇಂದಿನಿಂದಲೇ ಕಾರ್ಯ ಕರ್ತರು ಹಾಗೂ ಮುಖಂಡರು ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಮನವಿ ಮಾಡಿದರು.

ಕೇಂದ್ರದಲ್ಲಿದ್ದ ಯುಪಿಎ ಹಾಗೂ ಹಿಂದಿನ ಕಾಂಗ್ರೆಸ್ ಸರ್ಕಾರ ಬಡವರ ಪರವಾದ ನರೇಗಾ, ವಸತಿ ಯೋಜನೆ, ಅನ್ನಭಾಗ್ಯ ದಂತಹ ಯೋಜನೆಗಳನ್ನು ಜಾರಿಗೆ ತಂದಿತ್ತು. ನನ್ನ ಹತ್ತು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿನ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸುವುದು, ವಸತಿ ಯೋಜನೆಯ ಅನುಷ್ಠಾನ, ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೂ ಹೆಚ್ಚಿನ ಗಮನಹರಿಸಿ ಅಭಿವೃದ್ಧಿ ಕಾರ್ಯ ಮಾಡಿದ್ದು, ಮುಂಬರುವ ಚುನಾವಣೆಯಲ್ಲಿಯೂ ಹೆಚ್ಚಿನ ಮತಗಳಿಂದ ಜಯಗಳಿಸುವ ಭರವಸೆ ಯಿದೆ.

ಕಾರ್ಯಕರ್ತರು ಮನೆ ಮನೆಗಳಿಗೆ ತೆರಳಿ ಪಕ್ಷದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಕಾಂಗ್ರೆಸ್ ಸಾಧನೆಯನ್ನು ಮತದಾರರ ಮನ ಸ್ಸಿನಲ್ಲಿ ಮೂಡಿಸಿ. ಕಾರ್ಯಕರ್ತರು ಮತ್ತು ಮುಖಂಡರು ಯಾವುದೇ ರೀತಿಯ ಮನಸ್ತಾಪ ಗಳಿಗೆ ಒಳಗಾಗದೇ ಪಕ್ಷದ ಸಂಘಟನೆಗೆ ಮುಂದಾಗಿ ಎಂದು ಕಿವಿಮಾತು ಹೇಳಿದರು.

ಕಾಂಗ್ರೆಸ್ ಯುವ ಮುಖಂಡ ಹೆಚ್.ಎಂ. ಗಣೇಶ್ ಪ್ರಸಾದ್ ಮಾತನಾಡಿ, ದಿ.ಹೆಚ್. ಎಸ್.ಮಹದೇವ ಪ್ರಸಾದ್ ಅವರು ಪಟ್ಟಣ ಹಾಗೂ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದರು. ಅವರ ಹಾದಿಯಲ್ಲಿಯೇ ನಮ್ಮ ತಾಯಿ ಡಾ.ಎಂ.ಸಿ.ಮೋಹನ್ ಕುಮಾರಿ ಅವರು ಹೆಚ್ಚಿನ ಕಾಳಜಿ ವಹಿಸಿ ಪಟ್ಟಣದಲ್ಲಿ ತೀವ್ರವಾಗಿದ್ದ ಕುಡಿಯುವ ನೀರು ಸಮಸ್ಯೆ ಬಗೆಹರಿಸಲು ನದಿ ಮೂಲದಿಂದ ನೀರು ಸರಬರಾಜು ಮಾಡಲು ಪೈಪ್‍ಲೈನ್ ಅಳವಡಿಕೆಗೆ ಶ್ರಮವಹಿಸಿದರು. ಅಲ್ಲದೆ ಪಟ್ಟಣಕ್ಕೆ ಪ್ರತ್ಯೇಕ ಪೈಪ್‍ಲೈನ್ ಮಾರ್ಗ ನಿರ್ಮಿಸಲು ಯೋಜನೆ ರೂಪಿಸಿದ್ದರು. ತಾಲೂಕಿನ ಎಲ್ಲಾ ಹಳ್ಳಿಗಳಿಗೂ ಬಹು ಗ್ರಾಮ ಯೋಜನೆಯ ಮೂಲಕ ನೀರು ಸರಬರಾಜು ಮಾಡಲು ಕ್ರಮ ಕೈಗೊಂಡಿ ದ್ದರು. ತಮ್ಮ ಒಂದು ವರ್ಷದ ಅವಧಿ ಯಲ್ಲಿ ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತಂದಿದ್ದರು. ಈ ಬಗ್ಗೆ ಮನೆ ಮನೆಗೆ ತೆರಳಿ ಮತದಾರರಿಗೆ ಮನವರಿಕೆ ಮಾಡುವ ಮೂಲಕ ಮುಂಬರುವ ಎಲ್ಲಾ ಚುನಾ ವಣೆಯಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರು ವಂತೆ ಮಾಡಬೇಕು ಎಂದು ಕೋರಿದರು.

ವೀಕ್ಷಕ ಲೋಕೇಶ್ವರರಾವ್ ಮಾತನಾಡಿ, ಕಾರ್ಯಕರ್ತರು ಕಳೆದ ಬಾರಿ 1.40 ಲಕ್ಷ ಮತಗಳ ಅಂತರದಿಂದ ಸಂಸದ ಆರ್. ಧ್ರುವನಾರಾಯಣ್ ಜಯಗಳಿಸಿದ್ದು, ಈ ಬಾರಿ 2 ಲಕ್ಷ ಮತಗಳ ಅಂತದಲ್ಲಿ ಜಯ ದಾಖಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಧ್ಯಕ್ಷ ಮರಿಸ್ವಾಮಿ, ಮಾಜಿ ಸಂಸದ ಎ. ಸಿದ್ದರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಎಂ.ಮುನಿರಾಜು, ಪಿ.ಬಿ.ರಾಜಶೇಖರ್, ಕಾಡಾ ಮಾಜಿ ಅಧ್ಯಕ್ಷ ಹೆಚ್.ಎಸ್.ನಂಜಪ್ಪ, ಜಿಪಂ ಸದಸ್ಯರಾದ ಬಿ.ಕೆ.ಬೊಮ್ಮಯ್ಯ, ಕೆ.ಎಸ್.ಮಹೇಶ್, ಪಿ.ಚನ್ನಪ್ಪ, ಅಶ್ವಿನಿ ವಿಶ್ವನಾಥ್, ತಾಪಂ ಅಧ್ಯಕ್ಷ ಜಗದೀಶ ಮೂರ್ತಿ, ಪುರಸಭಾ ಸದಸ್ಯರಾದ ಪಿ.ಚಂದ್ರಪ್ಪ, ಭಾಗ್ಯಮ್ಮ, ವೆಂಕಟಾಚಲ, ಹಿರಿಯ ಮುಖಂಡ ರಾದ ಹೆಚ್.ಎಸ್.ನಂಜುಂಡಪ್ರಸಾದ್, ವೈ.ಎನ್.ರಾಜಶೇಖರ್, ಮಡಿವಾಳಪ್ಪ, ಕೊಡ ಸೋಗೆ ಶಿವಬಸಪ್ಪ, ಲಿಂಗರಾಜು, ಮಂಚಳ್ಳಿ ಲೋಕೇಶ್, ಅಜರ್‍ಪಾಷ, ಬಿ.ಕುಮಾರಸ್ವಾಮಿ, ಎಲ್.ಸುರೇಶ್ ಸೇರಿದಂತೆ ವಿವಿಧ ಘಟಕ ಗಳ ಪದಾಧಿಕಾರಿಗಳು, ಕಾರ್ಯಕರ್ತರಿದ್ದರು.

Translate »