ದೋಷರಹಿತ ಪಟ್ಟಿ ತಯಾರಿಕೆಗೆ ಸಹಕರಿಸಲು ಮನವಿ: ಡಿಸಿ ಬಿ.ಬಿ.ಕಾವೇರಿ
ಚಾಮರಾಜನಗರ

ದೋಷರಹಿತ ಪಟ್ಟಿ ತಯಾರಿಕೆಗೆ ಸಹಕರಿಸಲು ಮನವಿ: ಡಿಸಿ ಬಿ.ಬಿ.ಕಾವೇರಿ

January 30, 2019

ಚಾಮರಾಜನಗರ: ಜಿಲ್ಲೆಯಲ್ಲಿ ಶೇ.100ರಷ್ಟು ದೋಷರಹಿತ ಮತ ದಾರರ ಪಟ್ಟಿ ತಯಾರಿಕೆಗೆ ರಾಜಕೀಯ ಪಕ್ಷಗಳು ಸಂಪೂರ್ಣ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮನವಿ ಮಾಡಿದರು.

ತಮ್ಮ ಕಚೇರಿ ಸಭಾಂಗಣದಲ್ಲಿ ಇಂದು ಅಂತಿಮ ಮತದಾರರ ಪಟ್ಟಿ ಪ್ರಚಾರ ಹಾಗೂ ನಿರಂತರ ಪರಿಷ್ಕರಣೆ ಸಂಬಂಧ ನಡೆದ ವಿವಿಧ ಪಕ್ಷದ ಪ್ರತಿನಿಧಿಗಳ ಸಭೆಯ ಅಧ್ಯ ಕ್ಷತೆ ವಹಿಸಿ ಅವರು ಮಾತನಾಡಿದರು.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜ.1 ರಂದು ಅರ್ಹತಾ ದಿನಾಂಕ ನಿಗದಿಪಡಿಸಿ ತಯಾರಿಸಿರುವ ಭಾವಚಿತ್ರವಿರುವ ಅಂತಿಮ ಮತದಾರರ ಪಟ್ಟಿಯನ್ನು ಜ.16ರಂದು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಎಲ್ಲಾ ಮತ ಗಟ್ಟೆಗಳಲ್ಲಿ ಪ್ರಚುರಪಡಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ 4,13,356 ಪುರುಷರು, 4,16, 278 ಮಹಿಳೆಯರು, 62 ಮಂದಿ ಇತರರು ಸೇರಿದಂತೆ ಒಟ್ಟು 8,29,696 ಮಂದಿ ಅಂತಿಮ ಮತದಾರರ ಪಟ್ಟಿಯಲ್ಲಿದ್ದಾರೆ. ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಯಲ್ಲಿ 1,05,569 ಪುರುಷರು, 1,02,123 ಮಹಿ ಳೆಯರು, 14 ಮಂದಿ ಇತರರು ಸೇರಿದಂತೆ ಒಟ್ಟು 2,07,706 ಮತ ದಾರರು. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1,04,568 ಪುರುಷರು, 1,06,001 ಮಹಿಳೆಯರು, 18 ಮಂದಿ ಇತರರು ಸೇರಿ ದಂತೆ ಒಟ್ಟು 2,10,587 ಮತದಾರರು, ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1,01,125 ಪುರುಷರು, 1,04,069 ಮಹಿಳೆಯರು, 16 ಮಂದಿ ಇತರರು ಸೇರಿದಂತೆ ಒಟ್ಟು 2,05,210 ಮತದಾ ರರು, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1,02,094 ಪುರುಷರು, 1,04,085 ಮಹಿಳೆಯರು, 14 ಮಂದಿ ಇತರರು ಸೇರಿದಂತೆ ಒಟ್ಟು 2,06,193 ಮಂದಿ ಅಂತಿಮ ಮತ ದಾರರ ಪಟ್ಟಿಯಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಯಾವುದೇ ಮತದಾರರು ಮತದಾನ ದಿಂದ ಹೊರಗುಳಿಯಬಾರದು ಎಂಬುದು ಚುನಾವಣಾ ಆಯೋಗದ ಉದ್ದೇಶವಾಗಿದೆ. ರಾಜಕೀಯ ಪಕ್ಷಗಳು ಪ್ರತಿ ಮತಗಟ್ಟೆಗಳ ಮತದಾರರ ಪಟ್ಟಿಯನ್ನು ಈಗಲೇ ಪರಿಶೀ ಲಿಸಿಕೊಂಡು ಅಂತಿಮ ಮತದಾರರ ಪಟ್ಟಿ ಯಲ್ಲಿ ಅರ್ಹ ಮತದಾರರ ಹೆಸರು ಕೈಬಿಟ್ಟು ಹೋಗಿದ್ದಲ್ಲಿ ಅಂತಹವರ ಹೆಸರುಗಳನ್ನು ಪಟ್ಟಿಗೆ ಸೇರ್ಪಡೆಗೊಳಿಸಲು ಸಹ ಕರಿಸಬೇಕು ಎಂದರು.

ಮತದಾರರ ಪಟ್ಟಿಯಲ್ಲಿ ಹೆಸರು ಪುನ ರಾವರ್ತನೆ, ಕಾಗುಣಿತ ಲೋಪ, ಮರಣ ಹೊಂದಿದ ಪ್ರಕರಣಗಳು ಕಂಡುಬಂದಲ್ಲಿ ಅವುಗಳನ್ನು ಸರಿಪಡಿಸಲು ಸಹ ಸಹಕಾರ ನೀಡಬೇಕು. ಹಾಲಿ ನಿರಂತರ ಪರಿಷ್ಕರಣಾ ಕಾರ್ಯದಲ್ಲಿ 18ರಿಂದ 19 ವರ್ಷ ವಯೋ ಮಾನದ ದಿವ್ಯಾಂಗರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಬೇಕಿದೆ. ಈವರೆ ವಿಗೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳ್ಳದಿರುವವರನ್ನು ಸೇರ್ಪಡೆ ಗೊಳಿಸುವುದು ಸಹ ಮುಖ್ಯ ಕಾರ್ಯ ವಾಗಿದೆ ಎಂದು ಹೇಳಿದರು.

ರಾಜಕೀಯ ಪಕ್ಷಗಳು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲ ಮತಗಟ್ಟೆಗಳಿಗೆ ಮತಗಟ್ಟೆ ಮಟ್ಟದ ಏಜೆಂಟರನ್ನು (ಬಿಎಲ್‍ಎ) ನೇಮಕ ಮಾಡಿ ಮತದಾರರ ಪಟ್ಟಿ ಸಿದ್ಧತೆಗೆ ಕೈಜೋಡಿಸಬೇಕಿದೆ. ಮತದಾನದ ಹಕ್ಕು ಜವಾಬ್ದಾರಿ, ನೈತಿಕ ಚುನಾವಣೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.

ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಚುನಾವಣಾ ವಿಷ ಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿ ಕರು ಅಹವಾಲು ಮನವಿಗಳನ್ನು ಜಿಲ್ಲಾ ಧಿಕಾರಿಗಳ ಕಚೇರಿಯ ಕೊಠಡಿ ಸಂಖ್ಯೆ 104ರಲ್ಲಿ ತೆರೆಯಲಾಗಿರುವ ಡಿಸ್ಟ್ರಿಕ್ಟ್ ಕಾಲ್ ಸೆಂಟರ್‍ನ ಟೋಲ್ ಫ್ರೀ ಸಂಖ್ಯೆ 082 26-1950ಗೆ ಕರೆ ಮಾಡಿ ತಿಳಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಇದೇ ವೇಳೆ ಅಂತಿಮ ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿ ಗಳಿಗೆ ಜಿಲ್ಲಾಧಿಕಾರಿ ವಿತರಿಸಿದರು. ಪ್ರತಿ ನಿಧಿಗಳಾದ ಎಂ.ಚಿಕ್ಕಮಹದೇವು, ಪರಶಿವ ಮೂರ್ತಿ, ಎಸ್. ಮಹೇಶ್‍ಗೌಡ, ಬ್ಯಾಡ ಮೂಡ್ಲು ಬಸವಣ್ಣ, ಇತರರಿದ್ದರು.

Translate »