ಕೇಂದ್ರ ಬಜೆಟ್; ಕಣ್ಣೊರೆಸುವ ತಂತ್ರ
ಕೊಡಗು

ಕೇಂದ್ರ ಬಜೆಟ್; ಕಣ್ಣೊರೆಸುವ ತಂತ್ರ

February 2, 2019

ಗೋಣಿಕೊಪ್ಪಲು: ಕೇಂದ್ರ ಸರ್ಕಾರದ ಹಣಕಾಸು ಖಾತೆ ಸಚಿವ ಪಿಯೂಷ್ ಗೋಯಲ್ ಮಂಡಿಸಿದ ಮಧ್ಯಂತರ ಬಜೆಟ್‍ನ ನಿರೀಕ್ಷೆಗಳು ಹುಸಿಯಾಗಿವೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಟೀಕಿಸಿದ್ದಾರೆ.

ಬಡವರ, ಮಧ್ಯಮವರ್ಗದ ಮೇಲೆ ಗದಾ ಪ್ರಹಾರವಾಗಿದ್ದು, ಬಜೆಟ್‍ಅನ್ನು ಸೂಕ್ಷ್ಮವಾಗಿ ಗಮನಿಸಿದರೆ ಬಂಡವಾಳ ಶಾಹಿಗಳಿಗೆ ಅನು ಕೂಲಕರವಾದ ಬಜೆಟ್ ಆಗಿದೆ. ಆದಾಯ ಮಿತಿ ತೆರಿಗೆಯನ್ನು 5 ಲಕ್ಷಕ್ಕೆ ಹೆಚ್ಚಿ ಸಿರುವುದು ಹೊರತುಪಡಿಸಿದ್ದಲ್ಲಿ ಜನತೆಗೆ ಯಾವುದೇ ಪ್ರಯೋಜನ ಕಂಡು ಬರುತ್ತಿಲ್ಲ ಎಂದಿದ್ದಾರೆ. ಕಾಫಿ, ಕರಿಮೆಣಸು ಬೆಳೆಗಾರರಿಗೆ ಬಜೆಟ್‍ನಿಂದ ಯಾವುದೇ ಪ್ರಯೋಜನವಾಗಿಲ್ಲ. ಮುಂಗಡ ಪತ್ರವು ಕೇವಲ ಕಣ್ಣೊರೆಸುವ ತಂತ್ರವಾಗಿದ್ದು, ಬಿಜೆಪಿಯ ಮುಂದಿನ ಲೋಕಸಭೆ ಚುನಾವಣೆಯ ಪ್ರಣಾಳಿಕೆಯಾಗಿದೆ. ನೂರು ದಿನದಲ್ಲಿ ಕಪ್ಪು ಹಣ ತರುತ್ತೇನೆ ಎಂಬ ಭರವಸೆ ನೀಡಿದ್ದ ಪ್ರಧಾನ ಮಂತ್ರಿ ಯವರ ಮಾತು ಸುಳ್ಳಾಗಿದೆ. ನೋಟು ಅಮಾನ್ಯದಿಂದ ದೇಶದ ಆರ್ಥಿಕ ವ್ಯವಸ್ಥೆ ಬುಡ ಮೇಲಾಗಿದ್ದು, ಅವೈಜ್ಞಾನಿಕ ತೆರಿಗೆ ನೀತಿಯಿಂದಾಗಿ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಡವರ ಖಾತೆಗೆ ಹತ್ತು ಲಕ್ಷ ಹಣ ಜಮಾ ಮಾಡು ವುದಾಗಿ ಹೇಳಿದ್ದ ಮೋದಿಯವರು ಮಾತನ್ನು ಮರೆತಿದ್ದಾರೆ.

ಪ್ರಕೃತಿ ವಿಕೋಪಕ್ಕೆ ತುತ್ತಾದ ಪ್ರದೇಶಗಳಿಗೆ ಸೂಕ್ತವಾದ ಪರಿಹಾರ ಕಲ್ಪಿ ಸಿಲ್ಲ. ಎರಡು ಎಕರೆ ಉಳ್ಳ ರೈತನಿಗೆ ಮಾಸಿಕ 500 ಭತ್ಯೆ ನೀಡುವ ಘೋಷ ಣೆಯಿಂದಾಗಿ ರೈತರಿಗೆ ಅಪಮಾನ ಮಾಡಿದಂತಾಗಿದೆ. ಕೇವಲ 15 ದಿನಗಳ ಹಿಂದೆ ಹಣಕಾಸು ಖಾತೆಯನ್ನು ಪಡೆದುಕೊಂಡ ಸಚಿವ ಪಿಯೂಷ್ ಗೋಯಲ್ ಯಾವುದೇ ಪ್ರಯೋಜನಕಾರಿ ಬಜೆಟ್ ನೀಡುವಲ್ಲಿ ವಿಫಲ ರಾಗಿದ್ದಾರೆ ಎಂದು ಸಂಕೇತ್ ಪೂವಯ್ಯ ಟೀಕಿಸಿದ್ದಾರೆ.

Translate »