ಅಕ್ರಮವಾಗಿ ಸಾಗಿಸುತ್ತಿದ್ದ ಮರ ವಶ
ಕೊಡಗು

ಅಕ್ರಮವಾಗಿ ಸಾಗಿಸುತ್ತಿದ್ದ ಮರ ವಶ

February 2, 2019

ಗೋಣಿಕೊಪ್ಪಲು: ಅಕ್ರಮವಾಗಿ ಬೀಟೆ ನಾಟ ಸಾಗಿಸುತ್ತಿದ್ದ ಸಂದರ್ಭ ದಾಳಿ ನಡೆಸಿರುವ ಪೊನ್ನಂ ಪೇಟೆ ವಲಯ ಅರಣ್ಯ ಅಧಿಕಾರಿಗಳು ಲಾರಿ ಸೇರಿ ದಂತೆ ಸುಮಾರು 12.5 ಲಕ್ಷದ ಮರ ವಶ ಪಡಿಸಿಕೊಂ ಡಿದ್ದಾರೆ. ಈ ಸಂಬಂಧ ಮೂವರ ವಿರುದ್ದ ಪ್ರಕರಣ ದಾಖಲಾಗಿದ್ದು, ಓರ್ವ ಆರೋಪಿಯನ್ನು ಬಂಧಿಸ ಲಾಗಿದೆ. ಉಳಿದ ಇಬ್ಬರು ತಲೆಮರೆಸಿಕೊಂಡಿದ್ದಾರೆ.

ಅರೆಕಾಡು ನಿವಾಸಿ ಶಭಾದ್ (22) ಬಂಧಿತ ಆರೋಪಿ ಯಾಗಿದ್ದು, ಸಿದ್ದಾಪುರ ಗ್ರಾಮದ ದೀಪಕ್ ವಾಲ್ಟರ್ (36) ಹಾಗೂ ಹನ್ಸದ್ (23) ತಲೆ ಮರೆಸಿಕೊಂಡಿದ್ದಾರೆ.

ಗೋಣಿಕೊಪ್ಪ ಭಾಗದಿಂದ ಕೇರಳಕ್ಕೆ ಮರ ಸಾಗಿಸು ತ್ತಿದ್ದ ಸಂದರ್ಭ ಕುಟ್ಟ ತಪಾಸಣಾ ಕೇಂದ್ರದಲ್ಲಿ ಕಾರ್ಯಾ ಚರಣೆ ನಡೆಸಿ ರೂ. 10 ಲಕ್ಷ ಮೌಲ್ಯದ ಐಶರ್ ಲಾರಿ ಹಾಗೂ 2.5 ಲಕ್ಷ ಮೌಲ್ಯದ 17 ನಾಟಗಳಿದ್ದ 2.358 ಘನ ಮೀಟರ್ ಮರವನ್ನು ವಶಕ್ಕೆ ಪಡೆಯಲಾಗಿದೆ. ಡಿಸಿಎಫ್ ಮರಿಯಾ ಕ್ರೈಸ್ತರಾಜ್ ಹಾಗೂ ಎಸಿಎಫ್ ಶ್ರೀಪತಿ ಮಾರ್ಗದರ್ಶನದಲ್ಲಿ ಪೊನ್ನಂಪೇಟೆ ವಲಯ ಅಧಿಕಾರಿ ಗಂಗಾಧರ್ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಉಪ ವಲಯ ಅರಣ್ಯಾಧಿಕಾರಿ ಮೂರ್ತಿ, ಅರಣ್ಯ ರಕ್ಷಕ ಸಂಜಯ್ ಚೌಹಾಣ್ ಕಾರ್ಯಾಚರಣೆಯಲ್ಲಿದ್ದರು.

 

Translate »