ಪ್ರೀತಿಸುವಂತೆ ಕಿರುಕುಳ; ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ
ಚಾಮರಾಜನಗರ

ಪ್ರೀತಿಸುವಂತೆ ಕಿರುಕುಳ; ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

June 30, 2018
  • ಸಾವು-ಬದುಕಿನ ನಡುವೆ ಹೋರಾಟ
  • ಯುವಕ ನಾಪತ್ತೆ

ಚಾಮರಾಜನಗರ: ಯುವಕನೊಬ್ಬ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದರಿಂದ ಮನನೊಂದು ವಿದ್ಯಾರ್ಥಿನಿ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿ ಸಿರುವ ಘಟನೆ ತಾಲೂಕಿನ ಅಮ್ಮನಪುರ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಕಾಗಲವಾಡಿ ಗ್ರಾಮದ ಟಿ.ಎಸ್. ಸುಬ್ಬಣ್ಣ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಆತ್ಮ ಹತ್ಯೆಗೆ ಯತ್ನಿಸಿದ್ದು, ಈಗ ಸಾವು-ಬದು ಕಿನ ನಡುವೆ ಹೋರಾಡುತ್ತಿದ್ದಾಳೆ.

ಘಟನೆಯ ವಿವರ: ಅಮ್ಮನಪುರ ಗ್ರಾಮದ ವಿದ್ಯಾರ್ಥಿನಿ ಕಾಗಲವಾಡಿ ಗ್ರಾಮದ ಟಿ.ಎಸ್. ಸುಬ್ಬಣ್ಣ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗಕ್ಕೆ ಸೈಕಲ್ ಅಥವಾ ನಡೆದು ಕೊಂಡು ಪ್ರತಿದಿನ ಬರುತ್ತಿದ್ದಳು. ಈ ವೇಳೆ ರೇಚಂಬಳ್ಳಿ ಗ್ರಾಮದ ಮನು ಉ.ಗುಂಡಾ ಪುರಿ ಎಂಬ ಯುವಕನ ಪರಿಚಯವಾಗಿದೆ ಎನ್ನಲಾಗಿದೆ. ಮನು ನಗರದ ಕಾಲೇ ಜೊಂದರಲ್ಲಿ ಐಟಿಐ ವ್ಯಾಸಂಗ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ.

ವಿದ್ಯಾರ್ಥಿನಿಗೆ ಪರಿಚಯವಾದ ಮನು ತನ್ನನ್ನು ಪ್ರೀತಿಸುವಂತೆ ಆಕೆಯ ಮೇಲೆ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ. ಶನಿವಾರ (ಜೂ.23) ನನ್ನನ್ನು ಭೇಟಿ ಮಾಡಲೇ ಬೇಕು. ನನ್ನನ್ನು ಪ್ರೀತಿಸುತ್ತೇನೆ ಎಂದು ಹೇಳಲೇಬೇಕು ಎಂದು ಮನು ಒತ್ತಡ ಹೇರಿದ್ದ ಎಂದು ತಿಳಿದು ಬಂದಿದೆ. ಇದರಿಂದ ಹೆದರಿದ ವಿದ್ಯಾರ್ಥಿನಿ ಮನೆಗೆ ತೆರಳಿದ್ದಳು. ಈ ವೇಳೆ ಮಂಕಾಗಿದ್ದ ವಿದ್ಯಾರ್ಥಿನಿಯನ್ನು ಪೋಷಕರು ಪ್ರಶ್ನಿಸಿದ್ದಾರೆ. ಆಕೆ ಹುಷಾರಿಲ್ಲ ಎಂದಿದ್ದಾಳೆ. ಭಾನುವಾರ ಬೆಳಿಗ್ಗೆ ವಿಳಂಬವಾಗಿ ಎದ್ದಿದ್ದಾಳೆ. ಮಧ್ಯಾಹ್ನ 12.30ರ ವೇಳೆಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ವಿಷಯ ತಿಳಿದ ಪೋಷಕರು ಹಾಗೂ ಗ್ರಾಮಸ್ಥರು ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ದ್ದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಖ ಸೇರಿದಂತೆ ದೇಹದ ಬಹುತೇಕ ಭಾಗ ಸುಟ್ಟುಹೋಗಿ ರುವ ಕಾರಣ ವಿದ್ಯಾರ್ಥಿನಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.

ಈ ಸಂಬಂಧ ವಿದ್ಯಾರ್ಥಿನಿಯ ತಂದೆ ರಾಮಸಮುದ್ರ ಪೊಲೀಸ್ ಠಾಣೆಗೆ ಮನು ವಿರುದ್ಧ ದೂರು ದಾಖಲಿಸಿದ್ದಾರೆ. ಫೋಸ್ಕೊ ಕಾಯ್ದೆ (ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ) ಹಾಗೂ ಕೊಲೆ ಬೆದರಿಕೆ ಪ್ರಕರಣ ದಾಖಲಾಗಿದ್ದು, ನಾಪತ್ತೆ ಆಗಿರುವ ಮನು ಪತ್ತೆಗೆ ಕ್ರಮಕೈಗೊಳ್ಳಲಾಗಿದೆ ಎಂದು ರಾಮಸಮುದ್ರ ಪೊಲೀಸ್ ಠಾಣೆ ಸಬ್‍ಇನ್ಸ್‍ಪೆಕ್ಟರ್ ‘ಮಿತ್ರ’ನಿಗೆ ತಿಳಿಸಿದರು.

Translate »