ಟಿಸಿ ನೀಡಲು ಅಲೆಸ್ತೀರಾ.. ಸವಲತ್ತು ವಿತರಣೆಗೆ ನನ್ನ ಅನುಮತಿ ಕಡ್ಡಾಯ!
ಚಾಮರಾಜನಗರ

ಟಿಸಿ ನೀಡಲು ಅಲೆಸ್ತೀರಾ.. ಸವಲತ್ತು ವಿತರಣೆಗೆ ನನ್ನ ಅನುಮತಿ ಕಡ್ಡಾಯ!

June 30, 2018
  • ಮೀನುಗಾರಿಕೆ, ಸೆಸ್ಕ್ ಅಧಿಕಾರಿಗೆ ತರಾಟೆ, ಬಾರದ ಕಾರ್ಮಿಕ ಅಧಿಕಾರಿಗೂ ಕ್ಲಾಸ್.!

ಕೊಳ್ಳೇಗಾಲ: ಟಿಸಿ ನೀಡಲು ರೈತರನ್ನು ಅಲೆಸ್ತೀರಾ… ಲಿಂಗರಾಜ್ ನಿಮ್ಮ ಹಾಗೂ ನಿಮ್ಮ ಇಲಾಖೆ ಬಗ್ಗೆ ಸಾಕಷ್ಟು ದೂರಿದೆ ಎಂದು ಚೆಸ್ಕಾಂ ಇಲಾಖೆಯ ಅಧಿಕಾರಿಯನ್ನು ಸಚಿವ ಎನ್.ಮಹೇಶ್ ತರಾಟೆ ತೆಗೆದು ಕೊಂಡ ಪ್ರಸಂಗ ನಡೆಯಿತು.

ಶುಕ್ರವಾರ ತಾಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಮಾತನಾಡಿ, ನಿಮ್ಮ ಇಲಾಖೆಯದ್ದೇ ಸಾಕಷ್ಟು ತಲೆನೋವು. ಟಿಸಿ ಕೆಟ್ಟರೆ ದುರಸ್ಥಿ ಮಾಡಲು ತಿಂಗಳುಗಟ್ಟಲೆ ಅಲೆಸುತ್ತೀರಾ? ಎಂದು ಚಾಟಿ ಬೀಸಿದರು. ನನ್ನ ಕ್ಷೇತ್ರದಲ್ಲಿ ಯಾವುದೇ ಸವಲತ್ತು ವಿತರಿಸಬೇಕಾದರೂ ನನ್ನ ಅನು ಮತಿ ಪಡೆಯಬೇಕು. ನನಗೆ ಆಹ್ವಾನ ನೀಡ ಬೇಕು. ಈ ರೀತಿ ಆಹ್ಚಾನ ನೀಡದ ಮೀನು ಗಾರಿಕೆ ಅಧಿಕಾರಿ ಕ್ರಮ ಸರಿಯಲ್ಲ ಎಂದು ಮೀನುಗಾರಿಕೆ ಅಧಿಕಾರಿ ಪ್ರಶಾಂತ್ ವರ್ತನೆ ವಿರುದ್ಧ ಸಚಿವರು ಕಿಡಿಕಾರಿದರು.

ಇಂದಿನ ಸಭೆಗೆ ಆತ ಗೈರಾಗಿದ್ದಾನೆ. ನನ್ನ ಗಮನಕ್ಕೆ ಬರದೆ ನನ್ನದೇ ಕ್ಷೇತ್ರದಲ್ಲಿ ಸವಲತ್ತು ವಿತರಣೆಗೂ ಮುಂದಾಗಿದ್ದಾರೆ. ಇನ್ನು ಮುಂದೆ ನನ್ನ ಗಮನಕ್ಕೆ ತಾರದೆ ಸವಲತ್ತು ವಿತರಣೆಗೆ ಮುಂದಾದರೆ ಮನೆಗೆ ಹೋಗ್ತಿರಾ ಎಂದು ಮೀನುಗಾರಿಕೆ ಹಿರಿಯ ಅಧಿಕಾರಿಯ ವಿರುದ್ಧ ಸಚಿವರು ಗರಮ್ಮಾದರು.

ನಿಮ್ಮ ಪಿಎಸೈ ಛೇರ್ ಹಾಕಲ್ವಂತಲ್ಲಾ: ನಿಮ್ಮ ಪಿಎಸೈ ವೀಣಾನಾಯಕ್‍ಗೆ ಬುದ್ದಿ ಹೇಳಿ ಎಂದು ಡಿವೈಎಸ್‍ಪಿ ಪುಟ್ಟಮಾ ದಯ್ಯ ಅವರಿಗೆ ಸಚಿವ ಎನ್ ಮಹೇಶ್ ಅವರು ಪಾಠ ಮಾಡಿದ ಪ್ರಸಂಗವೂ ಸಭೆಯಲ್ಲಿ ಜರುಗಿತು.

ಅವರು ಬೇರೆ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಿದಂತೆ ಇಲ್ಲ? ಅದೇ ಭಾಷೆಯಲ್ಲಿ ಮಾತನಾಡುತ್ತಾರೆ. ಬಂದ ನಾಗರಿಕರಿಗೆ ಛೇರ್ ನೀಡದೆ ಕ್ರಿಮನಲ್‍ನಂತೆ ಕಾಣುತ್ತಾರೆ ಎಂಬ ದೂರುಗಳು ಬಂದಿವೆ, ಕ್ರಿಮಿ ನಲ್‍ಗಳನ್ನು ನೀವು ದಂಡಿಸಿ. ಕ್ರಿಮಿನಲ್ ಅಲ್ಲದವರನ್ನು ಸೌಜನ್ಯವಾಗಿ ಕಾಣುವಂತೆ ಸಲಹೆ ನೀಡಿ. ಅವರಿಗೆ ಭಾಷೆಯ ಹಿಡಿತ ಹೇಳಿ, ಜನಸ್ನೇಹಿ ಅಧಿಕಾರಿಯಂತೆ ವರ್ತಿ ಸಲು ತಿಳಿಸಿ ಎಂದು ಸೂಚಿಸಿದರು.

ಕೊಳ್ಳೇಗಾಲದಲ್ಲಿ ಟ್ರಾಫಿಕ್ ಸಂಚಾರಿ ಠಾಣೆ ಪ್ರಾರಂಭಕ್ಕೆ ಪ್ರಸ್ತಾವನೆ ಪಟ್ಟಿ ನನಗೆ ಸಲ್ಲಿಸಿ, ಮುಖ್ಯಮಂತ್ರಿಗಳ ಜೊತೆ ಚರ್ಚಿ ಸುತ್ತೇನೆ ಎಂದು ಸಚಿವರು ಹೇಳಿದರು. ಕೊಳ್ಳೇಗಾಲದ 31 ವಾರ್ಡ್ ಹಾಗೂ ಯಳಂ ದೂರು ಪಟ್ಟಣ ವ್ಯಾಪ್ತಿಯಲ್ಲಿ ಇಸ್ವತ್ತು ಮಾಡಿಕೊಡುವ ಕುರಿತು ಅಗತ್ಯ ಕ್ರಮಕೈ ಗೊಳ್ಳಿ. ರಾಜ್ಯಾದ್ಯಂತ ದಾಖಲೆ ಇಲ್ಲದೆ ಬವಣೆ ಪಡುವ ನಾಗರಿಕರಿಗೆ ಸಾಧ್ಯ ವಾದಷ್ಟು ಮಟ್ಟಿಗೆ ದಾಖಲೆ ಒದಗಿಸಿ. ಇಸ್ವತ್ತು ಕಲ್ಪಿಸುವ ನೂತನ ಕ್ರಮ ಕೊಳ್ಳೇ ಗಾಲದಿಂದಲೇ ಜಾರಿಗೆ ಸಹಕಾರ ನೀಡಿ. ಅಂತಹ ಪ್ರಕರಣಗಳನ್ನು ಪಟ್ಟಿ ಮಾಡಿ ನೀಡಿದರೆ ಮುಖ್ಯಮಂತ್ರಿಗಳ ಗಮನ ಸೆಳೆಯುತ್ತೇನೆ. ಮಂತ್ರಿ ಮಂಡಲ ಸಭೆಯ ಗಮನಕ್ಕೂ ತರುತ್ತೇನೆ ಎಂದರು.

ರಂಗನಾಥ ಕೆರೆಯನ್ನು ಪ್ರವಾಸಿ ತಾಣವನ್ನಾಗಿಸುವ ಚಿಂತನೆ ತಮಗಿದ್ದು, ಅಧಿಕಾರಿಗಳು ಈ ಸಂಬಂಧ ಪ್ರಸ್ತಾವನೆ ಸಲ್ಲಿಸ ಬೇಕು. ಕೆರೆ ಅಭಿವೃದ್ಧಿಯಾದರೆ ಪರಿಸರ ಸಂರಕ್ಷಣೆಯಾಗಲಿದೆ ಎಂದರು.

ಮುಡಿಗುಂಡದಲ್ಲಿ ಯಜಮಾನರು ಹಾಗೂ ಮಹಿಳಾ ಸಂಘಟನೆಗಳು ಬೇಡ ಎಂದು ಆಗ್ರಹಿಸಿದ್ದರೂ ಅಲ್ಲಿ ರಾಜಾರೋಷ ವಾಗಿ ವೈನ್ ಸ್ಟೋರ್‍ಗೆ ಅನುಮತಿ ನೀಡಿ ದ್ದೀರಾ? ಅದೇ ರೀತಿಯಲ್ಲಿ ಲಕ್ಕರಸನ ಪಾಳ್ಯದಲ್ಲೂ ಸಹಾ ಶಾಲಾ ಸಮೀಪ ವೈನ್ ಸ್ಟೋರ್‍ಗೆ ಅನುಮತಿ ನೀಡಿ ಸಾಕಷ್ಟು ಅವಾಂತರ ಸೃಷ್ಠಿಸಿದ್ದೀರಾ, ಇನ್ನೆರಡು ದಿನದಲ್ಲಿ ಆ ವೈನ್ ಸ್ಟೋರ್ ಗಳನ್ನು ಮುಚ್ಚಿ ನನಗೆ ವರದಿ ನೀಡಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸಚಿವ ಎನ್. ಮಹೇಶ್ ತಾಕೀತು ಮಾಡಿದರು.

ಜನರಿಗೆ ಬೇಡವಾದ ಎರಡು ವೈನ್ ಸ್ಟೋರ್‍ಗಳನ್ನು ಇನ್ನು ಏಕೆ ಮುಚ್ಚಿಸಲು ಕ್ರಮಕೈಗೊಂಡಿಲ್ಲ. ಸಾಕಷ್ಟು ಕಡೆ ಗ್ರಾಮಾಂ ತರ ಹಾಗೂ ಪಟ್ಟಣ ಪ್ರದೇಶದಲ್ಲಿ ಅಕ್ರಮ ವಾಗಿ ಬೇಳೆ-ಬದನೆಕಾಯಿ ಯಂತೆ ಮದ್ಯ ಮಾರಾಟ ಮಾಡಲಾಗುತ್ತಿದ್ದರೂ ಕ್ರಮ ವಹಿಸುತ್ತಿಲ್ಲ. ಕೆಲವು ಕಡೆ ಗ್ರಾಮಾಂತರ ಪ್ರದೇ ಶಗಳಲ್ಲಿ ಜನ ಕುಡಿದು ಸಾಯುವಂತಹ ಸ್ಥಿತಿ ತಲುಪಿದ್ದಾರೆ. ಇದರಿಂದ ಬಡ ಕುಟುಂ ಬದ ಮಹಿಳೆಯರು ಸಂಕಷ್ಟಕ್ಕೀಡಾಗು ವಂತಾಗಿದೆ. ಅವರ ಸಂಸಾರ ಬೀದಿಗೆ ಬೀಳು ತ್ತಿದೆ ಎಂದು ಹೇಳಿದರು. ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.

Translate »