ಕೂಡಿಗೆ ಸೈನಿಕ ಶಾಲೆ ವಿದ್ಯಾರ್ಥಿ ಸಾವು ಪ್ರಕರಣದ ತನಿಖೆ ಮುಂದುವರಿಕೆ
ಕೊಡಗು

ಕೂಡಿಗೆ ಸೈನಿಕ ಶಾಲೆ ವಿದ್ಯಾರ್ಥಿ ಸಾವು ಪ್ರಕರಣದ ತನಿಖೆ ಮುಂದುವರಿಕೆ

June 30, 2018

ಮಡಿಕೇರಿ: ಕೂಡಿಗೆ ಸೈನಿಕ ಶಾಲೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟ 9ನೇ ತರಗತಿ ವಿದ್ಯಾರ್ಥಿ ಚಿಂಗಪ್ಪ ಪ್ರಕರಣದ ತನಿಖೆ ಮುಂದುವರಿದಿದ್ದು, ಮರಣೋತ್ತರ ಪರೀಕ್ಷೆ ವರದಿ ಆಧರಿಸಿ ಹೆಚ್ಚಿನ ತನಿಖೆ ನಡೆಯಲಿರುವುದಾಗಿ ತಿಳಿದು ಬಂದಿದೆ.

ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ನಡೆದ ಮೃತದೇಹ ಮರಣೋತ್ತರ ಪರೀಕ್ಷೆಯ ವರದಿಯನ್ನು ಮೈಸೂರಿನಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಯಕ್ಕೆ ರವಾನಿಸಲಾಗಿದ್ದು, ಈ ವರದಿ ಬಂದ ಬಳಿ ಕವೇ ತನಿಖೆ ಮತ್ತಷ್ಟು ಚುರುಕು ಪಡೆಯಲಿದೆ.

ಕುಶಾಲನಗರ ಗ್ರಾಮಾಂತರ ವೃತ್ತ ನಿರೀಕ್ಷಕ ಕ್ಯಾತೇಗೌq,À ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಈಗಾಗಲೇ ಸೈನಿಕ ಶಾಲೆಯ ಸಿ.ಸಿ.ಕ್ಯಾಮರಾ ದೃಶ್ಯಗಳನ್ನು ವಶ ಪಡಿಸಿ ಕೊಂಡು ಘಟನೆ ನಡೆದ ದಿನದ ಬೆಳವಣಿಗೆಗಳನ್ನು ಪರಿಶೀಲನೆಗೆ ಒಳ ಪಡಿಸಲಾಗಿದೆ. ಮೃತ ಬಾಲಕನ ಪೋಷಕರು ಆರೋಪಿಸಿರುವ 5 ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಅವರ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಲಾಗಿದೆ ಎಂದು ವಿಶ್ವಾಸನೀಯ ಮೂಲಗಳು ಮಾಹಿತಿ ನೀಡಿದೆ. ಕೇಂದ್ರಿಯ ರಕ್ಷಣಾ ಸಚಿವಾಲಯದ ಅಂಗಸಂಸ್ಥೆಯ ಅಡಿಯಲ್ಲಿ ಕೂಡಿಗೆ ಸೈನಿಕ ಶಾಲೆ ಕಾರ್ಯ ನಿರ್ವಹಿಸಲ್ಪಡುವುದ ರಿಂದ ಪೊಲೀಸರು ಕೂಡ ತನಿಖೆಯ ಮಾಹಿತಿಯನ್ನು ಬಿಟ್ಟು ಕೊಡುತ್ತಿಲ್ಲ.

ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಮೃತದೇಹದ ವೈಜ್ಞಾನಿಕ ವರದಿ ಬರಲು, ಕನಿಷ್ಠ 10 ದಿನಗಳ ಸಮಯಾವಕಾಶ ಬೇಕಾಗಬಹು ದೆಂದು, ವಿಶ್ವಾಸನೀಯ ವೈದ್ಯಕೀಯ ಮೂಲಗಳು ಮಾಹಿತಿ ನೀಡಿದೆ.

Translate »