ಇಂದು, ನಾಳೆ ಬ್ಯಾಂಕ್ ಬಂದ್ : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಬ್ಯಾಂಕ್ ನೌಕರರ ಮುಷ್ಕರ
ಮೈಸೂರು

ಇಂದು, ನಾಳೆ ಬ್ಯಾಂಕ್ ಬಂದ್ : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಬ್ಯಾಂಕ್ ನೌಕರರ ಮುಷ್ಕರ

May 30, 2018

ಬೆಂಗಳೂರು: ವೇತನ ಪರಿಷ್ಕರಣೆ ಸೇರಿದಂತೆ ಇತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾಳೆ ಯಿಂದ ಎರಡು ದಿನಗಳ ಕಾಲ ಅಖಿಲ ಭಾರತ ಬ್ಯಾಂಕ್ ಮುಷ್ಕರಕ್ಕೆ ಯುನೈಟೆಡ್ ಫೆÇೀರಂ ಆಫ್ ಬ್ಯಾಂಕ್ ಯೂನಿಯನ್ ಕರೆ ಕೊಟ್ಟಿದೆ.

ವೇತನ ಪರಿಷ್ಕರಣೆ ಮಾಡಬೇಕೆಂದು ಈಗಾಗಲೇ ಸಾಕಷ್ಟು ಬಾರಿ ಇಂಡಿಯನ್ ಬ್ಯಾಂಕ್ ಅಸೋಸಿ ಯೇಷನ್ ಜೊತೆಗೆ ಮಾತುಕತೆ ನಡೆದಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಸರ್ಕಾರ ಮಧ್ಯಪ್ರವೇಶ ಮಾಡಿ ವೇತನ ಪರಿ ಷ್ಕರಣೆ ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ.

ಬ್ಯಾಂಕ್ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬಹುತೇಕ ಬ್ಯಾಂಕ್ ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಾರೆ. ಈ ಹಿನ್ನೆಲೆಯಲ್ಲಿ ಚೆಕ್ ಕ್ಲಿಯರೆನ್ಸ್, ನಗದು- ಜಮೆ ಸೇರಿದಂತೆ ಬ್ಯಾಂಕಿಂಗ್ ವ್ಯವಹಾರಗಳಿಗೆ ಅಡಚಣೆಯಾಗ ಬಹುದು. ಎಟಿಎಂಗಳಿಗೆ ಹಣ ತುಂಬುವ ಪ್ರಕ್ರಿಯೆಗೂ ತೊಡಕಾಗಿ, ಹಣದ ಕೊರತೆ ಉಂಟಾಗಬಹುದು. ಹಾಗಾಗಿ ಬ್ಯಾಂಕ್‍ನಲ್ಲಿ ನಿಮ್ಮ ಕೆಲಸ ಏನೇ ಇರಲಿ ಹಾಗೇ ಅವುಗಳನ್ನು ಮಾಡಿಕೊಂಡರೆ ಉತ್ತಮ. ಹಾಗೇ ನಿಮ್ಮ ಪಾಕೆಟ್‍ನಲ್ಲಿ ನಿಮ್ಮ ಖರ್ಚಿಗೆ ಬೇಕಾಗುವಷ್ಟು ಹಣವಿದ್ದರೆ ಉತ್ತಮ, ಯಾಕೆಂದರೆ ಒಂದು ವೇಳೆ ನಿಮ್ಮ ಅಕೌಂಟಿನಲ್ಲಿ ಹಣವಿದ್ದರೂ ಸಹ ಎಟಿಎಂನಲ್ಲಿ ಹಣವಿರುವುದು ಅನುಮಾನವಾಗಿದೆ.

Translate »