ಮೈಸೂರು : ಹಂಪಿಯ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ ಪುರಸ್ಕøತರಾದ ಡಾ.ಪಂ.ರಾಜೀವ ತಾರಾನಾಥ್‍ರವರು ಮೇ. 30ರಂದು ಮೈಸೂರಿನಲ್ಲಿರುವ ಶ್ರೀ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸಾಮಿಗಳ ಆಶೀರ್ವಾದ ಪಡೆದರು.
ಸಂಗೀತದಂತಹ ಅಭಿಜಾತ ಕಲೆಗಳನ್ನು ಬೆಳೆಸುವಲ್ಲಿ ಮಠಗಳು ಮತ್ತು ಗುರುಕುಲಗಳು ಗಂಭೀರವಾಗಿ ಗಮನ ಕೊಡಬೇಕಾಗಿದೆ. ಸಂಗೀತವನ್ನು ಕಲಿಯುವ ವಿದ್ಯಾರ್ಥಿಗಳು ನಿಜವಾದ ಶ್ರದ್ಧೆ, ನಿಷ್ಠೆ, ಬದ್ಧತೆಯಿಂದ ಗುರುಮುಖೇನ ಈ ವಿದ್ಯೆಯನ್ನು ತಮ್ಮದಾಗಿಸಿಕೊಳ್ಳಬೇಕು. ಈ ವಿಷಯದಲ್ಲಿ ವಿದೇಶೀಯರು ತೋರಿಸುವಷ್ಟು ಕಾಳಜಿಯನ್ನು ಭಾರತೀಯರು ತೋರಿಸದೆ ಇರುವುದು ವಿಷಾದನೀಯ ಎಂದು ಶ್ರೀಗಳ ಮುಂದೆ ಪಂಡಿತ್ ರಾಜೀವ್‍ತಾರಾನಾಥ್ ಅಭಿಪ್ರಾಯ ಮಂಡಿಸಿದರು.
ಈ ವೇಳೆ ಶ್ರೀಗಳು, ಪಂ. ರಾಜೀವ ತಾರಾನಾಥ್ ನಾಡೋಜ ಪ್ರಶಸ್ತಿ ಸಂದಿದ್ದಕ್ಕಾಗಿ ಅವರನ್ನು ಫಲಪುಷ್ಪ ಸ್ಮರಣ ಕೆಗಳನ್ನು ನೀಡಿ ಅಭಿನಂದಿಸಿದರು. ` ಎಂಬತ್ನಾಲ್ಕರ ವಯೋಮಾನದಲ್ಲಿಯೂ ದೇಶವಿದೇಶಗಳಲ್ಲಿ ಸಂಗೀತ ಕಚೇರಿ ನಡೆಸುತ್ತಿರುವುದು ಸಂತೋಷದ ಸಂಗತಿ. ಇದೇ ರೀತಿ ನೂರಾರು ವರ್ಷ ಕಾಲ ಸಂಗೀತದ ಮೂಲಕ ರಸಿಕಲೋಕವನ್ನು ತಣ ಸುವಂತಾಗಲಿ’ ಎಂದು ಶ್ರೀಗಳು ಹಾರೈಸಿದರು.
ಈ ಸಂದರ್ಭದಲ್ಲಿ ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿಗಳಾದ ಡಾ. ಸಿ.ಜಿ. ಬೆಟಸೂರಮಠ, ಕಾರ್ಯದರ್ಶಿಗಳಾದ ಎಸ್.ಶಿವಕುಮಾರಸ್ವಾಮಿ, ಪ್ರೊ.ವಿ.ಕೆ.ನಟರಾಜ್, ನಿರ್ದೇಶಕರುಗಳಾದ ಸುರೇಶ್ ಆರ್. ಪಾಟೀಲ್, ಪ್ರೊ. ಮೊರಬದ ಮಲ್ಲಿಕಾರ್ಜುನ, ಆರ್. ಮಹೇÀಶ್ ಮತ್ತು ಕಲಾಪ್ರೇಮಿಗಳಾದ ಹಿಮಾಂಶು ಇತರರು ಉಪಸ್ಥಿತರಿದ್ದರು.