ಕೇರಳದಲ್ಲಿ ನಿಫಾ ವೈರಸ್‍ಗೆ ಮತ್ತೊಂದು ಬಲಿ: ಮೃತರ ಸಂಖ್ಯೆ 16ಕ್ಕೆ ಏರಿಕೆ
ದೇಶ-ವಿದೇಶ

ಕೇರಳದಲ್ಲಿ ನಿಫಾ ವೈರಸ್‍ಗೆ ಮತ್ತೊಂದು ಬಲಿ: ಮೃತರ ಸಂಖ್ಯೆ 16ಕ್ಕೆ ಏರಿಕೆ

June 1, 2018

ಕೋಯಿಕ್ಕೋಡ್: ಮಾರಣಾಂತಿಕ ನಿಫಾ ವೈರಸ್ ಕೇರಳದಲ್ಲಿ ತನ್ನ ಮರಣ ಮೃದಂಗ ಮುಂದುವರೆಸಿದ್ದು, ಸೋಂಕು ಪೀಡಿತರೊಬ್ಬರು ಸಾವನ್ನಪ್ಪುವ ಮೂಲಕ ಮೃತಪಟ್ಟವರ ಸಂಖ್ಯೆ ಇದೀಗ 16ಕ್ಕೆ ಏರಿಕೆಯಾಗಿದೆ.

ನಿಫಾ ವೈರಸ್‍ನಿಂದ ಹರಡುವ ಸೋಂಕಿಗೆ ಕೇರಳದಲ್ಲಿ ಗುರುವಾರ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾದಂತಾಗಿದೆ. ಕೇರಳದ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಸೋಂಕು ಪೀಡಿತರಾಗಿ ಚಿಕಿತ್ಸೆ ಪಡೆಯುತ್ತಿದ್ದ ನದುವನ್ನೂರು ನಿವಾಸಿ ರಶೀನ್(25 ವರ್ಷ) ಎನ್ನುವವರು ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ನಿನ್ನೆಯಷ್ಟೇ ಇದೇ ಮಾರಣಾಂತಿಕ ವೈರಾಣು ಸೋಂಕಿಗೆ ಟಿ.ಪಿ. ಮಧುಸೂದನ್ (55) ಮತ್ತು ಅಖಿಲ್ (28) ಎನ್ನು ವವರು ಮೃತಪಟ್ಟಿದ್ದರು. ಇದೀಗ ಈ ಪಟ್ಟಿಗೆ ಮತ್ತೊಬ್ಬರು ಸೇರ್ಪಡೆಯಾಗಿದ್ದಾರೆ.

Translate »