ಬೆಂಗಳೂರು ಮಾರ್ಚ್ 26 (ಕೆಎಂಶಿ): ಪ್ರಧಾನಿ ನರೇಂದ್ರ ಮೋದಿ ಅವರು ರೇಷನ್ ಕಾರ್ಡ್ ಹೊಂದಿರುವವರಿಗೆ ಮೂರು ತಿಂಗಳ ಆಹಾರ ಸಾಮಗ್ರಿಗಳನ್ನು ನೀಡಲು ತೆಗೆದುಕೊಂಡಿರುವ ನಿರ್ಧಾರವನ್ನು ರಾಜ್ಯ ಸರ್ಕಾರ ತಕ್ಷಣದಿಂದಲೇ ಪಾಲನೆ ಮಾಡಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.
ಇದು ಕೇಂದ್ರ ಸರ್ಕಾರದ ಮಹತ್ವದ ನಿಲುವು. ದೇಶಾದ್ಯಂತ ಕರೋನಾ ಸೋಂಕು ಮತ್ತಷ್ಟು ಜನರಿಗೆ ತಲುಪದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಲಾಕ್ ಡೌನ್ ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ್ದರೆ.
ಹೀಗಾಗಿ 21 ದಿನಗಳ ತನಕ ಅಂದ್ರೆ ಏಪ್ರಿಲ್ 14 ರ ವರೆಗೆ ಮನೆಯಿಂದ ಹೊರಬಾರದಂತೆ ಮನವಿ ಮಾದ್ದಿದ್ದಾರೆ. ಹೀಗಾಗಿ ದೇಶಾದ್ಯಂತ ಜನರಿಗೆ ಸಬ್ಸಿಡಿ ದರದಲ್ಲಿ 3 ತಿಂಗಳ ರೇಷನ್ ಮುಂಗಡವಾಗಿಯೇ ನೀಡುವುದಾಗಿ ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದೆ.
ದೇಶಾದ್ಯಂತ ಸಬ್ಸಿಡಿ ದರದಲ್ಲಿ ರೇಷನ್ ನೀಡಲಾಗುತ್ತೆ. 80 ಕೋಟಿ ಜನತೆಗೆ ಪಡಿತರ ಯೋಜನೆ ಘೊಷಿಸಲಾಗಿದೆ. ರೇಷನ್ ಕಾರ್ಡ್ ಇರುವವರಿಗೆ ಸ್ಕೀಮ್ ಅನ್ವಯವಾಗಲಿದೆ.