`ಪ್ಲಾಸ್ಟಿಕ್ ಮುಕ್ತ ದಸರಾ’ ಜನಜಾಗೃತಿ
ಮೈಸೂರು

`ಪ್ಲಾಸ್ಟಿಕ್ ಮುಕ್ತ ದಸರಾ’ ಜನಜಾಗೃತಿ

October 1, 2019

ಮೈಸೂರು, ಸೆ.30 (ಆರ್‍ಕೆಬಿ)- ಡಾ.ಮೋಹನ್ಸ್ ಡಯಾಬಿಟಿಸ್ ಸ್ಪೆಷಾಲಿಟಿಸ್ ಸೆಂಟರ್, 92.7 ರೆಡ್ ಎಫ್‍ಎಂ, ಗಂಧದಗುಡಿ ಫೌಂಡೇಷನ್ ಜಂಟಿ ಆಶ್ರಯದಲ್ಲಿ ಮೈಸೂರಿನ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ `ಪ್ಲಾಸ್ಟಿಕ್ ಮುಕ್ತ ದಸರಾ’ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೋಮವಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಾ ಣಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ಪರಿಸರ ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಪ್ಲಾಸ್ಟಿಕ್ ಬಳಸುವುದನ್ನು ಬಿಡ ಬೇಕು. ಈ ನಿಟ್ಟಿನಲ್ಲಿ ಇಂದಿನ ಕಾರ್ಯಕ್ರಮ ಹೆಚ್ಚು ಸೂಕ್ತ ಹಾಗೂ ಸಾಮಾಜಿಕ ಕಳಕಳಿ ಹೊಂದಿದೆ. `ಪ್ಲಾಸ್ಟಿಕ್ ಮುಕ್ತ ದಸರಾ’ ಪ್ರಚಾರ ವಾಹನ ದಸರಾ ಮುಗಿಯುವವರೆಗೆ ಮೈಸೂರಿನ ನಾನಾ ಬಡಾವಣೆ ಗಳಲ್ಲಿ ಸಂಚರಿಸಿ, ಪ್ಲಾಸ್ಟಿಕ್ ಬಳಕೆ ವಿರುದ್ಧ ಜನಜಾಗೃತಿ ಮೂಡಿಸಲಿದೆ ಎಂದರು. ಶಾಸಕ ಎಲ್.ನಾಗೇಂದ್ರ, ದಸರಾ ಸಾಂಸ್ಕøತಿಕ ಉಪ ಸಮಿತಿ ಅಧ್ಯಕ್ಷ ಎನ್.ವಿ.ಫಣೀಶ್, ಡಾ.ಮೋಹನ್ಸ್ ಡಯಾಬಿಟಿಸ್ ಸ್ಪೆಷಾಲಿಟಿ ಸೆಂಟರ್‍ನ ಮುಖ್ಯಸ್ಥ ಡಾ.ರೇಣುಕಪ್ರಸಾದ್, ಆರ್.ಜೆ. ಅವಿನಾಶ್, ಸಂತೋಷ್, ಗಂಧದಗುಡಿ ಫೌಂಡೇಷನ್ ಅಧ್ಯಕ್ಷ ಆರ್ಯನ್ ಇನ್ನಿತರರು ಉಪಸ್ಥಿತರಿದ್ದರು.

Translate »