ವಿಳಾಸ ಕೇಳುವ ನೆಪದಲ್ಲಿ ಮಹಿಳೆ ಸರ ಅಪಹರಣ
ಮೈಸೂರು

ವಿಳಾಸ ಕೇಳುವ ನೆಪದಲ್ಲಿ ಮಹಿಳೆ ಸರ ಅಪಹರಣ

December 7, 2018

ಮೈಸೂರು: ದ್ವಿಚಕ್ರ ವಾಹನ ದಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರಿಂದ ಹಿಂದಿ ನಿಂದ ಬೈಕಿನಲ್ಲಿ ಬಂದ ಯುವಕ, ವಿಳಾಸ ಕೇಳುವ ನೆಪದಲ್ಲಿ ಚಿನ್ನದ ಸರ ಎಗರಿಸಿ ಪರಾರಿಯಾಗಿ ರುವ ಘಟನೆ ಮೈಸೂರಿನ ಇಎಸ್‍ಐ ಆಸ್ಪತ್ರೆ ಬಳಿ ಕೆಆರ್‍ಎಸ್ ರಸ್ತೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.ಮೈಸೂರಿನ ಬೃಂದಾವನ ಬಡಾವಣೆ ನಿವಾಸಿ ಚಂದ್ರಕಲಾ, ತಮ್ಮ ಚಿನ್ನದ ಸರದ 11 ಗ್ರಾಂ ತುಣುಕು ಕಳೆದುಕೊಂಡವರು. ಬುಧವಾರ ಸಂಜೆ 7.30 ಗಂಟೆ ವೇಳೆಗೆ ಚಂದ್ರಕಲಾ ಅವರು ದ್ವಿಚಕ್ರ ವಾಹನದಲ್ಲಿ ಬೃಂದಾವನ ಬಡಾವಣೆ ಕಡೆಯಿಂದ ಕೆಆರ್‍ಎಸ್ ರಸ್ತೆಗೆ ಬಂದು ಒಂಟಿಕೊಪ್ಪಲು ಲಕ್ಷ್ಮಿವೆಂಕಟರಮಣ ದೇವಸ್ಥಾನದ ಕಡೆಗೆ ಹೊರಟಿದ್ದರು.

ಸರ್ಕಾರಿ ಆಯುರ್ವೇದ ಕಾಲೇಜು ಬಳಿಯಿಂದಲೂ ಬೈಕಿನಲ್ಲಿ ಹಿಂಬಾಲಿಸಿದ ಯುವಕ ನೋರ್ವ ಇಎಸ್‍ಐ ಆಸ್ಪತ್ರೆ ಎದುರು ಕೂಗಿ ನಿಲ್ಲಿಸಿ, ಯಾವುದೋ ವಿಳಾಸ ಕೇಳುವವನಂತೆ ನಟಿಸಿ, ಚಂದ್ರಕಲಾ ಅವರು ಅಡ್ರಸ್ ಹೇಳುತ್ತಿರುವಂತೆಯೇ ಹಠಾತ್ತನೆ ಅವರ ಕೊರಳಿಗೆ ಕೈ ಹಾಕಿ 48 ಗ್ರಾಂ ಚಿನ್ನದ ಸರ ಕೀಳಲೆತ್ನಿ ಸಿದನಾದರೂ, ಎಚ್ಚೆತ್ತ ಮಹಿಳೆ ಚೈನ್ ಅನ್ನು ಬಿಗಿ ಯಾಗಿ ಹಿಡಿದುಕೊಂಡಿದ್ದಾರೆ. ಕಡೆಗೂ 11 ಗ್ರಾಂನಷ್ಟು ಚಿನ್ನದ ಸರದ ತುಂಡಿನೊಂದಿಗೆ ಯುವಕ ಕತ್ತಲಲ್ಲಿ ಪರಾರಿಯಾದ. ನಾನು ಆತನನ್ನು ಹಿಡಿದೆನಾದರೂ, ಅವನು ಧರಿಸಿದ್ದ ಕಪ್ಪು ಟಿ-ಶರ್ಟ್ ಹರಿದರೂ ಆತ ತಪ್ಪಿಸಿಕೊಂಡ ಎಂದು ಚಂದ್ರಕಲಾ ಅವರು ನೀಡಿದ ದೂರಿ ನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ವಿವಿ ಪುರಂ ಠಾಣೆ ಇನ್‍ಸ್ಪೆಕ್ಟರ್ ಸೂರಜ್, ಮಹಜರು ನಡೆಸಿ ಪ್ರಕರಣ ದಾಖ ಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಸರ ಕಿತ್ತು ಕೊಂಡು ಪರಾರಿಯಾದವನ ಬೈಕ್ ರಿಜಿಸ್ಟ್ರೇಷನ್ ನಂಬರ್ ಪತ್ತೆ ಮಾಡಿದ್ದು, ಆರೋಪಿ ಸೆರೆಗೆ ಶೋಧ ನಡೆಸುತ್ತಿದ್ದೇವೆ ಎಂದು ಇನ್‍ಸ್ಪೆಕ್ಟರ್ ಸೂರಜ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

Translate »