`ರೇರಾ’ದಲ್ಲಿ ಮಾರ್ಪಾಡು ಅಗತ್ಯ: ಕ್ರೆಡಾಯ್ ಒತ್ತಾಯ
ಮೈಸೂರು

`ರೇರಾ’ದಲ್ಲಿ ಮಾರ್ಪಾಡು ಅಗತ್ಯ: ಕ್ರೆಡಾಯ್ ಒತ್ತಾಯ

December 7, 2018

ಮೈಸೂರು: ಕೇಂದ್ರ ಸರ್ಕಾರ ಜಾರಿಗೆ ತರಲು ಉz್ದÉೀಶಿಸಿರುವ ರೇರಾ (ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆಯಿಂದ ಬಿಲ್ಡರ್ಸ್‍ಗಳಿಗೆ ತೊಂದರೆಯಾಗಲಿರುವ ಹಿನ್ನೆಲೆ ಯಲ್ಲಿ ಕೆಲವು ಮಾರ್ಪಾಡು ಅಗತ್ಯವಿದೆ ಎಂದು ಕ್ರೆಡಾಯ್‍ನ ರಾಷ್ಟ್ರೀಯ ಅಧ್ಯP್ಷÀ ಜP್ಷÀಯ್ ಶಾ ಅಭಿಪ್ರಾಯಪಟ್ಟಿದ್ದಾರೆ.

ಗುರುವಾರ ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೋಟು ಅಮಾನ್ಯೀಕರಣ, ಜಿಎಸ್‍ಟಿ ಮತ್ತು ರೇರಾ ಕಾಯ್ದೆಯಿಂದ ಸಾಕಷ್ಟು ತೊಂದರೆ ಉಂಟಾಯಿತು. ಕೇವಲ ಬಿಲ್ಡರ್ಸ್‍ಗಳಿಗೆ ಮಾತ್ರವಲ್ಲದೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೇಲೆ ಬಹುದೊಡ್ಡ ಪರಿಣಾಮ ಬೀರಿತು. ಜಿಎಸ್‍ಟಿಯಿಂದ ಆರ್ಥಿಕ ಸುಧಾರಣೆ ಉಂಟಾದರೂ ಭೂಮಿಯ ಬೆಲೆ ಹಾಗೂ ಇತರ ಶುಲ್ಕಗಳು ಹೆಚ್ಚಳವಾಯಿತು. ನಾವು ಹಲವು ಯೋಜನೆ ಜಾರಿಗೊಳಿಸಲು ಸಿದ್ಧರಿz್ದÉೀವೆ. ಆದರೆ, ಸರಕಾರದಿಂದÀ ಅಗತ್ಯ ಪೆÇ್ರೀತ್ಸಾಹ ಮತ್ತು ಸಹಕಾರ ಸಿಗಬೇಕಾಗಿದೆ ಎಂದರು. ಮೈಸೂರು ಅಭಿವೃದ್ಧಿ ಹೊಂದಲು ಸಂಪದ್ಭರಿತ ಕೇಂದ್ರವಾಗಿದೆ. ದೇಶದ 2, 3 ಮತ್ತು 4ನೇ ಹಂತದ ನಗರಗಳನ್ನು ಅಭಿವೃದ್ಧಿ ಪಡಿಸುವುದೇ ನಮ್ಮ ಗುರಿಯಾಗಿದೆ. ಈಗ ಮೈಸೂರು ಮತ್ತು ಬೆಂಗಳೂರು ನಡುವಿನ ಸಂಚಾರ 2.30 ಗಂಟೆಯದಾಗಿದೆ. ಇದರಿಂದ ಅಭಿವೃದ್ಧಿ ಹೊಂದುವುದು ಕಷ್ಟ ಎಂದು ಅಭಿಪ್ರಾಯಪಟ್ಟರು.

ಕ್ರೆಡಾಯ್ ಸಂಸ್ಥೆಯ ಮುಖ್ಯಸ್ಥ ಗೀತಾಂಬರ್ ಆನಂದ್ ಮಾತನಾಡಿ, ನೋಟು ಅಮಾನ್ಯೀ ಕರಣದಿಂದ ಭೂ ಖರೀದಿಯ ಮೇಲೆ ತೊಂದರೆ ಉಂಟಾಯಿತು. ವ್ಯಾಪಾರ, ವ್ಯವಹಾರ ನಷ್ಟವಾಯಿತು. ಅಂತೆಯೇ ಜಿಎಸ್‍ಟಿ ಜಾರಿಯಾದ ಮೇಲೆ ಆರ್ಥಿಕ ಸುಧಾರಣೆ ಯಾದರೂ ಶುಲ್ಕಗಳ ಏರಿಕೆ ಉಂಟಾಯಿತು. ಈಗ ರೇರಾ ಕಾಯ್ದೆಯಲ್ಲಿಯೂ ನ್ಯೂನತೆ ಗಳಿದ್ದು, ಅದನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಬಗೆಹರಿಸಬೇಕು ಎಂದರು.

ರೇರಾ ಆಕ್ಟ್‍ನಿಂದ ಅಧಿಕಾರಿಗಳಿಗೆ ಅನುಕೂಲವಾಗಿದ್ದು, ಕಟ್ಟಡ ನಿರ್ಮಿಸುವವರಿಗೆ ತೊಂದರೆ ಯಾಗಿದೆ. ಯಾವುದಾದರು ಒಂದು ಕಟ್ಟಡ ಏಕಾಏಕಿ ನೆಲಸಮವಾದರೆ ಕೇವಲ ಕಟ್ಟಡ ನಿರ್ಮಿಸಿದವರನ್ನು ಮಾತ್ರ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಆದರೆ,ಕಟ್ಟಡ ಪರಿಶೀಲಿಸಿ ಮತ್ತು ಪ್ರಮಾಣ ಪತ್ರ ನೀಡಿದ ಅಧಿಕಾರಿಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಇಂತಹ ಸಾಕಷ್ಟು ನ್ಯೂನತೆಗಳಿದ್ದು, ಅದನ್ನು ಸರಿಪಡಿಸಬೇಕಿದೆ ಎಂದರು.

Translate »