ಸುದೀರ್ಘ ಕಾಲದ ಶಿಕ್ಷಕ ವೃತ್ತಿ ತೃಪ್ತಿ ತಂದಿದೆ
ಮೈಸೂರು

ಸುದೀರ್ಘ ಕಾಲದ ಶಿಕ್ಷಕ ವೃತ್ತಿ ತೃಪ್ತಿ ತಂದಿದೆ

April 1, 2021

ಮೈಸೂರು,ಮಾ.31-ಶಿಕ್ಷಣ ಕ್ಷೇತ್ರ ಪವಿತ್ರವಾಗಿದ್ದು, 38 ವರ್ಷಗಳ ಶಿಕ್ಷಕ ವೃತ್ತಿ ನನಗೆ ತೃಪ್ತಿ ತಂದಿದೆ ಎಂದು ಮೈಸೂರು ತಾಲೂಕು ದೇವಯ್ಯನಹುಂಡಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಹಾಗೂ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ರಾಜ್ಯ ಪರಿಷತ್ ಸದಸ್ಯೆ ಜಯಶ್ರೀ ಮರೀಗೌಡ ತಿಳಿಸಿದರು.

ಇಂದು ವಯೋನಿವೃತ್ತಿ ಹೊಂದಿದ ಜಯಶ್ರೀ ಅವರಿಗೆ ಶಾಲೆಯಲ್ಲಿ ಅಭಿ ನಂದನಾ ಕಾರ್ಯಕ್ರಮ ಏರ್ಪಡಿಸ ಲಾಗಿತ್ತು. ಅಭಿನಂದನೆ ಸ್ವೀಕರಿಸಿ ಮಾತ ನಾಡುತ್ತಾ, ಶ್ರೀರಂಗಪಟ್ಟಣ ತಾಲೂಕು ನಗುವನಹಳ್ಳಿಯಲ್ಲಿ ನಾನು ಮೊದಲು ಶಿಕ್ಷಕ ವೃತ್ತಿ ಆರಂಭಿಸಿ, ಮೈಸೂರು ನಗರ ಹಾಗೂ ತಾಲೂಕಿನಲ್ಲಿ ಸೇವೆ ಸಲ್ಲಿಸಿದ್ದೇನೆ. ಸಿ.ಆರ್.ಪಿ.ಯಾಗಿ ಮೈಸೂರು ಜಿಲ್ಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆಯಾಗಿ, ಸರ್ಕಾರಿ ನೌಕರರ ಸಂಘದ ನಿಕಟ ಪೂರ್ವ ರಾಜ್ಯ ಪರಿಷÀತ್ ಸದಸ್ಯರಾಗಿ, ರಾಜ್ಯ ಮಹಿಳಾ ಶಿಕ್ಷಕರ ಸಂಘದ ಅಧ್ಯಕ್ಷೆ ಯಾಗಿ ಕಾರ್ಯ ನಿರ್ವಹಿಸಿದ್ದೇನೆ. ನನ್ನ ಶಿಕ್ಷಕ ವೃತ್ತಿಯಲ್ಲಿ ಇಲಾಖೆಯ ಅಧಿಕಾರಿ ಗಳು, ನೌಕರರು, ಶಿಕ್ಷಕರು ಸಂಪೂರ್ಣ ಸಹಕಾರ ನೀಡಿದ್ದಾರೆ. ಅವರಿಗೆಲ್ಲಾ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಮೈಸೂರು ತಾಲೂಕು ಬಿಇಓ ಕೃಷ್ಣ ಮಾತನಾಡಿ, ಜಯಶ್ರೀ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ ವಾಗಿದ್ದು, ಅವರು ಯಾವ ಯಾವ ಶಾಲೆ ಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದ್ದಾರೋ ಅಲ್ಲಿನ ಶಾಲೆಯನ್ನು ದಾನಿಗಳಿಂದ, ಅಧಿ ಕಾರಿಗಳಿಂದ, ರಾಜಕಾರಣಿಗಳ ಸಹಕಾರ ದಿಂದ ಅಭಿವೃದ್ಧಿಪಡಿಸಿದ್ದಾರೆ. ಅವರಿಗೆ ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ, ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿಗಳು, ಅನೇಕ ಸಂಘ-ಸಂಸ್ಥೆಗಳ ಪ್ರಶಸ್ತಿಗಳು ಲಭಿಸಿದ್ದು, ಶಾಲಾಭಿ ವೃದ್ಧಿಯ ಜೊತೆಗೆ ಶಾಲಾ ದಾಖಲೆಗಳನ್ನು ನಿಖರವಾಗಿ ಇಟ್ಟಿದ್ದಾರೆ. ಶಾಲೆಗೆ ಸರಿಯಾದ ಸಮಯಕ್ಕೆ ಬರುವ ಶಿಕ್ಷಕರಲ್ಲಿ ಇವರು ಒಬ್ಬರಾಗಿದ್ದರು. ಇಂತಹ ಶಿಕ್ಷಕರು ನಮ್ಮ ಇಲಾಖೆಯಲ್ಲಿ ಹೆಚ್ಚಲಿ, ಇವರ ಮಾರ್ಗ ದರ್ಶನ ನಮ್ಮ ಇಲಾಖೆಗೆ ಇರಲಿ, ಇವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಪ್ರೊ. ನಂಜರಾಜೇ ಅರಸ್, ಜಯಶ್ರೀಯವರ ಪತಿ ಹಾಗೂ ಮೈಸೂರು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷರೂ ಆದ ಕೆ.ಮರೀಗೌಡ, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೋಮೇಗೌಡ, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಮಾಲಂಗಿ ಸುರೇಶ್, ಶಿಕ್ಷಕರ ಸಂಘದ ನಿರ್ದೇಶಕ ಕೆಂಚೇಗೌಡ, ಖಜಾಂಚಿ ಮಹಾದೇವ, ಹಿನಕಲ್ ಪ್ರಕಾಶ್, ಬುಲೆಟ್ ಮಹದೇವ್, ಗೊರಳ್ಳಿ ಪ್ರಕಾಶ್, ಬಂಡಳ್ಳಿ ಮಹೇಶ್, ಶಿವರಾಜೇಗೌಡ, ಹರೀಶ್, ಜವರೇಗೌಡ, ಶಿವಪ್ಪ, ಗಂಗಾ ಧರಪ್ಪ, ಚೀಲೂರು ಚಂದ್ರಶೇಖರ್ ಸೇರಿ ದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »