2023ರ ವೇಳೆಗೆ ಮೈಸೂರು ಜಿಲ್ಲೆಯ  ಅಪೌಷ್ಟಿಕತೆ ಮುಕ್ತ ಮಾಡಲು ಪಣ ತೊಡಿ
ಮೈಸೂರು

2023ರ ವೇಳೆಗೆ ಮೈಸೂರು ಜಿಲ್ಲೆಯ ಅಪೌಷ್ಟಿಕತೆ ಮುಕ್ತ ಮಾಡಲು ಪಣ ತೊಡಿ

April 1, 2021

ಮೈಸೂರು, ಮಾ.31(ಎಂಟಿವೈ)- ಭಾರತ ದೇಶವನ್ನು 2023ರ ವೇಳೆಗೆ ಅಪೌಷ್ಟಿಕತೆ ಮುಕ್ತ ದೇಶವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯಕ್ರಮ ರೂಪಿಸಿದ್ದು, ಅದೇ ಮಾದರಿಯಲ್ಲಿ ಮೈಸೂರು ಜಿಲ್ಲೆಯನ್ನೂ ಅಪೌಷ್ಟಿಕತೆ ಮುಕ್ತ ಜಿಲ್ಲೆಯಾಗಿ ಮಾರ್ಪಡಿ ಸಲು ಪಣ ತೊಡುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸಲಹೆ ನೀಡಿದ್ದಾರೆ.

ಮೈಸೂರು ಜಿಲ್ಲಾ ಪಂಚಾಯತ್ ಸಭಾಂ ಗಣದಲ್ಲಿ ಬುಧವಾರ ನಡೆದ ಪೆÇೀಷಣಾ ಅಭಿಯಾನ (ಪೆÇೀಷಣ್ ಪಾಕ್ವಾಡ್) ಕಾರ್ಯ ಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶ ದಲ್ಲಿ ಕಾಡುತ್ತಿರುವ ಅಪೌಷ್ಟಿಕತೆಯನ್ನು ನಿರ್ಮೂಲನೆ ಮಾಡಲು ಕೇಂದ್ರ ಸರ್ಕಾರ ಪೆÇೀಷಣ್ ಪಾಕ್ವಾಡ ಕಾರ್ಯಕ್ರಮ ಜಾರಿಗೆ ತಂದಿದೆ. 2023ರ ವೇಳೆ ದೇಶದಲ್ಲಿ ಯಾರೊ ಬ್ಬರೂ ಅಪೌಷ್ಟಿಕತೆಯಿಂದ ಬಳಲಬಾರದು ಎಂಬುದು ಈ ಕಾರ್ಯಕ್ರಮದ ಉದ್ದೇಶ. ಈ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ ಪೆÇೀಷಣ್ ಪಾಕ್ವಾಡ ಕಾರ್ಯಕ್ರಮದ ಮೂಲಕ ಎಲ್ಲೆಡೆ ಅಪೌಷ್ಟಿಕತೆ ಬಗ್ಗೆ ಜಾಗೃತಿ ಮೂಡಿ ಸಲಾಗಿದೆ. ಅಪೌಷ್ಟಿಕತೆ ನಿರ್ಮೂಲನೆ ಮಾಡಲು ಎಲ್ಲರೂ ಸಂಘಟಿತರಾಗಿ ಹೋರಾಡಬೇಕು. ಪೆÇೀಷಣ್ ಪಾಕ್ವಾಡ ಕಾರ್ಯಕ್ರಮ 15ಕ್ಕೆ ಸೀಮಿತ ಆಗದೇ ನಿರಂತರವಾಗಿ ನಡೆಯ ಬೇಕು. ಆ ಮೂಲಕ ಜನರಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಅರಿವು ಮೂಡಿಸ ಬೇಕು ಎಂದು ಹೇಳಿದರು.

135 ಮಕ್ಕಳಿದ್ದಾರೆ: ಸಮೀಕ್ಷೆಯೊಂದರ ವರದಿ ಪ್ರಕಾರ ಮೈಸೂರು ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆಯಿಂದ 135 ಮಕ್ಕಳು ಬಳಲುತ್ತಿ ದ್ದಾರೆ. ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.12 ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಅಪೌಷ್ಟಿಕತೆಗೆ ಪೌಷ್ಟಿಕ ಆಹಾರ ಸೇವನೆಯೇ ಮದ್ದು ಎಂದು ಸಲಹೆ ನೀಡಿದರು.
ಹೆಂಗಸರಲ್ಲೇ ರಕ್ತಹೀನತೆ: ಮಹಿಳೆಯ ರಲ್ಲಿ ರಕ್ತಹೀನತೆ ಸಮಸ್ಯೆ ಹೆಚ್ಚಾಗಿ ಕಾಡು ತ್ತಿದೆ. ಅದರಲ್ಲೂ ಹೆಣ್ಣು ಮಕ್ಕಳಲ್ಲಿ ಈ ಸಮಸ್ಯೆ ಇರುವುದು ಕಳವಳಕಾರಿ. ಗರ್ಭಾ ವಸ್ಥೆಯಲ್ಲೇ ರಕ್ತಹೀನತೆಯನ್ನು ಹೋಗಲಾ ಡಿಸಿ, ಪೌಷ್ಟಿಕತೆ ಹೆಚ್ಚಿಸಬೇಕು. ಇದಕ್ಕೆ ಜಾಗೃತಿ ಕಾರ್ಯಕ್ರಮ ಪರಿಣಾಮಕಾರಿಯಾಗಿ ಆಗಬೇಕು. ಗರ್ಭಿಣಿಯರನ್ನು ಚೆನ್ನಾಗಿ ಆರೈಕೆ ಮಾಡುವುದರಿಂದ ಜಿಲ್ಲೆಯಲ್ಲಿ ಅಪೌಷ್ಟಿಕತೆ ಪ್ರಮಾಣವನ್ನು ಕಡಿಮೆಗೊಳಿಸಬಹುದು. ಕೆಲವರು ಗರ್ಭಾವಸ್ಥೆಯಲ್ಲಿದ್ದಾಗ ಪೌಷ್ಟಿಕ ಆಹಾರ ಸೇವನೆಯಲ್ಲಿ ನಿರ್ಲಕ್ಷ್ಯ ವಹಿಸು ತ್ತಾರೆ. ಗರ್ಭಿಣಿ, ಮೊದಲ ದಿನದಿಂದಲೇ ಪೌಷ್ಟಿಕ ಆಹಾರ ಸೇವಿಸಬೇಕು. ಆಗ ಜನಿಸಿದ ಮಕ್ಕಳು ಆರೋಗ್ಯವಂತರಾಗಿರುತ್ತಾರೆ. ಅಪೌಷ್ಟಿ ಕತೆ ಕಾಡುವ ಮಕ್ಕಳಲ್ಲಿ ಕಲಿಕೆ, ಬುದ್ಧಿ ಶಕ್ತಿ ಪ್ರಮಾಣ ಕಡಿಮೆ ಇರುತ್ತದೆ. ಇದರಿಂದ ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಈ ಹಿನ್ನೆಲೆ ಯಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯ ಕರ್ತೆಯರು ಗರ್ಭಿಣಿ ಹಾಗೂ ಬಾಣಂತಿ ಯರ ಆರೋಗ್ಯ ಕಾಪಾಡಲು ಆದ್ಯತೆ ನೀಡಿ ದರೆ, ಆರೋಗ್ಯವಂತ ಮಕ್ಕಳ ಜನನ ಹಾಗೂ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾ ಣಾಧಿಕಾರಿ ಡಾ.ಟಿ.ಅಮರ್‍ನಾಥ್ ಪಂಚಸೂತ್ರಗಳ ಕುರಿತು ಮಾತನಾಡಿದರೆ, ಜಿಪಂ ಅಧ್ಯಕ್ಷೆ ಬಿ.ಸಿ.ಪರಿಮಳ ಶ್ಯಾಂ, ಉಪಾ ಧ್ಯಕ್ಷೆ ಗೌರಮ್ಮ ಸೋಮಶೇಖರ್ ಹಾಗೂ ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಸದಸ್ಯ ಮಂಜುನಾಥನ್ ಮಾತ ನಾಡಿ ಪೌಷ್ಟಿಕ ಆಹಾರ ಸೇವನೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಿಇಓ ಎ.ಎಂ. ಯೋಗೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಕೆ.ಪದ್ಮ ಸೇರಿದಂತೆ ಇತರರು ಹಾಜರಿ ದ್ದರು. ಇದೇ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿ ರಶ್ಮಿ ಅವ ರಿಗೆ ಸೀಮಂತ ಮಾಡಿ ಮುತ್ತೈದೆಯರೆಲ್ಲಾ ಶುಭ ಕೋರಿ, ಸಂಸ್ಕøತಿ ಸಾರಿದರು.

Translate »