Tag: Nitin Gadkari

ಮೈಸೂರು-ಬೆಂಗಳೂರು, ಮೈಸೂರು-ನಂಜನಗೂಡು ಹೆದ್ದಾರಿಗಳಲ್ಲಿ ಸರ್ವಿಸ್ ರಸ್ತೆ ವಿಸ್ತರಣೆ, ಅಂಡರ್‍ಪಾಸ್, ಕೆಳ ಸೇತುವೆ ನಿರ್ಮಾಣಕ್ಕೆ  ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಸಂಸದ ಪ್ರತಾಪ ಸಿಂಹ ಮನವಿ
ಮೈಸೂರು

ಮೈಸೂರು-ಬೆಂಗಳೂರು, ಮೈಸೂರು-ನಂಜನಗೂಡು ಹೆದ್ದಾರಿಗಳಲ್ಲಿ ಸರ್ವಿಸ್ ರಸ್ತೆ ವಿಸ್ತರಣೆ, ಅಂಡರ್‍ಪಾಸ್, ಕೆಳ ಸೇತುವೆ ನಿರ್ಮಾಣಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಸಂಸದ ಪ್ರತಾಪ ಸಿಂಹ ಮನವಿ

February 12, 2021

ಮೈಸೂರು,ಫೆ.11-ಮೈಸೂರು-ನಂಜನ ಗೂಡು (ರಾಷ್ಟ್ರೀಯ ಹೆದ್ದಾರಿ-212) ರಸ್ತೆ ಯನ್ನು ಸದ್ಯದ 4 ಪಥದಿಂದ 6 ಪಥಕ್ಕೆ ಮೇಲ್ದರ್ಜೆಗೇರಿಸಬೇಕು, ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕು ಮಾಲೂರು ಹೋಬಳಿಯ ಮತ್ತಿಕೆರೆ-ಶೆಟ್ಟಿಹಳ್ಳಿ ಗ್ರಾಮ ದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಯಲ್ಲಿ ಮತ್ತು ಮದ್ದೂರು ಪಟ್ಟಣ ಸಮೀ ಪದ ಯಲಿಯೂರು ವೃತ್ತದಲ್ಲಿ `ಅಂಡರ್ ಪಾಸ್’ ನಿರ್ಮಿಸಬೇಕು. ಕೋಡಿಹಳ್ಳಿ-ಮದ್ದೂರು ಮಾರ್ಗದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯ ಸರ್ವಿಸ್ ರಸ್ತೆ ಯನ್ನು ಮತ್ತಷ್ಟು ವಿಸ್ತರಿಸಬೇಕು. ಮೈಸೂ ರಿನ ರಿಂಗ್ ರಸ್ತೆಯಲ್ಲಿ (ರಾಷ್ಟ್ರೀಯ ಹೆದ್ದಾರಿ-275ಕೆ) 4 ಕಡೆ `ಆರ್‍ಯುಬಿ’ (ರಸ್ತೆ ಕೆಳ ಸೇತುವೆ)ಗಳನ್ನು…

ಬಂಡಿಪುರ ಅಭಯಾರಣ್ಯದಲ್ಲಿ ರಾತ್ರಿ  ವಾಹನ ಸಂಚಾರ ನಿರ್ಬಂಧ ತೆರವಿಗೆ  ಕೇಂದ್ರದ ಮೂಲಕ ಕೇರಳ ಲಾಬಿ
ಮೈಸೂರು

ಬಂಡಿಪುರ ಅಭಯಾರಣ್ಯದಲ್ಲಿ ರಾತ್ರಿ  ವಾಹನ ಸಂಚಾರ ನಿರ್ಬಂಧ ತೆರವಿಗೆ  ಕೇಂದ್ರದ ಮೂಲಕ ಕೇರಳ ಲಾಬಿ

August 3, 2018

ಮೈಸೂರು: ವನ್ಯ ಜೀವಿಗಳ ಸಂರಕ್ಷಣೆಯ ಹಿತದೃಷ್ಟಿಯಿಂದ ಬಂಡಿಪುರ ಅಭಯಾರಣ್ಯದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿರ್ಬಂಧಿಸಿದ್ದ ರಾತ್ರಿ ಸಂಚಾರವನ್ನು ಪುನರಾರಂಭಿಸುವಂತೆ ಕೇರಳ ಸರ್ಕಾರ ಮತ್ತೊಮ್ಮೆ ಲಾಬಿ ಆರಂಭಿಸಿದ್ದು, ಕೇಂದ್ರ ಸರ್ಕಾರದ ಮೂಲಕ ರಾತ್ರಿ ಸಂಚಾರ ನಿರ್ಬಂಧ ಸಡಿಲಗೊಳಿಸುವುದರೊಂದಿಗೆ ರಸ್ತೆ ಅಗಲೀಕರಣಕ್ಕೆ ಶಿಫಾರಸ್ಸು ಮಾಡಿಸಿ, ವನ್ಯಜೀವಿಗಳ ಹಿತವನ್ನು ಬಲಿ ಕೊಡುವ ಯತ್ನ ಮಾಡಿದೆ. ನವದೆಹಲಿಯಲ್ಲಿ ಜು.17ರಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ನೇತೃತ್ವದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಕೇರಳ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್…

ಬೆಂಗಳೂರು-ಮೈಸೂರು ಹೆದ್ದಾರಿ ಅಭಿವೃದ್ಧಿಗೆ ವಿದ್ಯುತ್ ಕಂಬ, ಮರಗಳೇ ಅಡ್ಡಿ
ಮೈಸೂರು

ಬೆಂಗಳೂರು-ಮೈಸೂರು ಹೆದ್ದಾರಿ ಅಭಿವೃದ್ಧಿಗೆ ವಿದ್ಯುತ್ ಕಂಬ, ಮರಗಳೇ ಅಡ್ಡಿ

June 22, 2018

ಬೆಂಗಳೂರು:  ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ ಯನ್ನು ವಿಶ್ವ ದರ್ಜೆಗೆ ಏರಿಸಲು ವಿದ್ಯುತ್ ಕಂಬ ಹಾಗೂ ಮರಗಳು ಅಡ್ಡಿಯಾಗಿವೆ. ಈ ಗೊಂದಲ ನಿವಾರಿಸಲು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ರಾಜ್ಯಕ್ಕೆ ಧಾವಿಸಿ ವಿಶೇಷ ಸಭೆ ನಡೆಸಲಿದ್ದಾರೆ. ಅಂದಿನ ಸರ್ಕಾ ರದ ಒತ್ತಡಕ್ಕೆ ಮಣಿದು ವಿಧಾನಸಭಾ ಚುನಾ ವಣೆಗೂ ಮುನ್ನ ಗಡ್ಕರಿ ಅವರೇ ಅಷ್ಟಪಥ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಾಜ್ಯ ಹೆದ್ದಾರಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದನ್ನು ಬಿಟ್ಟರೆ, ರಸ್ತೆ ನಿರ್ಮಾಣ…

ಇಂದು ಮೋದಿ, ಗಡ್ಕರಿ ಭೇಟಿಯಾಗಲಿರುವ ಸಿಎಂ ಕುಮಾರಸ್ವಾಮಿ
ದೇಶ-ವಿದೇಶ, ಮೈಸೂರು

ಇಂದು ಮೋದಿ, ಗಡ್ಕರಿ ಭೇಟಿಯಾಗಲಿರುವ ಸಿಎಂ ಕುಮಾರಸ್ವಾಮಿ

June 18, 2018

ನವದೆಹಲಿ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ನಾಳೆ (ಜೂ.18) ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವ ರನ್ನು ಭೇಟಿ ಮಾಡಲಿದ್ದಾರೆ. ಮುಖ್ಯ ಮಂತ್ರಿಗಳ ಪ್ರಧಾನಿ ಭೇಟಿಗೆ ನಾಳೆ ಸಂಜೆ 4.30ಕ್ಕೆ ಸಮಯ ನಿಗದಿಯಾಗಿದೆ. ಈ ವೇಳೆ ರಾಜ್ಯದ ಹಲವಾರು ಯೋಜನೆ ಗಳ ಬಗ್ಗೆ ಮೋದಿ ಅವರ ಸಹಕಾರವನ್ನು ಕುಮಾರಸ್ವಾಮಿ ಕೋರಲಿದ್ದಾರೆ. ಕಾವೇರಿ ನಿರ್ವಹಣಾ ಮಂಡಳಿ ರಚನೆ ಹಾಗೂ ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆ ಕುರಿತು ಗಡ್ಕರಿ ಅವರ ಜೊತೆ ಚರ್ಚಿಸಲಿದ್ದಾರೆ.

Translate »