ಬೆಂಗಳೂರು-ಮೈಸೂರು ಹೆದ್ದಾರಿ ಅಭಿವೃದ್ಧಿಗೆ ವಿದ್ಯುತ್ ಕಂಬ, ಮರಗಳೇ ಅಡ್ಡಿ
ಮೈಸೂರು

ಬೆಂಗಳೂರು-ಮೈಸೂರು ಹೆದ್ದಾರಿ ಅಭಿವೃದ್ಧಿಗೆ ವಿದ್ಯುತ್ ಕಂಬ, ಮರಗಳೇ ಅಡ್ಡಿ

June 22, 2018

ಬೆಂಗಳೂರು:  ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ ಯನ್ನು ವಿಶ್ವ ದರ್ಜೆಗೆ ಏರಿಸಲು ವಿದ್ಯುತ್ ಕಂಬ ಹಾಗೂ ಮರಗಳು ಅಡ್ಡಿಯಾಗಿವೆ. ಈ ಗೊಂದಲ ನಿವಾರಿಸಲು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ರಾಜ್ಯಕ್ಕೆ ಧಾವಿಸಿ ವಿಶೇಷ ಸಭೆ ನಡೆಸಲಿದ್ದಾರೆ. ಅಂದಿನ ಸರ್ಕಾ ರದ ಒತ್ತಡಕ್ಕೆ ಮಣಿದು ವಿಧಾನಸಭಾ ಚುನಾ ವಣೆಗೂ ಮುನ್ನ ಗಡ್ಕರಿ ಅವರೇ ಅಷ್ಟಪಥ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ್ದರು.

ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಾಜ್ಯ ಹೆದ್ದಾರಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದನ್ನು ಬಿಟ್ಟರೆ, ರಸ್ತೆ ನಿರ್ಮಾಣ ಕಾಮಗಾರಿ ಕನಸಾಗಿಯೇ ಉಳಿದಿದೆ. ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಭೂಸ್ವಾಧೀನ ಮತ್ತು ಸರ್ವೆ ಕಾರ್ಯ ಇನ್ನೂ ಪೂರ್ಣ ಗೊಂಡಿಲ್ಲ, ಇದರ ನಡುವೆ ಉದ್ದೇಶಿತ ಹೆದ್ದಾರಿ ನಡುವೆ ಬರುವ ವಿದ್ಯುತ್ ಸಂಪರ್ಕ ವನ್ನು ಸ್ಥಳಾಂತರಿಸಲು ನಮಗೆ ಶೇಕಡಾ 15ರಷ್ಟು ಹಣ ನೀಡಬೇಕು ಎಂದು ಇಂಧನ ಇಲಾಖೆ ತಕರಾರು ಎತ್ತಿದೆ. ಮತ್ತೊಂದೆಡೆ ಅರಣ್ಯ ಮತ್ತು ಪರಿಸರ ಇಲಾಖೆ ಕೆಲವು ಭಾಗದಲ್ಲಿ ಕ್ಯಾತೆ ತೆಗೆದಿರುವುದರಿಂದ ರಾಜ್ಯದ ಅಧಿಕಾರಿಗಳು ನಮಗ್ಯಾಕೆ ಈ ಉಸಾಬರಿ ಎಂದು ಕಡತಗಳನ್ನು ಕಪಾಟಿ ನಲ್ಲಿಟ್ಟು ಬೀಗ ಹಾಕಿದ್ದಾರೆ. ವಿದ್ಯುತ್ ಕಂಬಗಳ ಸ್ಥಳಾಂತರಕ್ಕೆ ಯೋಜ ನೆಯ ಶೇಕಡಾ 2.5ರಷ್ಟು ಮಾತ್ರ ಬಳಕೆ ಮಾಡಿಕೊಳ್ಳಬೇಕು ಎಂಬ ನಿಯಮವಿದೆ, ಈ ನಿಯಮ ಮೀರಿ ಹೆಚ್ಚಿನ ಹಣವನ್ನು ಪ್ರಾಧಿಕಾರ ನೀಡಲು ಸಾಧ್ಯವಿಲ್ಲ.

ಮತ್ತೊಂದೆಡೆ ಮರಗಳ ನಾಶದಿಂದ ಉಂಟಾಗುವ ಪರಿಸರ ಅಸಮತೋಲನ ನಿವಾರಣೆಗೆ ಬೇರೆಡೆ ಮರಗಳನ್ನು ಬೆಳೆಸ ಬೇಕಿದೆ.

ಸುದ್ದಿಗೋಷ್ಠಿಯಲ್ಲಿ ರಸ್ತೆ ಅಭಿವೃದ್ಧಿ ಕುರಿತು ಪ್ರಸ್ತಾಪಿಸಿದ ರೇವಣ್ಣ, ಬೆಂಗಳೂರು-ಮೈಸೂರು ನಡುವಿನ ರಸ್ತೆಯನ್ನು ವಿಶ್ವ ದರ್ಜೆಗೆ ಏರಿಸುವ ಕಾಮಗಾರಿಗೆ ವಿದ್ಯುತ್ ಕಂಬಗಳೇ ಅಡ್ಡಿಯಾಗಿವೆ ಎಂದು ಅಸ ಹಾಯಕತೆ ವ್ಯಕ್ತ ಪಡಿಸಿದರು. ಇತ್ತೀಚಿನ ಭೇಟಿ ಸಂದರ್ಭದಲ್ಲಿ ಗಡ್ಕರಿ ಅವರ ಗಮನಕ್ಕೂ ಈ ವಿಷಯ ತಂದಿದ್ದೇವೆ, ನಾನೇ ಖುದ್ದು ಬಂದು ಸಮಸ್ಯೆ ಪರಿ ಹರಿಸಿ ಕಾಮಗಾರಿಗೆ ಚಾಲನೆ ನೀಡುವು ದಾಗಿ ಅವರು ಭರವಸೆ ನೀಡಿದ್ದಾರೆ ಎಂದರು.

ಬೆಂಗಳೂರು-ಮೈಸೂರು ಹೆದ್ದಾರಿ ಯೋಜನೆಯ ಕುರಿತು ಮಾತ್ರವಲ್ಲ, ಇನ್ನೂ ಹಲವು ಯೋಜನೆಗಳ ಕುರಿತು ಕೇಂದ್ರ ಸಚಿವರು ಪರಿಶೀಲನೆ ನಡೆಸಲಿದ್ದಾರೆ. ಆನಂತರದ ದಿನಗಳಲ್ಲಿ ಯೋಜನೆಗಳು ತ್ವರಿತವಾಗಿ ಆರಂಭವಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದ ಮಡಿಕೇರಿ-ಸಂಪಾಜೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರ ಮಾಡಲಾಗಿದೆ. ಇದೇ ಮೂವತ್ತರಂದು ಸಂಪಾಜೆ-ಮಾಣ ರಸ್ತೆಯನ್ನೂ ಹಸ್ತಾಂತರಿಸಲಾಗುವುದು ಎಂದರು. ಕರ್ನಾಟಕ ಹಾಗೂ ಕೇರಳ ರಾಜ್ಯಗಳ ನಡುವಣ ಸಂಚಾರ ವ್ಯವಸ್ಥೆ ಉತ್ತಮಗೊಳಿ ಸಲು ಮಡಿಕೇರಿ-ತಲಚೇರಿ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಸೂಚಿಸಲಾಗಿದೆ ಎಂದರು.

Translate »