ಸಿದ್ದಗಂಗಾಶ್ರೀಗಳಿಗೆ ಆರೋಗ್ಯ ತಪಾಸಣೆ
ಮೈಸೂರು

ಸಿದ್ದಗಂಗಾಶ್ರೀಗಳಿಗೆ ಆರೋಗ್ಯ ತಪಾಸಣೆ

June 22, 2018

ಬೆಂಗಳೂರು: ಸಿದ್ಧಗಂಗಾ ಮಠದ ಡಾ.ಶಿವ ಕುಮಾರ ಸ್ವಾಮೀಜಿ ಅವರು ಗುರುವಾರ ಬೆಳಿಗ್ಗೆ ಬೆಂಗಳೂ ರಿನ ಬಿಜಿಎಸ್ ಆಸ್ಪತ್ರೆ ಯಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆಗೆ ಒಳಗಾಗಿದ್ದರು. ಸ್ವಾಮೀಜಿಯವರು ಆರೋಗ್ಯ ವಾಗಿದ್ದಾರೆ. ಈ ಹಿಂದೆ ಸ್ಟಂಟ್ ಅಳವಡಿಸಿ ರುವುದರಿಂದ ವೈದ್ಯರ ಸಲಹೆ ಮೇರೆಗೆ ಸಾಮಾನ್ಯ ಆರೋಗ್ಯ ತಪಾಸಣೆಗೆ ತೆರಳಿ ದ್ದರು ಎಂದು ಮಠದ ಮೂಲಗಳು ತಿಳಿಸಿವೆ.

ಇನ್ನೂ ಶ್ರೀಗಳು ಆಸ್ಪತ್ರೆಗೆ ದಾಖಲಾ ಗಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಬಿಜಿಎಸ್ ಆಸ್ಪತ್ರೆಗೆ ತೆರಳಿ ಶ್ರೀಗಳ ಆರೋಗ್ಯ ವಿಚಾರಿಸಿದರು.

ಮಠಕ್ಕೆ ವಾಪಸ್: ತುರ್ತು ಆರೋಗ್ಯ ತಪಾಸಣೆ ನಂತರ ಶತಾಯುಷಿ ಶ್ರೀಶಿವ ಕುಮಾರ ಸ್ವಾಮೀಜಿ ಮಠಕ್ಕೆ ವಾಪಸ್ಸಾ ಗಿದ್ದಾರೆ. ಮಠದಲ್ಲಿಯೇ 5 ದಿನ ರೋಗ ನಿರೋಧಕ ಔಷಧಿಗಳನ್ನು ಸ್ವಾಮೀಜಿಗೆ ನೀಡಲಾಗು ವುದು. ಪೂರ್ಣ ವಿಶ್ರಾಂತಿ ಪಡೆಯಲಿ ದ್ದಾರೆ. ನಿತ್ಯ ಬೆಳಿಗ್ಗೆ ಮತ್ತು ಸಂಜೆ ಔಷಧಿ ಕೊಡುವುದರೊಂದಿಗೆ ಮಠದಲ್ಲಿಯೇ ಐಸಿಯು ಕೇರ್ ರೀತಿ ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿ ತಪಾಸಣೆ ಮಾಡಲಿದ್ದಾರೆ. ಅದಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

Translate »