ಮೈಸೂರು: ಸಿದ್ದ ಗಂಗಾ ಶ್ರೀಗಳು ಪವಾಡ ಪುರುಷ ರಾಗಿದ್ದು, ಧಾರ್ಮಿಕ ನೆಲೆಗಟ್ಟಿನ ಮೇಲೆ ಶಿಕ್ಷಣ ನೀಡಿದರು. ಸಿದ್ಧಗಂಗಾ ಶ್ರೀಕ್ಷೇತ್ರ ದಲ್ಲಿ ಶಿಕ್ಷಣ ಪಡೆದ ಬಹಳಷ್ಟು ಮಂದಿ ಅಧಿಕಾರಿ, ರಾಜಕಾರಣಿ ಹಾಗೂ ಸಂತ ರಾಗಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಜೆ.ಕೆ.ಮೈದಾನದ ಅಮೃತ ಮಹೋ ತ್ಸವ ಭವನದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಸಮಿತಿ ಟ್ರಸ್ಟ್ ಹಾಗೂ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಯುವಕ ಮಂಡಲ್ ವತಿಯಿಂದ ಗುರು ವಾರ ಆಯೋಜಿಸಿದ್ದ ತ್ರಿವಿಧ ದಾಸೋಹಿ, ಕಾಯಕ ಯೋಗಿ, ಶತಾಯುಷಿ ಪರಮ ಪೂಜ್ಯ ಡಾ.ಶ್ರೀಶಿವಕುಮಾರಸ್ವಾಮೀಜಿ ಅವ ರಿಗೆ ಗುರುವಂದನೆ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತ ನಾಡಿದ ಅವರು, ಶ್ರೀಗಳು ಏಕಾಂಗಿಯಾಗಿ ಸಲ್ಲಿಸಿರುವ ಸೇವೆ, ಕೊಡುಗೆ ಅಪಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀಗಳು ಎಲ್ಲರ ಮನಸ್ಸಿನಲ್ಲಿ ನೆಲೆಯೂರಿ ದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಶ್ರೀಗಳು ಲಿಂಗೈಕ್ಯರಾದ ವೇಳೆ ಯಾವುದೇ ಪೊಲೀಸ್ ಅಧಿಕಾರಿಗಳು ತಡೆಯಲು ಸಾಧ್ಯವಾಗ ದಷ್ಟು ಭಾರೀ ಪ್ರಮಾಣದಲ್ಲಿ ಭಕ್ತ ಸಮೂ ಹವೇ ಹರಿದು ಬಂದಿತು. ಇದೊಂದು ದೇಶದಲ್ಲೇ ದಾಖಲೆ. ಆದರೂ ಎಲ್ಲಿಯೂ ಸಣ್ಣ-ಪುಟ್ಟ ಘಟನೆಗಳು ನಡೆಯಲಿಲ್ಲ. ಇದಕ್ಕೆ ಶ್ರೀಗಳ ಬಗ್ಗೆ ಇದ್ದ ಭಕ್ತಿ, ನಿಷ್ಠೆಯೇ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀಗಳಿಗೆ ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಮಠಕ್ಕೆ ತೆರಳಿ ಲಿಂಗಪೂಜೆ ಮಾಡಬೇಕು ಎನ್ನುತ್ತಿದ್ದರು. ಅವರು ನಡೆ ದಾಡುವ ದೇವರು. ಅವರಿಂದು ಐಕ್ಯರಾಗಿ ದ್ದರೂ ದೇವಾಲಯದಲ್ಲಿ ದೇವರಾಗಿ ನೆಲೆಸಿದ್ದಾರೆ. ಅಂತಹ ಮಹಾ ಪುರುಷರು, ಪುಣ್ಯ ಪುರುಷರು, ಜಗದ್ಗುರು ಶ್ರೀಗಳು ನಮ್ಮ ಮಣ್ಣಿನಲ್ಲಿ ಹುಟ್ಟಿ-ಬೆಳೆದಿರುವುದು ನಮ್ಮೆಲ್ಲರ ಪುಣ್ಯ. ಅವರನ್ನು ನಿತ್ಯವೂ ಸ್ಮರಿಸಬೇಕು ಎಂದು ಹೇಳಿದರು.
2007ರಲ್ಲಿ ನಾನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ವೇಳೆ ಸಿದ್ದ ಗಂಗಾ ಶ್ರೀಗಳಿಂದ ನಾಡಹಬ್ಬ ದಸರಾ ಉದ್ಘಾಟನೆ ಮಾಡಿಸಬೇಕೆಂದು ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಂದ ದೂರ ವಾಣಿ ಕರೆ ಮಾಡಿಸಿದಾಗ ಒಪ್ಪಿದ್ದರು. ಆದರೆ, ಬಿ.ಎಸ್.ಯಡಿಯೂರಪ್ಪ ಅವರಿಗೆ ಅಧಿ ಕಾರ ಹಸ್ತಾಂತರಿಸಲಿಲ್ಲ ಎಂಬ ಕಾರಣಕ್ಕೆ ಸರ್ಕಾರ ಬಿದ್ದು ಹೋಯಿತು. ನಂತರದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಗಳಾದಾಗ ಶ್ರೀಗಳು ದಸರಾ ಮಹೋತ್ಸವ ಉದ್ಘಾ ಟಿಸಿ ದೇಶಕ್ಕೆ ಆಶೀರ್ವಾದ ಮಾಡಿದ್ದರು ಎಂದು ಸ್ಮರಿಸಿದರು.
ಈ ಬಾರಿ ನಾನು ಉನ್ನತ ಶಿಕ್ಷಣ ಸಚಿವ ನಾದ ನಂತರ ತುಮಕೂರು ವಿವಿಗೆ ಭೇಟಿ ನೀಡಿದ್ದೆ. ಈ ವೇಳೆ ಸಿದ್ಧಗಂಗಾ ಮಠದ ಕಿರಿಯ ಶ್ರೀಗಳು ಹಾಜರಿದ್ದರು. ಕಾರ್ಯ ಕ್ರಮ ಮುಗಿದ ನಂತರ ಮಠಕ್ಕೆ ತೆರಳಿದೆ. ಆಗ ಕಿರಿಯ ಶ್ರೀಗಳು ಜಿ.ಟಿ.ದೇವೇಗೌಡರು ಬಂದಿದ್ದಾರೆಂದು ಶ್ರೀಗಳಿಗೆ ತಿಳಿಸಿದರು. ಆಗ ಶ್ರೀಗಳು ನನ್ನನ್ನು ಕರೆದು ನೀನು ಒಳ್ಳೆ ಹೋರಾಟಗಾರ ಎಂದು ಹೇಳಿದ್ದರು ಎಂದು ನೆನಪಿಗೆ ಜಾರಿದರು.
ಶ್ರೀರಂಗಪಟ್ಟಣ ಬೇಬಿಮಠ ಮತ್ತು ಚಂದ್ರ ವನ ಆಶ್ರಮದ ಪೀಠಾಧ್ಯಕ್ಷ ಡಾ. ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಮೈಸೂರು ಮತ್ತು ಬನ್ನಿಕುಪ್ಪೆ ಶ್ರೀ ಅರಮನೆ ಜಪದಕಟ್ಟೆ ಮಠದ ಡಾ.ಮುಮ್ಮಡಿ ಚಂದ್ರಶೇಖರ ಶಿವಾ ಚಾರ್ಯ ಸ್ವಾಮೀಜಿ, ತುಮಕೂರು ಜಿಲ್ಲೆ ಬೆಟ್ಟಹಳ್ಳಿ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಮೇಯರ್ ಪುಷ್ಪಲತಾ ಜಗನ್ನಾಥ್, ನಿವೃತ್ತ ಪ್ರಾಧ್ಯಾಪಕಿ ಡಾ. ಸಿ.ಜಿ.ಉಷಾದೇವಿ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಮೈಸೂರು ಡೈರಿ ಮಾಜಿ ಸದಸ್ಯ ಎಸ್.ಸಿ.ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.