ಆರೋಪಿ ಗಣೇಶ್ ಜೈಲುಪಾಲು
ಮೈಸೂರು

ಆರೋಪಿ ಗಣೇಶ್ ಜೈಲುಪಾಲು

February 22, 2019

ಬೆಂಗಳೂರು: ಮಾಜಿ ಸಚಿವ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮಾಜಿ ರೌಡಿ, ಅದೇ ಪಕ್ಷದ ಶಾಸಕ ಕಂಪ್ಲಿ ಗಣೇಶ್‍ಗೆ ಜೈಲೇ ಗತಿಯಾ ಗಿದೆ. ಆನಂದ್‍ಸಿಂಗ್ ಅವರ ಮೇಲೆ ಹಲ್ಲೆ ನಡೆಸಿ, ಸರಿಸುಮಾರು ಒಂದು ತಿಂಗಳಿ ನಿಂದ ತಲೆಮರೆಸಿಕೊಂಡಿದ್ದ ಗಣೇಶ್ ಅವರನ್ನು ಬಿಡದಿ ಪೊಲೀಸರು ನಿನ್ನೆ ಗುಜರಾತ್‍ನ ಅಹಮದಾಬಾದ್‍ನ ಹೊರ ವಲಯದಲ್ಲಿ ಬಂಧಿಸಿ, ಇಂದು ಮುಂಜಾನೆ ಬೆಂಗಳೂರಿಗೆ ಕರೆ ತಂದಿದ್ದರು. ವಿಚಾ ರಣೆ ನಡೆಸಿದ ನಂತರ ಅವರ ಆರೋಗ್ಯ ತಪಾಸಣೆ ಮಾಡಿ, ಹೆಚ್ಚಿನ ತನಿಖೆಗೆ ಒಳಪಡಿಸಲು ರಾಮನಗರ ಮುಖ್ಯ ಜಿಲ್ಲಾ ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಿದ್ದರು. ವಾದ ಪ್ರತಿವಾದ ಆಲಿಸಿದ ಜಿಲ್ಲಾ ನ್ಯಾಯಾಧೀಶೆ ಎಂ. ಅನೀತಾ ಅವರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ, ಆದೇಶ ಹೊರಡಿಸಿದರು.

Translate »