75 ನಿಮಿಷ ಯೋಗ ಪ್ರದರ್ಶನದ ಮೂಲಕ ಗೌಡರ ತಾಕತ್ತು ದರ್ಶನ
ಮೈಸೂರು

75 ನಿಮಿಷ ಯೋಗ ಪ್ರದರ್ಶನದ ಮೂಲಕ ಗೌಡರ ತಾಕತ್ತು ದರ್ಶನ

June 22, 2018

ಬೆಂಗಳೂರು: ಇತ್ತೀಚೆಗೆ ಪ್ರಧಾನಿ ಮೋದಿ ಫಿಟ್ನೆಸ್ ಚಾಲೆಂಜ್‍ಗೆ ಉತ್ತರ ಎಂಬಂತೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರು ಇಂದು ಸತತ 75 ನಿಮಿಷ ಯೋಗ ಮಾಡುವ ಮೂಲಕ ಗಮನ ಸೆಳೆದರು.

4ನೇ ಅಂತಾ ರಾಷ್ಟ್ರೀಯ ಯೋಗ ದಿನಾಚರಣೆ ಅಂಗ ವಾಗಿ ಪದ್ಮನಾಭನಗರ ನಿವಾಸದಲ್ಲಿ ಮಾಧ್ಯಮದವರ ಎದುರು ದೇವೇಗೌಡ ಅವರು ಯೋಗಾಸನ ಮಾಡಿದರು. ಯೋಗ ಗುರು ಕಾರ್ತಿಕ್ ಸಾಥ್ ನೀಡಿದರು. ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳ ವಿಕಾಸಕ್ಕೆ ವ್ಯಾಯಾಮ, ಯೋಗ ಅಗತ್ಯ. ಎಲ್ಲ ಶಾಲೆಗಳಲ್ಲಿ ಯೋಗಾಭ್ಯಾಸ ಅನುಷ್ಠಾನಕ್ಕೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡುವುದಾಗಿ ಹೇಳಿದರು.

ಯೋಗ ಪುರಾತನ ವಿದ್ಯೆ, ಕಳೆದ ಮೂರು ವರ್ಷಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ಆಚರಣೆಗೆ ಪ್ರಧಾನಿ ನರೇಂದ್ರ ಮೋದಿ ಮುನ್ನುಡಿ ಬರೆದರು, ನಾನು ಯಾರಿಗೂ ಫಿಟ್ನೆಸ್ ಚಾಲೆಂಜ್ ಮಾಡುತ್ತಿಲ್ಲ ಎಂದರು. ಕ್ಯಾನ್ಸರ್, ಹೃದಯ ಸಂಬಂಧಿ ತೊಂದರೆಗಳು ಸೇರಿದಂತೆ ಸಾಕಷ್ಟು ಅನಾರೋಗ್ಯ ಸಮಸ್ಯೆಗಳನ್ನು ಯೋಗಾಭ್ಯಾಸದಿಂದ ಗುಣಮುಖವಾಗಲು ಸಾಧ್ಯ ಎಂದರು.

Translate »