ಮೈಸೂರಲ್ಲಿ ಯೋಗ ವೈಭೋಗ
ಮೈಸೂರು

ಮೈಸೂರಲ್ಲಿ ಯೋಗ ವೈಭೋಗ

June 22, 2019

ಮೈಸೂರು ಜಿಲ್ಲಾಡಳಿತ, ಜಿ.ಪಂ, ನಗರಪಾಲಿಕೆ, ಪ್ರವಾ ಸೋದ್ಯಮ ಇಲಾಖೆ, ಆಯುಷ್ ಇಲಾಖೆ ಹಾಗೂ ಯೋಗ ಸಂಘಟನೆಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಹಮ್ಮಿ ಕೊಂಡಿರುವ ಬೃಹತ್ ಯೋಗ ಪ್ರದರ್ಶನದಲ್ಲಿ ಮಕ್ಕ ಳಿಂದ ಹಿರಿಯ ನಾಗರಿಕರವರೆಗೂ ಸಾವಿರಾರು ಮಂದಿ ಯೋಗ ಪಟುಗಳು ಪಾಲ್ಗೊಂಡು ವಿವಿಧ ಆಸನಗಳನ್ನು ಪ್ರದರ್ಶಿ ಸುವ ಮೂಲಕ ಐದನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಸಂಭ್ರಮದಿಂದ ಆಚರಿಸಿದರು.

2 ವರ್ಷದ ಹಿಂದೆ 53 ಸಾವಿರ ಮಂದಿ ಯೋಗ ಪ್ರದ ರ್ಶನದಲ್ಲಿ ಪಾಲ್ಗೊಂಡು ಗಿನ್ನಿಸ್ ದಾಖಲೆ ಬರೆದಿದ್ದ ಮೈಸೂರಿನ ಯೋಗಪಟುಗಳು ಇಂದು ನಡೆದ ಕಾರ್ಯ ಕ್ರಮದಲ್ಲೂ ಉತ್ಸಾಹದಿಂದ ಪಾಲ್ಗೊಂಡರು. ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಸಮ ಯಾಭಾವದಿಂ ದಾಗಿ ಈ ಬಾರಿ ಗಿನ್ನಿಸ್ ದಾಖಲೆಗೆ ನೋಂದಣಿ ಮಾಡಿಲ್ಲ ದಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿ ಗಳು, ವಿವಿಧ ಯೋಗ ಶಾಲೆಗಳವರು ಖಾಸಗಿ ಕಂಪನಿ ಗಳ ಉದ್ಯೋಗಿಗಳು, ಮಕ್ಕಳು, ವೃದ್ಧರು ಹಾಜರಿದ್ದು ಯೋಗ ಪ್ರದರ್ಶನ ನೀಡಿದರು. ಬೆಳಿಗ್ಗೆ 6ರಿಂದ 7 ಗಂಟೆವರೆಗೆ ಯೋಗಾ ಸನಕ್ಕೆ ಪೂರಕವಾದ ಓಂಕಾರ, ಶಾಂತಿ ಮಂತ್ರ ಹಾಗೂ ಯೋಗಾಸನಕ್ಕೆ ಪೂರ್ವಕವಾದ ಕಸರತ್ತುಗಳನ್ನು ಕುಳಿತಲ್ಲಿಯೇ ಮಾಡಿಸಲಾಯಿತು. ಬೆಳಿಗ್ಗೆ 7.10ಕ್ಕೆ ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಕ್ಷೇತ್ರದ ಶ್ರೀ ನಿರ್ಮಲಾ ನಂದನಾಥ ಸ್ವಾಮೀಜಿ, ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಸರ್‍ಖಾಜಿ ಜನಾಬ್ ಮೊಹಮ್ಮದ್ ಉಸ್ಮಾನ್ ಷರೀಫ್ ಸಾಬ್ ಅವರು ಡೋಲು ಬಾರಿಸುವ ಮೂಲಕ ಬೃಹತ್ ಯೋಗ ಪ್ರದರ್ಶನಕ್ಕೆ ಚಾಲನೆ ನೀಡಿದರು.

ವಿವಿಧ ಆಸನಗಳು: ಬಳಿಕ 7.20ರಿಂದ ಯೋಗ ಪ್ರದರ್ಶನ ಆರಂಭವಾಯಿತು. 2 ನಿಮಿಷ ಪ್ರಾರ್ಥನೆ, ನಂತರ ನಾಲ್ಕು ನಿಮಿಷ ಯೋಗಾಸನಕ್ಕೆ ಪೂರಕವಾದ 17 ಬಗೆಯ ವ್ಯಾಯಾಮ ಮಾಡಿಸಲಾಯಿತು. ನಂತರ 45 ನಿಮಿಷಗಳ ಕಾಲ ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ, ಸಮದಂಡಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಶಶಂಕಾಸನ, ಉತ್ಥಾನ ಮಂಡೂಕಾಸನ, ವಕ್ರಾಸನ, ಮಕರಾಸನ, ಸರಳ ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ಥಾನ ಪಾದಾಸನ, ಅರ್ಧ ಹಲಾಸನ, ಪವನಮುಕ್ತಾಸನ, ಶವಾಸನ ಇನ್ನಿತರ 19 ಆಸನಗಳನ್ನು ಪ್ರದರ್ಶಿಸಲಾಯಿತು. ಬಳಿಕ 14 ನಿಮಿಷ ಕಾಲ ಕಪಾಲಭಾತಿ, ನಾಡಿಶೋಧನ ಪ್ರಾಣಯಾಮ, ಶೀತಲೀ ಪ್ರಾಣಾಯಾಮ, ಭ್ರಾಮರಿ ಪ್ರಾಣಾಯಾಮ ಹಾಗೂ ಧ್ಯಾನ ನಡೆಸ ಲಾಯಿತು. ಅಂತಿಮವಾಗಿ ಬೆಳಿಗ್ಗೆ 8.15ಕ್ಕೆ ಒಂದು ನಿಮಿಷ ಶಾಂತಿ ಮಂತ್ರ ಪಠಿಸಿ ಯೋಗ ಪ್ರದರ್ಶನವನ್ನು ಮುಕ್ತಾಯಗೊಳಿಸ ಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸ್ವಚ್ಛತೆ ಕಾಪಾಡುವುದಕ್ಕೆ ಸಂಬಂಧಿಸಿದಂತೆ ಯೋಗಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಗಣ್ಯರು ಭಾಗಿ: ಯೋಗ ಪ್ರದರ್ಶನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಮೇಯರ್ ಪುಷ್ಪಲತಾ ಜಗನ್ನಾಥ್, ಶಾಸಕರಾದ ಎಸ್.ಎ.ರಾಮದಾಸ್, ಡಾ.ಯತೀಂದ್ರ ಸಿದ್ದರಾಮಯ್ಯ, ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಪ್ರವಾಸೋದ್ಯಮ ಇಲಾಖೆ ವ್ಯವಸ್ಥಾಪಕ ನಿರ್ದೇ ಶಕ ಕುಮಾರ್ ಪುಷ್ಕರ್, ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಜಿ.ಪಂ. ಸಿಇಒ ಕೆ.ಜ್ಯೋತಿ, ಮುಡಾ ಅಧ್ಯಕ್ಷ ಎನ್.ಹೆಚ್.ವಿಜಯ್, ಆಯುಕ್ತ ಕಾಂತ ರಾಜು, ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ, ಉಪಮೇಯರ್ ಷಫಿ ಅಹ್ಮದ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ಲಾ, ತಾ.ಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಎಡಿಸಿ ಪೂರ್ಣಿಮಾ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಶಿವಣ್ಣ, ಆಯುಷ್ ಉಪ ನಿರ್ದೇಶಕಿ ಡಾ.ಸೀತಾಲಕ್ಷ್ಮಿ, ಡಿವೈಎಸ್‍ಪಿ ಸ್ನೇಹಾ, ಬುಡಕಟ್ಟು ಇಲಾಖೆ ಉಪ ನಿರ್ದೇಶಕಿ ಬಿ.ಎಸ್.ಪ್ರಭ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಜೆಎಸ್‍ಎಸ್ ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ್ ಮಠ್, ಪಾಲಿಕೆ ಸದಸ್ಯರಾದ ಸತೀಶ್, ಶೋಭ ಮೋಹನ್, ಪ್ರೇಮಾ ಶಂಕರೇಗೌಡ, ಸುಬ್ಬಯ್ಯ, ಜಗದೀಶ, ಯೋಗ ಒಕ್ಕೂಟದ ಪದಾಧಿಕಾರಿಗಳಾದ ಶ್ರೀಹರಿ, ಬಿ.ಎಸ್.ಪ್ರಶಾಂತ್, ವಿವೇಕ್, ಯೋಗಪಟು ಖುಷಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಮೈದಾನದಲ್ಲಿ ಮೂರು ಆಂಬು ಲೆನ್ಸ್, 1 ಅಗ್ನಿಶಾಮಕ ವಾಹನ ಸ್ಥಳದಲ್ಲೇ ಮೊಕ್ಕಾಂ ಹೂಡಿತ್ತು. ತಲಾ 12 ಶೌಚ ಗೃಹಗಳ ಎರಡು ಸಂಚಾರಿ ಶೌಚಾಲಯ ಹಾಗೂ 11 ಸ್ಥಳಗಳಲ್ಲಿ 154 ತಾತ್ಕಾಲಿಕ ಶೌಚಗೃಹದ ವ್ಯವಸ್ಥೆ ಮಾಡಲಾಗಿತ್ತು. ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಪಾಲಿಕೆಯ ಮೂರು ಸಕ್ಕಿಂಗ್ ಯಂತ್ರ ಹಾಗೂ ನೀರಿನ ಟ್ಯಾಂಕ್ ಕಾಯ್ದಿರಿಸಲಾಗಿತ್ತು. ಮುಂಜಾನೆಯಿಂದಲೇ ರೇಸ್‍ಕೋರ್ಸ್ ಮೈದಾನದಲ್ಲಿ ಯೋಗಪಟುಗಳು ಬೀಡು ಬಿಟ್ಟಿದ್ದರಿಂದ ಶೌಚಾಲ ಯಗಳ ಬಳಕೆಗೆ ಮುಗಿಬಿದ್ದಿದ್ದರು. ಈ ಹಿನ್ನೆಲೆಯಲ್ಲಿ ಶೌಚಾ ಲಯದ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿತ್ತು. ಸಂಚಾರಿ ಶೌಚಗೃಹಕ್ಕೆ ಐದಾರು ಮೆಟ್ಟಿಲು ಹತ್ತಿಳಿಯ ಬೇಕಿದ್ದರಿಂದ ವಯಸ್ಸಾದವರು ಅದನ್ನು ಬಳಸಲು ಹಿಂದೇಟು ಹಾಕಿದರು. ಬೇರೆಡೆ ಇದ್ದ ಶೌಚಾಲಯ ಬಳಸಿದರು.

ಭದ್ರತೆಗೆ 670 ಸಿಬ್ಬಂದಿ: ಪೆÇಲೀಸ್ ಇಲಾಖೆಯಿಂದ ಅಗತ್ಯ ಸುರಕ್ಷತಾ ಕ್ರಮ, ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿತ್ತು. ಎಲ್ಲಾ ದ್ವಾರಗಳಲ್ಲಿಯೂ ಲೋಹ ಶೋಧಕ ಯಂತ್ರ ಅಳವಡಿಸಲಾಗಿತ್ತು. ಮೆಟಲ್ ಡಿಟೆಕ್ಟರ್ ದಾಟಿ ಬಂದರೂ ಮತ್ತೊಂದು ಬಾರಿ ತಪಾಸಣೆ ನಡೆಸಲಾಯಿತು. ಮಹಿಳೆಯರ ತಪಾಸಣೆಗೆ ಕೊಠಡಿ ಮಾದರಿ ಪೆಂಡಾಲ್ ಅಳವಡಿಸಲಾಗಿತ್ತು. ಭದ್ರತೆಗೆ 670 ಪೆÇಲೀಸ್ ಸಿಬ್ಬಂದಿ, 4 ಕೆಎಸ್‍ಆರ್‍ಪಿ, 12 ಸಿಆರ್ ತುಕಡಿ, 30 ಕಮಾಂಡೋಗಳು, 20 ಅಶ್ವರೋಹಿ ದಳವನ್ನು ನಿಯೋಜಿಸಲಾಗಿತ್ತು.

Translate »