ಇಂದು ಮೋದಿ, ಗಡ್ಕರಿ ಭೇಟಿಯಾಗಲಿರುವ ಸಿಎಂ ಕುಮಾರಸ್ವಾಮಿ
ದೇಶ-ವಿದೇಶ, ಮೈಸೂರು

ಇಂದು ಮೋದಿ, ಗಡ್ಕರಿ ಭೇಟಿಯಾಗಲಿರುವ ಸಿಎಂ ಕುಮಾರಸ್ವಾಮಿ

June 18, 2018

ನವದೆಹಲಿ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ನಾಳೆ (ಜೂ.18) ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವ ರನ್ನು ಭೇಟಿ ಮಾಡಲಿದ್ದಾರೆ. ಮುಖ್ಯ ಮಂತ್ರಿಗಳ ಪ್ರಧಾನಿ ಭೇಟಿಗೆ ನಾಳೆ ಸಂಜೆ 4.30ಕ್ಕೆ ಸಮಯ ನಿಗದಿಯಾಗಿದೆ. ಈ ವೇಳೆ ರಾಜ್ಯದ ಹಲವಾರು ಯೋಜನೆ ಗಳ ಬಗ್ಗೆ ಮೋದಿ ಅವರ ಸಹಕಾರವನ್ನು ಕುಮಾರಸ್ವಾಮಿ ಕೋರಲಿದ್ದಾರೆ. ಕಾವೇರಿ ನಿರ್ವಹಣಾ ಮಂಡಳಿ ರಚನೆ ಹಾಗೂ ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆ ಕುರಿತು ಗಡ್ಕರಿ ಅವರ ಜೊತೆ ಚರ್ಚಿಸಲಿದ್ದಾರೆ.

Translate »