ಕೋವಿಡ್ ಲಸಿಕೆಯ ಎರಡನೇ ಡೋಸ್ ನೀಡುವ ಪ್ರಕ್ರಿಯೆ ಆರಂಭ
ಮೈಸೂರು

ಕೋವಿಡ್ ಲಸಿಕೆಯ ಎರಡನೇ ಡೋಸ್ ನೀಡುವ ಪ್ರಕ್ರಿಯೆ ಆರಂಭ

February 16, 2021

ಮೈಸೂರು,ಫೆ.15(ಆರ್‍ಕೆ)- ಕೊರೊನಾ ವೈರಸ್ ಲಸಿಕೆಯ ಎರಡನೇ ಡೋಸ್ ನೀಡುವ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ.

ಜನವರಿ 16ರಿಂದ ದೇಶಾದ್ಯಂತ ಆರಂಭ ವಾದ ಅಭಿಯಾನದಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದ 28 ದಿನಗಳ ನಂತರ ಮೊದಲ ದಿನವಾದ ಇಂದು ಮೈಸೂರಿನ ಕೆಆರ್‍ಎಸ್ ರಸ್ತೆಯಲ್ಲಿರುವ ಟ್ರಾಮಾ ಕೇರ್ ಸೆಂಟರ್ ನಲ್ಲಿ ಇಂದು ಸಂಜೆವರೆಗೆ ಕೇವಲ 100 ಮಂದಿ ಲಸಿಕೆ ಎರಡನೇ ಡೋಸೇಜ್ ಪಡೆದರು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥಾಪಕ ಡಾ.ಆರ್.ಬಾಲಸುಬ್ರ ಹ್ಮಣ್ಯಂ, ಪಿಕೆಟಿಬಿ ಆಸ್ಪತ್ರೆ ವೈದ್ಯಕೀಯ ಅಧೀ ಕ್ಷಕ ಡಾ.ಹೆಚ್.ಎಂ.ವಿರೂಪಾಕ್ಷ, ಕೆಆರ್ ಆಸ್ಪತ್ರೆ ಆಂಬುಲೆನ್ಸ್ ಡ್ರೈವರ್ ಸಂದೇಶ್, ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವೈದ್ಯಕೀಯ ವಿದ್ಯಾರ್ಥಿ ಗಳು, ಆರೋಗ್ಯ ಇಲಾಖೆ ನರ್ಸಿಂಗ್ ಸಿಬ್ಬಂದಿ ಸೇರಿ ಇಂದು ಸಂಜೆವರೆಗೆ 100 ಮಂದಿ ಮಾತ್ರ 2ನೇ ಹಂತದ ಕೋವಿಡ್ ಲಸಿಕಾ ಡೋಸ್ ಪಡೆದುಕೊಂಡರು ಎಂದು ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ಲಸಿಕೆ ಪಡೆದು 28 ದಿನಗಳು ಕಳೆದ ಫಲಾನುಭವಿಗಳಿಗೆ 2ನೇ ಡೋಸೇಜ್ ಪಡೆಯುವಂತೆ ಅವರ ಮೊಬೈಲ್‍ಗೆ ಎಸ್‍ಎಂಎಸ್ ಸಂದೇಶ ನೀಡ ಲಾಗಿತ್ತು. ಅದಕ್ಕಾಗಿ ಮೈಸೂರಿನ ಟ್ರಾಮಾ ಕೇರ್ ಸೆಂಟರ್ ಹಾಗೂ ಜಿಲ್ಲೆಯ ಎಲ್ಲಾ ತಾಲೂಕುಗಳ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲು ಸಕಲ ಸಿದ್ಧತೆಯನ್ನೂ ಮಾಡಲಾಗಿದೆ. ಅದರ 2ನೇ ಹಂತದ ಲಸಿಕೆ ಪಡೆಯಲು ಫಲಾನುಭವಿಗಳು ಬಾರದೇ ನಿರಾಸಕ್ತಿ ತೋರಿರುವುದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಆಶ್ಚರ್ಯ ಮೂಡಿಸಿದೆ.

2,826 ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತಾದರೂ ಮಧ್ಯಾಹ್ನ 3 ಗಂಟೆವರೆಗೆ 20 ಹಾಗೂ ಸಂಜೆವರೆಗೆ ಕೇವಲ 100 ಮಂದಿ ಫಲಾನುಭವಿಗಳು ಜಿಲ್ಲೆಯಾದ್ಯಂತ ಲಸಿಕೆಯ 2ನೇ ಡೋಸ್ ಪಡೆದುಕೊಂಡಿದ್ದಾರೆ. ಮೊಬೈಲ್‍ಗೆ ಮೆಸೇಜ್ ಬರದಿದ್ದರೂ, ಮೊದಲ ಡೋಸೇಜ್ ಪಡೆದು 28 ದಿನ ಕಳೆದಿರುವ ಫಲಾನುಭವಿ ಗಳು ನಿಯೋಜಿತ ಕೇಂದ್ರಗಳಿಗೆ ತೆರಳಿ ಕೋವಿಡ್ ಲಸಿಕೆಯ 2ನೇ ಡೋಸ್ ಪಡೆಯಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಆಶಾ ಕಾರ್ಯಕರ್ತರು, ನರ್ಸಿಂಗ್ ವಿದ್ಯಾರ್ಥಿಗಳ ಪೈಕಿ ಬಹುತೇಕ ಮಂದಿ ಮೊದಲ ಸುತ್ತಿನ ಲಸಿಕೆ ಪಡೆಯಲು ಮುಂದೆ ಬಾರದ ಕಾರಣ, ಅವರು ಫೆಬ್ರವರಿ 25ರವರೆಗೆ ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಮೆಡಿ ಸಿನ್ ವಿಭಾಗದ ಮುಖ್ಯಸ್ಥ ಡಾ.ಲಕ್ಷ್ಮೇ ಗೌಡ, ಅಸಿಸ್ಟೆಂಟ್ ಪ್ರ್ರೊಫೆಸರ್ ಡಾ.ಮಧು ಕುಮಾರ್, ಕೋವಿಡ್-19 ಇಮ್ಯುನೈ ಸೇಷನ್ ಅಧಿಕಾರಿ ಡಾ.ಎಲ್.ರವಿ ಸೇರಿ ದಂತೆ ಹಲವರು ಮೈಸೂರಿನ ಟ್ರಾಮಾ ಕೇರ್ ಸೆಂಟರ್‍ನಲ್ಲಿ ಎರಡನೇ ಡೋಸ್ ನೀಡುವ ವ್ಯವಸ್ಥೆ ಕಲ್ಪಿಸಿದರು.

Translate »