ತ್ವರಿತ್ ತಯಾರ್ ಉಡುಗೊರೆ ಪ್ಯಾಕ್ ಬಿಡುಗಡೆ
ಮೈಸೂರು

ತ್ವರಿತ್ ತಯಾರ್ ಉಡುಗೊರೆ ಪ್ಯಾಕ್ ಬಿಡುಗಡೆ

February 18, 2021

ಮೈಸೂರು, ಫೆ.17-ಧರ್ಮಸ್ಥಳದ ಶ್ರೀ ಮಂಜುನಾಥ ಕ್ಷೇತ್ರದಲ್ಲಿ ತ್ವರಿತ್ ತಯಾರ್ ಆಹಾರ ಉತ್ಪನ್ನ ತಯಾರಕರ ಉಡುಗೊರೆ ಪ್ಯಾಕ್‍ಗಳನ್ನು ಧರ್ಮ ಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಬಿಡುಗಡೆ ಮಾಡಿದರು. ತ್ವರಿತ್ ತಯಾರ್ ಆಹಾರ ಉತ್ಪಾದಕರು ತಮ್ಮ ಆಹಾರ ಉತ್ಪನ್ನವನ್ನು ಡಬ್ಬಿ ಯಲ್ಲಿ ಜನಸಾಮಾನ್ಯರ ಕೈಗೆಟಕುವ ದರದಲ್ಲಿ ವಿವಿಧ ಶ್ರೇಣಿಯಲ್ಲಿ ಬಿಡುಗಡೆಗೊಳಿಸಿದ್ದಾರೆ. ಉಡುಗೊರೆ ಕೊಡಬಯಸು ವವರು ಅದನ್ನು ಖುದ್ದಾಗಿ ಪಡೆದು ನೀಡಬಹುದು. ಅಥವಾ ತ್ವರಿತ್ ತಯಾರ್ ಸಂಸ್ಥೆ ಯವರಿಗೆ ತಿಳಿಸಿದಲ್ಲಿ ನಿಮ್ಮ ಪರವಾಗಿ ಉಡುಗೊರೆಯನ್ನು ಅಂಚೆ ಮೂಲಕ ಅವರಿಗೆ ಕಳುಹಿಸುವ ವ್ಯವಸ್ಥೆ ಮಾಡುತ್ತಾರೆ. ತ್ವರಿತ್ ತಯಾರ್‍ನ ಮಾಲೀಕ ವಿ.ಶ್ರೀಕಾಂತ್ ಮತ್ತು ಶಶಿಕಲಾ ಶ್ರೀಕಾಂತ್ ಮತ್ತು ಚಿತ್ಪಾವನಾ ಬ್ರಾಹ್ಮಣ ಸಂಘದ ಕಾರ್ಯದರ್ಶಿ ಎ.ಶ್ರೀನಿವಾಸ್ ಮತ್ತಿತರರು ಹಾಜರಿದ್ದರು. ಮಾಹಿತಿಗೆ ಮೊ.9448369716 ಸಂಪರ್ಕಿಸಬಹುದು.

Translate »