ವಿಜ್ಞಾನ ಹಬ್ಬದಲ್ಲಿ ಮಕ್ಕಳ ಕ್ರಿಯಾತ್ಮಕ ಚಿಂತನೆ ಅನಾವರಣ
ಮೈಸೂರು

ವಿಜ್ಞಾನ ಹಬ್ಬದಲ್ಲಿ ಮಕ್ಕಳ ಕ್ರಿಯಾತ್ಮಕ ಚಿಂತನೆ ಅನಾವರಣ

December 5, 2019

ಮೈಸೂರು: ಮೈಸೂರಿನ ಕನಕ ಗಿರಿಯ ಸರ್ಕಾರಿ ಶಾರದಾವಿಲಾಸ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಆವರಣದಲ್ಲಿ ಬುಧವಾರ ನಡೆದ ಕನಕಗಿರಿ ಕ್ಲಸ್ಟರ್ ಮಕ್ಕಳ ವಿಜ್ಞಾನ ಹಬ್ಬದಲ್ಲಿ 9 ಶಾಲೆ ಗಳ ನೂರಾರು ವಿದ್ಯಾರ್ಥಿಗಳು ವಿಜ್ಞಾನದ ವಿವಿಧ ಚಟು ವಟಿಕೆಗಳಲ್ಲಿ ಪಾಲ್ಗೊಂಡು ಸೈ ಎನಿಸಿಕೊಂಡರು.

ದಕ್ಷಿಣ ವಲಯದ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕನಕಗಿರಿ ಕ್ಲಸ್ಟರ್, ಸರ್ಕಾರಿ ಶಾರದಾ ವಿಲಾಸ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ದಿನವಿಡೀ ನಡೆದ ಕನಕಗಿರಿ ಕ್ಲಸ್ಟರ್ ಮಕ್ಕಳ ವಿಜ್ಞಾನ ಹಬ್ಬದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ವಿಜ್ಞಾನದ ವಿವಿಧ ಮಾದರಿ ಪ್ರದರ್ಶಿಸಿ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 9 ಶಾಲೆಗಳ ನೂರಾರು ವಿದ್ಯಾರ್ಥಿಗಳನ್ನು ಭಾನು, ಭೂಮಿ, ನೀರು, ಗಾಳಿ, ಬೆಂಕಿ ಹೆಸರಿನಲ್ಲಿ 5 ಗುಂಪುಗಳಾಗಿ ವಿಂಗಡಿ ಸಲಾಯಿತು. ಪ್ರತಿಯೊಂದು ಗುಂಪುಗಳಿಗೆ ಜೀವ ಜಲ (ಆಹಾರ ಸರಪಳಿ) ಆಟ, ಕಾಗದದ ಅಸ್ಥಿಪಂಜರ, ತ್ರೀಡಿ ಕನ್ನಡಕ, ಕುಪ್ಪಳಿಸುವ ಕಪ್ಪೆ, ಓರಿಗಾಮಿ, ಏಂಗಲ್ ಡೇಂಗಲ್ ಮೀಟರ್, ಪದಪ್ರಾಸ (ಕವನ ರಚನೆ), ಇರು ವುದಷ್ಟೇ ನೀರು, ಏರುವ ಹಲ್ಲಿ, ಸೋಪಿನ ಗುಳ್ಳೆ, ಪರಿ ಸರ (ಮರ), ಮರಕುಟಿಕ, ಡ್ರಾಗನ್, ಪ್ರತಿಬಿಂಬ, ವೃತ್ಯಾಂಕ್ಷರಿ ಚಟುವಟಿಕೆ ನಡೆಸಲು ಸೂಚಿಸಲಾಯಿತು. ಪ್ರತಿಯೊಂದು ಗುಂಪು ಬೆಳಿಗ್ಗೆ 10ರಿಂದ 1 ಗಂಟೆಯ ವರೆಗೆ ಮೊದಲ ಚಟುವಟಿಕೆ, ಮಧ್ಯಾಹ್ನ 2ರಿಂದ 3.30ಕ್ಕೆ ಎರಡನೇ ಚಟುವಟಿಕೆ, 3.40ರಿಂದ 5 ಗಂಟೆ ಯವರೆಗೆ 3ನೇ ಚಟುವಟಿಕೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಇದೇ ವೇಳೆ ವಿದ್ಯಾರ್ಥಿಗಳು ತಯಾ ರಿಸಿದ ರಾಕೆಟ್ ಅನ್ನು ಅತಿಥಿಗಳು ಹಾರಿಸುವ ಮೂಲಕ ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಶ್ಲಾಘಿಸಿದರು.

ಇದಕ್ಕೂ ಮುನ್ನ ಮಕ್ಕಳ ವಿಜ್ಞಾನ ಹಬ್ಬವನ್ನು ಡಿಡಿ ಪಿಐ ಪಾಂಡುರಂಗ ಉದ್ಘಾಟಿಸಿ, ಬಳಿಕ ಮಾತ ನಾಡುತ್ತ, ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ವಿಜ್ಞಾನ ಕ್ಷೇತ್ರದಲ್ಲಿ ಆವಿಷ್ಕಾರ ಮಾಡುವ ಚಿಂತನೆ ಬೆಳೆಸುವಲ್ಲಿ ಶ್ರಮಿಸಬೇಕು. ಇತ್ತೀಚಿನ ದಿನಗಳಲ್ಲಿ ವಿಜ್ಞಾನದ ಕಲಿಕೆಗೆ ಪೂರಕವಾದ ವಾತಾವರಣವಿದೆ. ಮಕ್ಕಳಲ್ಲಿ ಮೂಢನಂಬಿಕೆ ಹೋಗಲಾಡಿಸಿ, ವೈಜ್ಞಾನಿಕ ಮನೋಭಾವ ಬೆಳಸಲು ಶಿಕ್ಷಕರು ಮುಂದಾಗಬೇಕು ಎಂದು ಸಲಹೆ ನೀಡಿದರು. ಮಕ್ಕಳು ಪೇಪರ್‍ನಲ್ಲಿ ತಯಾರಿಸಿದ ಟೋಪಿಯನ್ನೇ ಅತಿಥಿಗಳಿಗೆ ತೊಡಿಸಲಾಯಿತು. ಈ ಸಂದರ್ಭದಲ್ಲಿ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಕುಮಾರ್, ಕನಕಗಿರಿ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಆರ್.ನಾರಾ ಯಣ್, ಬಿಆರ್‍ಸಿ ನಾಗೇಶ್, ಜಿಲ್ಲಾ ಪ್ರಾ.ಶಾ.ಶಿ. ಸಂಘದ ಕಾರ್ಯದರ್ಶಿ ಸೋಮೇಗೌಡ, ಸರ್ಕಾರಿ ಶಿ. ನೌಕರರ ಸಂಘದ ಉಪಾಧ್ಯಕ್ಷ ಮಾಲಂಗಿ ಸುರೇಶ್, ರಾಜು, ಕಾರ್ಯಕ್ರಮದ ನೋಡಲ್ ಸಿಆರ್‍ಪಿ ಕೆ.ಕಾವ್ಯಶ್ರೀ, ವೀಣಾಶ್ರೀ, ಸಂಪನ್ಮೂಲ ವ್ಯಕ್ತಿಗಳಾದ(ಸಹ ಶಿಕ್ಷಕರಾದ) ಸವಿತಾ, ಸುಗುಣ, ನರಸಿಂಹ, ಪಾವನ, ಲಕ್ಷ್ಮೀ ಇದ್ದರು.

Translate »