ಬಾಕಿ ವೇತನಕ್ಕೆ ಆಗ್ರಹಿಸಿ ವಸತಿ ನಿಲಯ ನೌಕರರ ಪ್ರತಿಭಟನೆ
ಮೈಸೂರು

ಬಾಕಿ ವೇತನಕ್ಕೆ ಆಗ್ರಹಿಸಿ ವಸತಿ ನಿಲಯ ನೌಕರರ ಪ್ರತಿಭಟನೆ

December 5, 2019

ಮೈಸೂರು: ಬಾಕಿ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮೈಸೂರಿನಲ್ಲಿ ಬುಧವಾರ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯದ ನೌಕರರು ಪ್ರತಿಭಟನೆ ನಡೆಸಿದರು. ಮೈಸೂರಿನ ಪಡುವಾರ ಹಳ್ಳಿ ಬಳಿ ಇರುವ ಸಮಾಜ ಕಲ್ಯಾಣ ಇಲಾಖೆ ಕಚೇರಿ ಮುಂಭಾಗ ಎಐಯುಟಿಯುಸಿ ಹಾಗೂ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯದ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಲಯಗಳ ನೌಕರರು ಸರ್ಕಾ ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಸಂಯುಕ್ತ ವಿದ್ಯಾರ್ಥಿನಿಲಯ ಗಳಲ್ಲಿ ಕೆಲಸ ಮಾಡುವ ನೌಕರರಿಗೆ ಕಳೆದ 6 ತಿಂಗಳಿಂದ ವೇತನ ಮಂಜೂರು ಮಾಡದೆ ನಿರ್ಲ ಕ್ಷಿಸಿದೆ. ಇದರಿಂದ ನೌಕರರ ಕುಟುಂಬ ಸಂಕಿಷ್ಟಕ್ಕೀ ಡಾಗಿದೆ. ಹಲವು ಬಾರಿ ಮನವಿ ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಕೂಡಲೇ 2015-16ನೇ ಸಾಲಿನ ಬಾಕಿ ವೇತನ ಮಂಜೂರು ಮಾಡಬೇಕು. ಹಾಲಿ ಗುತ್ತಿಗೆದಾರರು ಬಾಕಿ ಇರುವ ಇಪಿಎಫ್ ಹಣ ವನ್ನು ಎಲ್ಲ ಕಾರ್ಮಿಕರ ಖಾತೆಗೆ ಸಂದಾಯ ಮಾಡಿರುವ ದಾಖಲೆಗಳನ್ನು ಒದಗಿಸಬೇಕು. ಇಎಸ್‍ಐ ಕಾರ್ಡ್‍ನ್ನು ಎಲ್ಲ ಕಾರ್ಮಿಕರಿಗೂ ನೀಡಬೇಕು. ವೇತನ, ಪಿಎಫ್,ಇಎಸ್‍ಐ ಇತ್ಯಾದಿ ಪಾವತಿ ಚೀಟಿಯನ್ನು ಕಡ್ಡಾಯವಾಗಿ ಪ್ರತಿ ತಿಂಗಳು ಕಾರ್ಮಿಕರಿಗೆ ನೀಡಬೇಕು ಎಂದು ಒತ್ತಾಯಿಸಿ ದರು. ಪ್ರತಿಭಟನೆಯಲ್ಲಿ ಸಂಯುಕ್ತ ವಸತಿ ನಿಲಯಗಳ ಕಾರ್ಮಿಕರ ಸಂಘದ ಪದಾಧಿಕಾರಿ ಗಳಾದ ರವಿ, ಮಹದೇವಮ್ಮ, ಲೋಕೇಶ್, ವಿಜಯ, ಶೋಭಾ ಮತ್ತಿತರರು ಪಾಲ್ಗೊಂಡಿದ್ದರು.

Translate »