ಶ್ರೀ ಸೇವಾಲಾಲ್ ದೇವಾಲಯ ಧ್ವಂಸ ಖಂಡಿಸಿ ಮೈಸೂರಲ್ಲಿ ಬಂಜಾರ ಸಮುದಾಯ ಪ್ರತಿಭಟನೆ
ಮೈಸೂರು

ಶ್ರೀ ಸೇವಾಲಾಲ್ ದೇವಾಲಯ ಧ್ವಂಸ ಖಂಡಿಸಿ ಮೈಸೂರಲ್ಲಿ ಬಂಜಾರ ಸಮುದಾಯ ಪ್ರತಿಭಟನೆ

December 5, 2019

ಮೈಸೂರು: ಕಲಬುರ್ಗಿಯಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ಹಿನ್ನೆಲೆ ಯಲ್ಲಿ ಮಾದಿಹಾಳ್ ತಾಂಡಾದಲ್ಲಿನ ಸಂತ ಶ್ರೀ ಸೇವಾಲಾಲ್ ದೇವಾಲಯ ಧ್ವಂಸ ಮಾಡಿರುವುದನ್ನು ಪುನರ್ ನಿರ್ಮಿಸುವಂತೆ ಬಂಜಾರ ಸೇವಾ ಸಂಘದ ಕಾರ್ಯ ಕರ್ತರು ಪ್ರತಿಭಟನೆ ನಡೆಸಿದರು. ಮೈಸೂರು ಡಿಸಿ ಕಚೇರಿ ಬಳಿ ಬುಧವಾರ ಪ್ರತಿಭಟನೆ ನಡೆಸಿದ ಬಂಜಾರ ಸೇವಾ ಸಂಘದ ಕಾರ್ಯಕರ್ತರು, ಕಲಬುರ್ಗಿಯ ವಿಮಾನ ನಿಲ್ದಾಣ ಉದ್ಘಾಟನೆಯ ನೆಪದಲ್ಲಿ ಮಾದಿಹಾಳ್ ತಾಂಡಾದಲ್ಲಿನ ಸಂತ ಶ್ರೀ ಸೇವಾಲಾಲ್ ಮತ್ತು ಶ್ರೀ ಮರಿಯಮ್ಮ ದೇವಿ ದೇವಸ್ಥಾನ ಧ್ವಂಸಗೊಳಿಸಿರುವುದು ಖಂಡನೀಯ. ಈ ಮೂಲಕ ಶಾಂತಿ ಪ್ರಿಯ ಸಮಾಜದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಾಗಿದೆ. ಕೂಡಲೇ ಮಾದಿಹಾಳ್ ತಾಂಡಾದಲ್ಲೇ ಶ್ರೀ ಸೇವಾಲಾಲ್ ಮತ್ತು ಶ್ರೀ ಮರಿಯಮ್ಮ ದೇವಿ ಮಂದಿರವನ್ನು ಪುನರ್ ನಿರ್ಮಿಸಬೇಕು. ದೇವಾಲಯ ಧ್ವಂಸ ಮಾಡಲು ಆದೇಶಿಸಿದ ಅಧಿಕಾರಿಗಳು, ಕುಮ್ಮಕ್ಕು ನೀಡಿದವರು, ಧ್ವಂಸ ಮಾಡಿದವರ ವಿರುದ್ಧ ಪೆÇಲೀಸರು ಸ್ವಯಂ ದೂರು ದಾಖಲಿಸಿಕೊಂಡು ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದರು.

ಲಂಬಾಣಿ ಸಮುದಾಯದ ಕೃಷಿ ಭೂಮಿ ಕಿತ್ತುಕೊಂಡು ಸ್ಥಾಪಿಸಲಾದ ಕಲ್ಬುರ್ಗಿ ವಿಮಾನ ನಿಲ್ದಾಣಕ್ಕೆ ಶ್ರೀ ಸೇವಾಲಾಲ್ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಬೇಕು. ಭೂಮಿ ಕಳೆದುಕೊಂಡಿರುವ ಲಂಬಾಣಿಗರಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಬಂಜಾರ ಸೇವಾ ಸಂಘದ ಅಧ್ಯಕ್ಷ ಪೆÇ್ರ. ಚಂದ್ರಶೇಖರ್ ಆರ್.ನಾಯಕ, ಅನಿಲ್, ಹೇಮಂತ್‍ಕುಮಾರ್, ತೇಜಾನಾಯ್ಕ್, ಆರ್.ನಾಯಕ್, ಅನಿಲ್ ನಾಯ್ಕ, ಆರ್‍ಬಿಐ ಚಂದ್ರ ನಾಯ್ಕ್, ರಮೇಶ್ ನಾಯ್ಕ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

Translate »