ಮೈಸೂರು: ಮೈಸೂರು ಜಯನಗರದಲ್ಲಿರುವ ಶ್ರೀ ದಕ್ಷಿಣಾಮೂರ್ತಿ ಪೀಠಂನಲ್ಲಿ ಡಿ.12ರಂದು ದತ್ತ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಪೀಠಾಧ್ಯಕ್ಷರಾದ ಶ್ರೀ ಚಿನ್ಮಯಾನಂದ ಸರಸ್ವತಿ ಸ್ವಾಮೀಜಿಗಳ ಸಾನಿಧ್ಯದಲ್ಲಿ ಡಿ.11ರಂದು ಪ್ರಾತಃಕಾಲ ಕಾಕಡಾರತಿ, ಅಭಿಷೇಕ, ಪೂಜೆ ನಡೆಯಲಿದ್ದು, ಸಂಜೆ ಸಾಗರ್ ಚಕ್ರವರ್ತಿ ಅವರಿಂದ ಸಂಗೀತ ಕಾರ್ಯಕ್ರಮವಿದೆ. ಡಿ.12ರಂದು ಪ್ರಾತಃಕಾಲ 3.30ಕ್ಕೆ ಕಾಕಡಾರತಿ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಷೋಡಶೋ ಪಚಾರ ಪೂಜೆ ಮತ್ತು ದತ್ತ ಪಾದುಕೆಗೆ ಕೇಸರಿ ಲೇಪನ, ದತ್ತ ನಾಮಸ್ಮರಣೆ ನಡೆಯಲಿದೆ. ನಂತರ ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ಹಾಗೂ ಮಹಾಪ್ರಸಾದ ವಿನಿಯೋಗವಿದ್ದು, ಸಂಜೆ ಶ್ರೀ ದತ್ತ ದಿಗಂಬರ ನಾಮಸ್ಮರಣೆ ಹಾಗೂ ಅಷ್ಠಾವಧಾನ ಸೇವೆ, ಮಹಾಮಂಗಳಾರತಿ ಹಮ್ಮಿ ಕೊಳ್ಳಲಾಗಿದೆ ಎಂದು ಪೀಠಂನ ವ್ಯವಸ್ಥಾಪಕಿ ಶ್ರೀಮತಿ ಶೃತಿ ಅರುಣ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9480166072 ಸಂಪರ್ಕಿಸಬಹುದು.