ಲವ್ ಜಿಹಾದ್, ಗೋಹತ್ಯೆ ನಿಷೇಧ ಸೇರಿದಂತೆ ಹಿಂದುತ್ವ ಕಾಯ್ದೆಗಳ ಜಾರಿ ನಿರ್ಣಯಕ್ಕೆ ಸಿದ್ಧತೆ
ಮೈಸೂರು

ಲವ್ ಜಿಹಾದ್, ಗೋಹತ್ಯೆ ನಿಷೇಧ ಸೇರಿದಂತೆ ಹಿಂದುತ್ವ ಕಾಯ್ದೆಗಳ ಜಾರಿ ನಿರ್ಣಯಕ್ಕೆ ಸಿದ್ಧತೆ

December 4, 2020

ಬೆಂಗಳೂರು, ಡಿ.3(ಕೆಎಂಶಿ)-ಲವ್ ಜಿಹಾದ್ ಹಾಗೂ ಗೋ ಹತ್ಯೆ ನಿಷೇಧ ಸೇರಿದಂತೆ ಕೆಲವು ಹಿಂದುತ್ವ ಕಾಯ್ದೆಗಳನ್ನು ಅನುಷ್ಠಾನ ಗೊಳಿಸುವ ಸಂಬಂಧ ಬೆಳಗಾವಿಯಲ್ಲಿ ಜರುಗಲಿರುವ ಬಿಜೆಪಿಯ ರಾಜ್ಯ ಕಾರ್ಯಕಾರಿ ಸಮಿತಿಯಲ್ಲಿ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತಿದೆ. ಪಕ್ಷ ಕೈಗೊಂಡ ತೀರ್ಮಾನಗಳನ್ನು ಚಳಿಗಾಲದ ಅಧಿವೇಶನದಲ್ಲೇ ಕಾನೂನು ರೂಪದಲ್ಲಿ ಜಾರಿಗೆ ತರುವುದು, ಅದು ಸಾಧ್ಯವಾಗದಿದ್ದರೆ, ಅಧಿವೇಶನ ಮುಗಿದ ನಂತರ ಸುಗ್ರೀವಾಜ್ಞೆ ಮೂಲಕ ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಕಾರ್ಯಕಾರಿಣಿ ಸೂಚಿಸಲಿದೆ.

ಮುಂಬರುವ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಸಜ್ಜು ಗೊಳ್ಳಬೇಕು, ಹಿಂದುತ್ವವನ್ನೇ ಮುಂದಿಟ್ಟುಕೊಂಡು, ಚುನಾವಣೆ ಎದುರಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲು ಕಾರ್ಯಕಾರಿಣಿ ಯಲ್ಲಿ ಕೆಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಿದೆ.

ಆರ್‍ಎಸ್‍ಎಸ್ ಕಾರ್ಯಸೂಚಿಯಂತೆ ಸಭೆ ನಡೆಯಲಿದ್ದು, ಸಭೆಯಲ್ಲಿ ಪಕ್ಷ ಸಂಘಟನೆಗೆ ಒತ್ತುಕೊಡುವುದಲ್ಲದೆ, ಪ್ರಸ್ತುತ ಎದುರಾಗುತ್ತಿರುವ ಪಂಚಾಯತ್ ಚುನಾವಣೆಗಳಲ್ಲಿ ಪಕ್ಷವನ್ನು ಬೇರು ಮಟ್ಟದಲ್ಲಿ ಬೆಳೆಸಲು ಸಲಹೆ ಸೂಚನೆಗಳು ಬರಲಿವೆ.

ಹೊಸದಾಗಿ ರಾಜ್ಯದ ಉಸ್ತುವಾರಿ ವಹಿಸಿಕೊಂಡಿರುವ ಅರುಣ್ ಸಿಂಗ್, ಮೊದಲ ಬಾರಿಗೆ ರಾಜ್ಯಕ್ಕೆ ಬರುತ್ತಿದ್ದಾರೆ. ಅವರ ಸಮ್ಮುಖ ದಲ್ಲೇ ಈ ಎಲ್ಲಾ ನಿರ್ಣಯ ಕೈಗೊಳ್ಳಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇದಲ್ಲದೆ, ಮೇಲ್ಜಾತಿಯ ಜೊತೆಗೆ ಸಣ್ಣಪುಟ್ಟ ಜಾತಿಗಳನ್ನು ಪಕ್ಷದ ಹಿಡಿತಕ್ಕೆ ತೆಗೆದುಕೊಳ್ಳಲು ಕೆಲವು ಕಾರ್ಯ ಕ್ರಮಗಳನ್ನು ರೂಪಿಸುವಂತೆ ಸರ್ಕಾರಕ್ಕೆ ಕಾರ್ಯಕಾರಿಣಿ ನಿರ್ದೇ ಶನ ಮಾಡಲಿದೆ. ನಳೀನ್‍ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾದ ನಂತರ ದೊಡ್ಡ ಸಭೆ ನಡೆಯುತ್ತಿದ್ದು, ಇದಕ್ಕಾಗಿ ಕಾರ್ಯಕಾರಿಣಿಗೆ 14 ಸದಸ್ಯರನ್ನು ನೇಮಕ ಮಾಡಿದ್ದಾರೆ. ಈ ಸಭೆಯಲ್ಲೇ ವೀರಶೈವ-ಲಿಂಗಾಯತ ಸಮಾಜ ಸೇರಿದಂತೆ ಕೆಲವು ಸಮಾಜಗಳನ್ನು ಹಿಂದು ಳಿದ ವರ್ಗಕ್ಕೆ ಸೇರಿಸುವ ಸಂಬಂಧ ಚರ್ಚೆಯಾಗಲಿದೆ. ಅರುಣ್ ಸಿಂಗ್ 3 ದಿನಗಳ ಕಾಲ ರಾಜ್ಯ ಪ್ರವಾಸದಲ್ಲಿದ್ದು, ಈ ಸಂದರ್ಭ ದಲ್ಲೇ ಪಕ್ಷದಲ್ಲಿ ಎದುರಾಗಿರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿ ಸಲು ಮುಂದಾಗಲಿದ್ದಾರೆ. ಅಲ್ಲದೆ, ರಾಜ್ಯದ ಪ್ರಮುಖ ನಾಯಕ ರೊಟ್ಟಿಗೆ ಅರುಣ್‍ಸಿಂಗ್ ಪ್ರತ್ಯೇಕವಾಗಿ ಮುಖಾಮುಖಿ ಚರ್ಚೆ ನಡೆಸಲು ರಾಜ್ಯಾಧ್ಯಕ್ಷರು ವೇದಿಕೆ ಸಿದ್ಧ ಮಾಡಿದ್ದಾರೆ. ಒಂದೆಡೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ, ಮತ್ತೊಂದೆಡೆ ಸಂಪುಟ ವಿಸ್ತರಣೆ ಸಂಬಂಧ ಗೊಂದಲಗಳಿವೆ. ಈ ಗೊಂದಲಗಳಿಗೂ ಅರುಣ್ ಸಿಂಗ್ ತೆರೆಯೆಳೆಯಲಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಜರುಗಲಿದೆ. ಅದನ್ನು ಗಮನದಲ್ಲಿಟ್ಟುಕೊಂಡೇ ಪಕ್ಷವನ್ನು ಮತ್ತಷ್ಟು ಸಂಘಟಿಸುವ ಉದ್ದೇಶದಿಂದ ಬೆಳಗಾವಿ ಜಿಲ್ಲಾ ಕೇಂದ್ರದಲ್ಲೇ ಈ ಕಾರ್ಯಕಾರಿಣಿ ನಡೆಯುತ್ತಿದೆ.

Translate »