ಜಿಲ್ಲೆಯೆಲ್ಲೆಡೆ ರಂಜಾನ್ ಸಡಗರ, ಸಾಮೂಹಿಕ ಪ್ರಾರ್ಥನೆ
ಹಾಸನ

ಜಿಲ್ಲೆಯೆಲ್ಲೆಡೆ ರಂಜಾನ್ ಸಡಗರ, ಸಾಮೂಹಿಕ ಪ್ರಾರ್ಥನೆ

June 17, 2018

ಹಾಸನ: ನಗರ ಸೇರಿದಂತೆ ಜಿಲ್ಲೆಯಲ್ಲೆಡೆ ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ರಂಜಾನ್ ಆಚರಿಸಿದರು.
ಹಾಸನ ನಗರ: ರಂಜಾನ್ ಅಂಗವಾಗಿ ನಗರದ ಹುಣಸಿನಕೆರೆ ಬಳಿ ಇರುವ ಹೊಸ ಈದ್ಗಾ ಮೈದಾನದಲ್ಲಿ ಸಾವಿರಾರು ಜನ ಮುಸ್ಲಿಂ ಬಾಂಧವರು ಒಟ್ಟಾಗಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಕಳೆದ 1ತಿಂಗಳಿನಿಂದ ಶ್ರದ್ಧಾ-ಭಕ್ತಿಯಿಂದ ಉಪವಾಸದಲ್ಲಿದ್ದು ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ದಿನದಂದು ಹೊಸ ಬಟ್ಟೆ ಧರಿಸಿ ಸಡಗರದಿಂದ ಪಾಲ್ಗೊಂಡು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಪ್ರಾರ್ಥನೆ ಹಿನ್ನೆಲೆ ಹೊಸ ಈದ್ಗಾ ಮೈದಾನ ಅಪಾರ ಜನಸಂಖ್ಯೆಯಿಂದ ತುಂಬಿ ಹೋಗಿತ್ತು. ಈ ಸಂದರ್ಭದಲ್ಲಿ ಆಗಮಿಸಿದ ವಿವಿಧ ಗಣ್ಯರು ಮುಸ್ಲಿಂ ಬಾಂಧವರಿಗೆ ಶುಭ ಕೋರಿದರು. ಮುನ್ನೆ ಚರಿಕಾ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ಅರಸೀಕೆರೆ ವರದಿ: ನಗರದಲ್ಲೂ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಶ್ರದ್ಧಾ-ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ದರು. ಹುಳಿಯಾರು ರಸ್ತೆಯ ಜಾಮೀಯ ಮಸೀದಿಯಿಂದ ಪ್ರಾರಂಭವಾದ ಮೆರ ವಣ ಗೆ ಪೇಟೆ ಬೀದಿ ಮತ್ತು ಬಿಹೆಚ್ ರಸ್ತೆ ಮಾರ್ಗವಾಗಿ ಶ್ರೀನಿವಾಸ ನಗರದಲ್ಲಿ ರುವ ಪ್ರಾರ್ಥನಾ ಸ್ಥಳವನ್ನು ತಲುಪಿತು. ಈ ಸಂದರ್ಭದಲ್ಲಿ ಶಾಸಕ ಕೆ.ಎಂ.ಶಿವಲಿಂಗೇ ಗೌಡ, ನಗರಸಭೆ ಅಧ್ಯಕ್ಷ ಶಮೀವುಲ್ಲಾ, ತಹಶೀಲ್ದಾರ್ ಎನ್.ವಿ.ನಟೇಶ್ ಸೇರಿದಂತೆ ವಿವಿಧ ಗಣ್ಯರು ಮುಸ್ಲಿಂ ಬಾಂಧವರಿಗೆ ಶುಭ ಹಾರೈಸಿದರು. ಮುಸ್ಲಿಂ ಜಮಾತೆ ಕಮಿಟಿ ಅಧ್ಯಕ್ಷ ಎನ್.ಯೂ.ಸರ್ದಾರ್, ಮಾಜಿ ಅಧ್ಯಕ್ಷ ಜಮೀಲ್ ಆಹ್ಮದ್, ಮಸೀದಿ ಇಮಾಮ್ ಮೌಲಾನಾ ಮುನೀಬ್ ಇನ್ನಿತರರಿದ್ದರು.

ಚನ್ನರಾಯಪಟ್ಟಣ ವರದಿ: ಪಟ್ಟಣದ ಸಮಸ್ತ ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ಪ್ರಯುಕ್ತ ಪಟ್ಟಣದ ಬಾಗೂರು ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪುರಸಭಾ ಸದಸ್ಯ ಅನ್ಸರ್ ಬೇಗ್, ಮಸ್ತಾನ್ ಸಾಬ್ ಇತರರು ಭಾಗವಹಿಸಿದ್ದರು.

ಶ್ರವಣಬೆಳಗೊಳ ವರದಿ: ಹೋಬಳಿಯ ರಾಚೇನಹಳ್ಳಿ ಬಳಿ ಇರುವ ಈದ್ಗಾ ಮೈದಾನ ದಲ್ಲಿ ರಂಜಾನ್ ಪ್ರಯುಕ್ತ ಮಸ್ಲಿಂ ಬಾಂಧ ವರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ ಹಬ್ಬ ಆಚರಿಸಿದರು. ಪಟ್ಟಣದ ಕಾರ್ಪೋ ರೇಷನ್ ಬಳಿ ಆಗಮಿಸಿದ ಶಾಸಕ ಸಿ.ಎನ್. ಬಾಲಕೃಷ್ಣ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿ ಮೈಸೂರು ಪೇಟ, ಹಾರ ಹಾಕಿ ಸನ್ಮಾನಿಸಲಾಯಿತು. ಇದೇ ವೇಳೆ ಮಾತನಾಡಿದ ಶಾಸಕರು, ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಧರ್ಮಗುರು ಅಜರತ್ ಅಜ್ಗರ್, ಜಾಮೀಯ ಮಸೀದಿ ಅಧ್ಯಕ್ಷ ಅಬ್ದುಲ್ ನಫೀಜ್, ಆಫ್ತಾಬ್(ಅಬ್ಬು), ಮಾಜಿ ತಾಪಂ ಉಪಾಧ್ಯಕ್ಷ ಎಸ್.ಬಿ.ಜಗ ದೀಶ್, ಪರಮಕೃಷ್ಣೇಗೌಡ, ಹಫೀಕ್ ಹಾಗೂ ಮುಂತಾದವರಿದ್ದರು.

ರಾಮನಾಥಪುರ ವರದಿ: ಪಟ್ಟಣದ ಮುಸ್ಲಿಂ ಜಾಮೀಯ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಭಕ್ತಿ ಪ್ರಾರ್ಥನೆ ಸಲ್ಲಿಸಿದರು. ಮುಸ್ಲಿಂ ಜಾಮಿಯಾ ಮಸೀದಿ ಗುರು ಶಾಖಿರ್ ಪ್ರವಚನ ನೀಡಿದರು. ಮುಸ್ಲಿಂ ಜಾಮಿಯಾ ಮಸೀದಿ ಅಧ್ಯಕ್ಷ ಮುನವರ್, ಪ್ರಧಾನ ಕಾರ್ಯದರ್ಶಿ ಸಾದಿಕ್‍ಸಾಬ್, ಖಜಾಂಚಿ ಪೀರ್‍ಸಾಬ್, ಖಲೀಲ್, ಮಹಮದ್, ಅಮಾನುಲ್ಲಾ, ಅಶ್ವಾಕ್, ತನ್ವೀರ್, ನಜೀರ್, ಬಾಬು, ಅಬು, ಕಲೀಲ್, ಯಾಸಿನ್, ಸೀಯುಲ್, ನೀಸಾರ್, ರಸುಲ್, ಜಾಫÀರ್, ಡೇಲು, ರಫೀಕ್, ಅತೀಕ್, ಜಮೀರ್ ಮುಂತಾದವರಿದ್ದರು.

Translate »