ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಾ ಪುರಸ್ಕಾರ, ಶಾಸಕ ರಾಮದಾಸರಿಗೆ ಸನ್ಮಾನ
ಮೈಸೂರು

ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಾ ಪುರಸ್ಕಾರ, ಶಾಸಕ ರಾಮದಾಸರಿಗೆ ಸನ್ಮಾನ

June 17, 2018

ಮೈಸೂರು: ಕುವೆಂಪುನಗರದ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ಎಸ್‍ಎಸ್‍ಎಲ್‍ಸಿ-ಪಿಯುಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದ ರೊಂದಿಗೆ ಶಾಸಕ ಎಸ್.ಎ.ರಾಮದಾಸ್ ಹಾಗೂ ಅಧಿಕಾರಿ ವರ್ಗವನ್ನು ಶನಿವಾರ ಸನ್ಮಾನಿಸಲಾಯಿತು. ವಿಪ್ರ ನೌಕರರ ಕ್ಷೇಮಾ ಭಿವೃದ್ಧಿ ಸಂಘ ಮೈಸೂರು ತಾಲೂಕು ಮತ್ತು ನಗರ ವತಿಯಿಂದ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಶಾಸಕ ಎಸ್.ಎ.ರಾಮದಾಸ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಿವರಾಜ್, ಗಂಗಾಧರ್, ಕೃಷ್ಣಮೂರ್ತಿ, ಮೈಸೂರು ವಿ.ವಿ.ಪ್ರಭಾರಿ ಕುಲಪತಿ ಟಿ.ಕೆ.ಉಮೇಶ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ದಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಕೀರ್ತನಾ, ಪ್ರಜ್ವಲ್, ಜಯಂತ್ ಕೆ.ಅಯ್ಯಂಗಾರ್, ಎನ್.ವಿ.ವರ್ಷಾ, ಎಂ.ಆರ್. ಸ್ಕಂದಾ ಭಾರದ್ವಾಜ್, ಅಭಿರಾಂ, ಸೃಜನ್ ಭಾರದ್ವಾಜ್. ಪಿಯುಸಿಯಲ್ಲಿ ಎಸ್.ವಿದ್ಯಾ, ಎಂ.ಹರ್ಷಿತಾ, ಬಿ.ಆರ್.ಯಶವಂತ್, ಹೆಚ್.ರೋಹನ್, ಎನ್.ರಕ್ಷಿತಾ, ಜೆ.ಕೆ. ಸುಮನ್, ಶಶಾಂಕ್ ಎಂ.ಶರ್ಮಾ ಅವರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.

ಅಖಿಲ ಕರ್ನಾಟಕ ಬ್ರಾಹ್ಮಣ ಸಭಾ ಮೈಸೂರು ಘಟಕದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, ತ್ರಿಮತಸ್ಥರಲ್ಲಿ ಒಡಕಾಗ ಬಾರದು. ಎಲ್ಲರೂ ಒಂದಾಗಬೇಕು. ಆ ಮೂಲಕ ಸಂಘಟನೆ ಬೆಳೆಸಬೇಕಾಗಿದೆ. ಈಗಾಗಲೇ ಸಂಘಟನೆಯಲ್ಲಿ ಬಲವಿದೆ ಎಂಬುದನ್ನು ವಿಧಾನಸಭಾ ಚುನಾವಣೆ ಯಲ್ಲಿ ತೋರಿಸಿದ್ದೇವೆ ಎಂದ ಅವರು, ಸಂಘಟನೆ ಸ್ವಾರ್ಥ ಉದ್ದೇಶಕ್ಕಾಗಿ ಅಲ್ಲ. ಸಮುದಾಯದ ಅವ ಕಾಶ ವಂಚಿತರನ್ನು ಗುರುತಿಸಿ ಸೌಲಭ್ಯ ದೊರಕಿಸಿಕೊಡಲು ಸಂಘಟನೆ ಅಗತ್ಯ ಎಂದರು. ಸಂಘದ ಅಧ್ಯಕ್ಷ ಜಿ.ವಿ.ನಾಗೇಶ್, ಪ್ರಧಾನ ಕಾರ್ಯ ದರ್ಶಿ ವಿ.ವೆಂಕಟೇಶ್ ಸೇರಿದಂತೆ ಮತ್ತಿತ ರರು ಉಪಸ್ಥಿತರಿದ್ದರು.

Translate »