ತನ್ವೀರ್ ಸೇಠ್‍ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ
ಮೈಸೂರು

ತನ್ವೀರ್ ಸೇಠ್‍ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ

June 17, 2018

ಮೈಸೂರು: ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರಿಗೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಕರ್ನಾಟಕ ದಲಿತ ಪ್ಲಾಂಥರ್ಸ್ ಅಧ್ಯಕ್ಷ ಜಾವಾ ಸಿದ್ದರಾಜು, ಮೈಸೂರು ನಗರ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಂಟಿ ಕಾರ್ಯದರ್ಶಿ ರವಿ, ಗಾಂಧಿನಗರದ ಜೆ.ಎಂ.ರಂಗ ಸ್ವಾಮಿ ಮತ್ತು ಶಿವಣ್ಣ ಆಗ್ರಹಿಸಿದ್ದಾರೆ. ಸೋಲಿಲ್ಲದ ಸರದಾರರಾಗಿರುವ ತನ್ವೀರ್ ಸೇಠ್ ಶಾಸಕರಾಗಿ, ಸಚಿವರಾಗಿ ಕ್ಷೇತ್ರದ ದೀನ-ದಲಿತರಿಗಾಗಿ ಅನೇಕ ಸೌಲಭ್ಯಗಳನ್ನು ಒದಗಿಸಿ ಜನಾನುರಾಗಿಯಾಗಿದ್ದಾರೆ. ಆದ್ದರಿಂದ ಅವರಿಗೆ ಸಚಿವ ಸ್ಥಾನ ನೀಡಬೇ ಕೆಂದು ಆಗ್ರಹಿಸಿರುವ ಅವರು, ಇಲ್ಲದಿದ್ದರೆ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.

Translate »