ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ
ಕೊಡಗು

ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

June 17, 2018

ವಿರಾಜಪೇಟೆ: ಬಂದೂಕಿನಿಂದ ಗುಂಡು ಹೊಡೆದುಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಕುಕ್ಲೂರು ಗ್ರಾಮದಲ್ಲಿ ನಡೆದಿದೆ.

ವಿರಾಜಪೇಟೆ ಬಳಿಯ ಕುಕ್ಲೂರು ಗ್ರಾಮದ ಮಾಳೇಟಿರ ಎಸ್.ಕರುಂಬಯ್ಯ (38) ಶನಿವಾರ ಬೆಳಿಗ್ಗೆ 5.30 ಗಂಟೆಗೆ ಮನೆಯಲ್ಲಿ ತಾಯಿಯ ಬಳಿ ನೀರು ಕೇಳಿ ಕುಡಿದು ಬಳಿಕ ತಮ್ಮ ಬಂದೂಕಿನಿಂದ ಕುತ್ತಿಗೆ ಭಾಗಕ್ಕೆ ಗುಂಡು ಹೊಡೆದು ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಮೃತ ಕರುಂಬಯ್ಯ ಅವರು ಅವಿವಾಹಿತ ರಾಗಿದ್ದು ಕೆಲವು ದಿನಗಳಿಂದ ಅನಾರೋಗ್ಯ ದಿಂದ ಬಳಲುತ್ತಿದ್ದರೆಂದು ಮೃತರ ತಾಯಿ ನಗರ ಠಾಣೆಗೆ ನೀಡಿದ ದೂರನ್ನಾದರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ಮೃತ ದೇಹವನ್ನು ವಾರಿಸುದಾರರಿಗೆ ಒಪ್ಪಿಸಿದ್ದಾರೆ.

Translate »