ಮಡಿಕೇರಿಯಲ್ಲಿ ಲಾರಿ ಚಕ್ರ ಕಳವು
ಕೊಡಗು

ಮಡಿಕೇರಿಯಲ್ಲಿ ಲಾರಿ ಚಕ್ರ ಕಳವು

June 17, 2018

ಮಡಿಕೇರಿ: ರಸ್ತೆ ಬದಿ ನಿಲ್ಲಿಸಿದ್ದ ಲಾರಿ ಯೊಂದರ 3 ಚಕ್ರಗಳನ್ನು ಕಳವು ಮಾಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ನಗರದ ಉದ್ಯಮಿಯೊಬ್ಬರು ತಮ್ಮ ಟಿಪ್ಪರ್ ಲಾರಿಗಳನ್ನು ಮಂಗಳೂರು ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದರು.

ಕಳೆದ 4 ದಿನಗಳು ಹಿಂದೆ ಈ ಲಾರಿಯ 2 ಬ್ಯಾಟರಿಗಳನ್ನು ಕಳ್ಳರು ಕಳವು ಮಾಡಿದ್ದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಲಾಗಿತ್ತು. ಆದರೆ ರಾತ್ರಿ ಸುರಿಯುವ ಭಾರಿ ಮಳೆಯ ಲಾಭ ಪಡೆದ ಕಳ್ಳರು, ಸಿ.ಸಿ.ಕ್ಯಾಮರಾವನ್ನು ಕಿತ್ತೆಸೆದು ಲಾರಿಯ ಚಕ್ರಗಳನ್ನು ಕಳವು ಮಾಡಿರುವುದು ಕಂಡು ಬಂದಿದೆ. ಮಾತ್ರವಲ್ಲದೆ ಸ್ಥಳದಲ್ಲಿದ್ದ ಇತರ 2 ಲಾರಿಯ ಡೀಸಲ್ ಟ್ಯಾಂಕ್‍ನ ಮುಚ್ಚಳ ಕಿತ್ತೆಸೆದು ಡೀಸಲ್‍ಗೆ ಶೋಧ ನಡೆಸಿರುವುದು ಕಂಡು ಬಂದಿದೆ. ಈ ಪ್ರಕರಣದ ಕುರಿತು ಲಾರಿ ಮಾಲೀಕ ಶರೀನ್, ನಗರ ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸಿದ್ದಾರೆ.

Translate »