ಮುಸ್ಲಿಂ ಬಾಂಧವರಿಂದ ರಂಜಾನ್ ಆಚರಣೆ
ಕೊಡಗು

ಮುಸ್ಲಿಂ ಬಾಂಧವರಿಂದ ರಂಜಾನ್ ಆಚರಣೆ

June 17, 2018

ಮಡಿಕೇರಿ: ನಗರದ ಮಹದೇವಪೇಟೆಯಲ್ಲಿರುವ ಜಾಮಿಯಾ ಮಸೀದಿಯಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ನೆರವೇರಿತು. ಬಳಿಕ ರಾಣಿಪೇಟೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಹಬ್ಬದ ವೃತದಾರಿಗಳು ಪ್ರಾರ್ಥನೆಯ ಬಳಿಕ ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಮಡಿಕೇರಿಯ ಹಿಲ್‍ರಸ್ತೆಯ ಅಹ್ಮದಿಯಾ ಮುಸ್ಲಿಂ ಜಮಾಅತ್ ಮಸೀದಿಯಲ್ಲಿ ‘ಈದುಲ್ ಫಿತರ್’ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಮಸೀದಿಯ ಧರ್ಮ ಗುರುಗಳಾದ ಹಾಫಿಝ್ ರಫೀಕ್ ಉಜ್ಜಮಾ ಅವರ ನೇತೃತ್ವದಲ್ಲಿ ತಕ್ಬೀರ್, ವಿಶೇಷ ನಮಾಝ್ ನಿರ್ವಹಿಸಿದ ಬಳಿಕ ಧಾರ್ಮಿಕ ಪ್ರವಚನ ನೀಡಲಾಯಿತು. ಜಮಾಅತ್‍ನ ಅಧ್ಯಕ್ಷರಾದ ಎಂ.ಬಿ.ಝಹೀರ್ ಅಹ್ಮದ್ ಅವರು ವಿಶೇಷ ನಮಾಝ್ ಬಗ್ಗೆ ಮಾಹಿತಿ ನೀಡಿದರು.

Translate »