ಕುಂಬಾರಕೊಪ್ಪಲಲ್ಲಿ ಹೈಟೆಕ್ ಬಸ್ ನಿಲ್ದಾಣ
ಮೈಸೂರು

ಕುಂಬಾರಕೊಪ್ಪಲಲ್ಲಿ ಹೈಟೆಕ್ ಬಸ್ ನಿಲ್ದಾಣ

December 22, 2020

ಮೈಸೂರು,ಡಿ.21(ಆರ್‍ಕೆ)- ಮೈಸೂ ರಿನ ಕುಂಬಾರಕೊಪ್ಪಲಿನ ಪ್ರವೇಶದಲ್ಲೇ ನಿರ್ಮಿಸಲುದ್ದೇಶಿಸಿರುವ ಹೈಟೆಕ್ ಬಸ್ ನಿಲ್ದಾಣಕ್ಕೆ ಶಾಸಕ ಎಲ್.ನಾಗೇಂದ್ರ, ಇಂದು ಗುದ್ದಲಿ ಪೂಜೆ ನೆರವೇರಿಸಿದರು.

ಮೈಸೂರು ಮಹಾನಗರ ಪಾಲಿಕೆಯ ರಾಜ್ಯ ಹಣಕಾಸು ಆಯೋಗ(ಎಸ್‍ಎಫ್‍ಸಿ)ದ 35 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲುದ್ದೇಶಿಸಿ ರುವ ಹೈಟೆಕ್ ಬಸ್ ನಿಲ್ದಾಣದಲ್ಲಿ ಎರಡು ವಾಣಿಜ್ಯ ಮಳಿಗೆಗಳು, ಕೆಎಸ್‍ಆರ್‍ಟಿಸಿ ಅಧಿ ಕಾರಿಗಳಿಗೆ ಸುಸಜ್ಜಿತ ಕಚೇರಿ ಕೊಠಡಿ, ಬಸ್ ನಿಲುಗಡೆಗೆ ಅವಕಾಶ ಹಾಗೂ ಮೊದಲ ಮಹಡಿಯಲ್ಲಿ ವಿಶಾಲ ಸಭಾಂಗಣ ನಿರ್ಮಿಸಲಿದ್ದು, ಆ ಜಾಗವನ್ನು ಯಾವ ಉದ್ದೇಶಕ್ಕೆ ಬಳಸಿಕೊಳ್ಳಬೇಕೆಂಬುದನ್ನು ಮುಂದೆ ನಿರ್ಧರಿಸಲಾಗುವುದು.

60×40 ಅಡಿ ಅಳತೆ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಹೈಟೆಕ್ ಮಾದರಿಯ ಬಸ್ ತಂಗುದಾಣ ಕಾಮಗಾರಿಯನ್ನು ಮೈಸೂರು ಮಹಾನಗರ ಪಾಲಿಕೆ ಕೈಗೆತ್ತಿ ಕೊಂಡಿದ್ದು, ಮೂರ್ನಾಲ್ಕು ತಿಂಗಳಿನಲ್ಲಿ ಪೂರ್ಣಗೊಳಿಸಲಿದೆ ಎಂದು ತಿಳಿಸಿದರು.

ನಗರ ಸಾರಿಗೆ ಬಸ್ಸುಗಳು ನಿಲ್ಲಲು ಅನು ಕೂಲವಾಗುವಂತೆ ಹೈಟೆಕ್ ಮಾದರಿಯ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ನಿರ್ಮಿಸುತ್ತಿ ರುವುದು ಮೈಸೂರು ನಗರದಲ್ಲಿ ಇದೇ ಮೊದಲು. ಕುಂಬಾರಕೊಪ್ಪಲು ಮತ್ತು ಸುತ್ತಲಿನ ಭಾಗದ ಪ್ರಯಾಣಿಕರಿಗೆ ಇದು ಉಪಯೋಗವಾಗಲಿದೆ ಎಂದರು. ಕಾರ್ಪೊ ರೇಟರ್ ಉಷಾ ಕುಮಾರ್, ಪಾಲಿಕೆ ವಲಯ ಕಚೇರಿ-5ರ ವಲಯಾಧಿಕಾರಿ ಕೃಷ್ಣ, ಅಭಿ ವೃದ್ಧಿ ಅಧಿಕಾರಿ ಮನುಗೌಡ, ಅಸಿಸ್ಟೆಂಟ್ ಇಂಜಿನಿಯರ್ ಅಭಿಲಾಶ್, ಕೆಎಸ್‍ಆರ್‍ಟಿಸಿ ನಗರ ಘಟಕದ ಡೆಪ್ಯೂಟಿ ಟ್ರಾಫಿಕ್ ಆಫೀ ಸರ್ ಮರೀಗೌಡ, ಲೋಕೋಪಯೋಗಿ ಇಲಾಖೆ ಅಸಿಸ್ಟೆಂಟ್ ಇಂಜಿನಿಯರ್ ವರುಣ್ ಕುಮಾರ್ ಸೇರಿದಂತೆ ಹಲವರು ಈ ಸಂದರ್ಭ ಉಪಸ್ಥಿತರಿದ್ದರು.

Translate »