ಮೈಸೂರು,ಡಿ.21(ಆರ್‍ಕೆ)- ಮೈಸೂ ರಿನ ಕುಂಬಾರಕೊಪ್ಪಲಿನ ಪ್ರವೇಶದಲ್ಲೇ ನಿರ್ಮಿಸಲುದ್ದೇಶಿಸಿರುವ ಹೈಟೆಕ್ ಬಸ್ ನಿಲ್ದಾಣಕ್ಕೆ ಶಾಸಕ ಎಲ್.ನಾಗೇಂದ್ರ, ಇಂದು ಗುದ್ದಲಿ ಪೂಜೆ ನೆರವೇರಿಸಿದರು. ಮೈಸೂರು ಮಹಾನಗರ ಪಾಲಿಕೆಯ ರಾಜ್ಯ ಹಣಕಾಸು ಆಯೋಗ(ಎಸ್‍ಎಫ್‍ಸಿ)ದ 35 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲುದ್ದೇಶಿಸಿ ರುವ ಹೈಟೆಕ್ ಬಸ್ ನಿಲ್ದಾಣದಲ್ಲಿ ಎರಡು ವಾಣಿಜ್ಯ ಮಳಿಗೆಗಳು, ಕೆಎಸ್‍ಆರ್‍ಟಿಸಿ ಅಧಿ ಕಾರಿಗಳಿಗೆ ಸುಸಜ್ಜಿತ ಕಚೇರಿ ಕೊಠಡಿ, ಬಸ್ ನಿಲುಗಡೆಗೆ ಅವಕಾಶ ಹಾಗೂ ಮೊದಲ ಮಹಡಿಯಲ್ಲಿ ವಿಶಾಲ ಸಭಾಂಗಣ ನಿರ್ಮಿಸಲಿದ್ದು, ಆ ಜಾಗವನ್ನು ಯಾವ ಉದ್ದೇಶಕ್ಕೆ ಬಳಸಿಕೊಳ್ಳಬೇಕೆಂಬುದನ್ನು ಮುಂದೆ ನಿರ್ಧರಿಸಲಾಗುವುದು….